ಹೆಣ್ಣ ಹೆತ್ತವರು
ನಾವು ಲೇಖಕರು.
ನಮ್ಮ ಮಕ್ಕಳು
ಕಾವ್ಯ, ಕವಿತಾ
ನವ್ಯಾ, ರೂಪಕಾ
ಏಕಾಂಕಿ, ಕಾದಂಬರಿ.
ಬೇಕಾಗಿವೆ ಇವರಿಗೆಲ್ಲ
ಕೈ ಹಿಡಿದು ಸಾಕಬಲ್ಲ
ಬಾಳ ಬೆಳಗಬಲ್ಲ
ಸಂಪಾದಕ, ಪ್ರಕಾಶಕ
ಗಂಡುಗಳು.
*****