ಅವರ ಮನೆಯಲ್ಲಿ
ಮೊಗಸಾಲೆ, ಹಜಾರ,
ಕೋಣೆ ಎಲ್ಲೆಡೆ
ನೆಲ ಸ್ಪಂಜ್‌ನಂತೆ
ರತ್ನ ಕಂಬಳಿ.
ನಮ್ಮ ಮನೆಯಲ್ಲಿ
ಸ್ನಾನದ ಮನೆ
ಶೌಚಾಲಯದಲ್ಲಿ ಕೂಡ
ನೆಲ ಸ್ಪಂಜ್‌ನಂತೆ
ಪಾಚಿಯೋ ಪಾಚಿ!
*****