ಕಾಯುವುದೊಂದು ಕಾಯಕ
ಹಾಲು ಕಾಯುವುದು
ಊಟಕ್ಕೆ ಕಾಯುವುದು
ಬಸ್ಸಿಗಾಗಿ ಕಾಯುವುದು
ಹಣ ದೊರೆಯುವುದೆಂದು
ಚಳಿ ಬೇಗ ಮುಗಿಯಲೆಂದು
ಮಳೆ ಚೆನ್ನಾಗಿ ಸುಲಿಯಲೆಂದು
ಕೊನೆಗೆ ಅವರಿವರನ್ನು ಕಂಡು
ಮನಸ್ಸಿನಲ್ಲೇ ಕಾದು ಹೋಗುವುದು.
ಇದೆಲ್ಲದಕ್ಕಿಂತ ಚೆನ್ನ
ನಿನ್ನ ಒಂದು ಪತ್ರಕ್ಕಾಗಿ
ಫೋನಿಗಾಗಿ ಕೊನೆಗೊಂದು
ಬ್ಲಾಂಕ್ ಎಸ್ ಎಂ ಎಸ್ ಗಾಗಿ
ಇಲ್ಲವೇ ಒಂದು ಕವಿತೆಗಾಗಿ
ನನ್ನ ಮೇಲಿನ ಕವಿತೆಗಾಗಿ
ಕಾಯುವುದು.
*****


















