ಒಮ್ಮೆ, ಶಿಷ್ಯನೊಬ್ಬ ಗುರುಗಳಲ್ಲಿ ಬಂದು ಪೆಚ್ಚು ಮುಖ ಹಾಕಿಕೊಂಡು ಕುಳಿತ. ಶಿಷ್ಯನ ಮುಖವನ್ನು ನೋಡಿ ಅವನ ಮನದ ಕಲ್ಲೋಲವನ್ನು ಗಮನಿಸಿದ ಗುರುಗಳು- “ಶಿಷ್ಯಾ! ನಿನ್ನ ಕಾಡುತ್ತಿರುವ ವಿಷಯವೇನು?” ಎಂದರು. “ಗುರುಗಳೇ! ವನ ವನ ಸುತ್ತಾಡಿದೆ. ಕಾಡು ಮೇಡು ಅಲೆದಾಡಿದೆ. ಬೆಟ್ಟ ಗುಡ್ಡ ಹತ್ತಿದೆ. ಸಮುದ್ರಯಾನ...

ಪ್ರೀತಿಯ ಗೆಳೆಯಾ, ಕಾರ್‍ತೀಕದ ಕಪ್ಪು ಸಂಜೆಯಲ್ಲಿ ನಮ್ಮೂರ ಎಲ್ಲಾ ಪುರಾತನ ದೇವಾಲಯಗಳಲ್ಲಿ ಹಣತೆ ಹಚ್ಚಿದ್ದಾರೆ. ನಮ್ಮೂರ ಕೋಟೆ ಕೊತ್ತಲಗಳ ಮೇಲೂ ದೀಪಗಳ ಪಣತಿಗಳನ್ನು ಹಚ್ಚಿಡುತ್ತಾರೆ. ಹೊಲದ ತುಂಬೆಲ್ಲಾ ಹಳದಿ ಸೂಸುವ ಸೇವಂತಿಗೆ, ಸೂರ್‍ಯಕಾಂತಿ, ...

ಗೋಳನಂಜಿನ ಗಾಳಿ ಬೀಸೆ, ಬಾಳಿನಬಳ್ಳಿ, ಮುರುಟಿರಲು ಗಾಸಿಗೊಂಡು ಶಾಪದೊಲು ಚಂಡಾಶು ಶಾಂತಿಯನ್ನೇ ತಳ್ಳಿ ತಾಂಡವವ ನಾಡಿತಂದು ಆಸೆಗಳು ಕನಸುಗಳು ಮನದೆಲ್ಲ ಉಸಿರುಗಳು ಹಳೆತು ಕೊಳೆ ಕಹಿಯಾದವು ಬಾಳ ಬೆಳೆಸಲು ಬಗೆದ ಭಾವಗಳು ರಾಗಗಳು ಇರಿವ ಕೂರಲಗಾದವು. ನ...

ರೆಕ್ಕೆಯ ಕುದುರೆಯನೇರಿ, ಹಕ್ಕಿಯ ಹಾದಿಯ ಹಿಡಿದು, ದಿಕ್ಕಿನ ತುದಿಗಿದ್ದ ಚಿಕ್ಕೆಗಳ ನಾಡಿನಲ್ಲಿ – ಮಾತಿನ ಗಿಳಿಯ ದೂತಿಯ ಮಾಡಿ, ಪ್ರೀತಿಯ ರಸದ ಗೀತಿಯ ಹಾಡಿ, ವೇತಾಳರಾಯನಾ ಕೋಟೆಯ ನೋಡಿ – ರಕ್ಕಸರನ್ನು ಕಾದಿ ಕೊಂದು, ಬೊಕ್ಕಸವನ್ನು ...

ಒಬ್ಬ ನಿಷ್ಠಾವಂತ ಸಾಧಕ ಶ್ರಾವಣದ ಭೋರ್ಗರೆವ ಮಳೆಯಲ್ಲಿ ಒಂಟಿ ಕಾಲ ಮೇಲೆ ನಿಂತು ತಪಗೈಯುತ್ತಿದ್ದ. ಧಾರಕಾರ ಮಳೆ ಹುಯ್ಯುತ್ತಿತ್ತು. ಮಳೆಯ ತೀವ್ರತೆ ಚಾವಟಿಯಂತೆ ಥಳಥಳಿಸುತ್ತಿತ್ತು. ಮೇಲೆ ಆಲಿಕಲ್ಲುಗಳು ಉದುರುತ್ತಿದ್ದವು. ಕಾರ್ಮೊಡಗಳು ಒಂದನ್ನೊಂ...

ಮನದ ಮೌನದೊಳರಳ್ವ ಕವನವೆಮ್ಮನು ಮೌನದ ವನ ಕಾನನಕೊಯ್ಯಲು ಬೇಕು ಮನ, ಜನ, ವಾಹನ, ಯಂತ್ರದೊಳೊಂದಷ್ಟು ಮೌನ ಮರಳಿದರಾಗ ಪ್ರಕೃತಿ ಗಾನವೇ ವನ, ಕವನ, ಜೀವನದೊಳಿಕ್ಕು – ವಿಜ್ಞಾನೇಶ್ವರಾ *****...

ತಂಬಟೆಹೊಯಿಲಿಲ್ಲ, ವಾದ್ಯದ ಹಲುಬಿಲ್ಲ, ಹೆಣವ ಕೋಟೆಗೆ ನಾವು ತ್ವರೆಯಲೊಯ್ದಾಗ; ಒಬ್ಬ ಸಿಪಾಯಿಯ ಕಳುಹುವ ಸುರುಟಿಯಿಲ್ಲ, ನಮ್ಮ ನಾಯಕನನು ಹೂಳುತಿದ್ದಾಗ. ಹೂಳಿದೆವವನನು ಸರಿಹೊತ್ತಿನಿರುಳಲಿ, ಮಣ್ಣ ಬಂದೂಕದ ಮೊನೆಯಿಂದ ತಿರುವಿ; ನುಸುಳಿ ಬರುವ ಬೆಳದಿ...

ಅಧ್ಯಾಯ ಹದಿನಾಲ್ಕು ಒಂದು ಮಧ್ಯಾಹ್ನ ಗವಾಯ್‌ ಸಾಹೇಬರು ಆಚಾರ್ಯರ ದರ್ಶನಕ್ಕಾಗಿ ಬಂದರು. ಆಚಾರ್ಯರೂ ಅವರನ್ನು ಸಮಾದರದಿಂದ ಬರಮಾಡಿಕೊಂಡರು. ಆಚಾರ್ಯರಿಗೂ ಗವಾಯ್‌ಗಳಿಗೂ ಸ್ನೇಹವು ಚೆನ್ನಾಗಿ ಬೆಳೆಯಿತು. ಒಬ್ಬರನ್ನೊಬ್ಬರು ಗೌರವಿಸುವರು. ಆದರಿಸುನರು...

ಓ ನನ್ನಣ್ಣ ಅಕ್ಕ ತಂಗಿಯರೆ ನನ್ನಾತ್ಮ ಸಂಬಂಧ ಸಖ ಸಖಿಯರೆ ತೋಡಿಕೊಳ್ಳಲೆ ನನ್ನ ಭಾವಗಳ ರಾಶಿ ತುಂಬಿಕೊಳ್ಳಲೆ ನಿಮ್ಮ ನಿಸ್ವಾರ್ಥ ಪ್ರೀತಿ ಕಾಶಿ ಕಳೆದವು ಎತ್ತಲೋ ಆ ಭವ್ಯ ದಿನಂಗಳು ಎನ್ನ ಬದುಕಿನಲಿ ತಂದವು ಬೆಳಕಬಾಳು ಅಲ್ಲಿ ಒಂದೊಂದುಗಳಿಗೆ ಚಿನ್ನವ...

ನೆನಪೇ, ನೀನೇಕೆ ಹೀಗೆ ಕಾಡುತ್ತೀಯಾ? ಮನಸ್ಸನ್ನೇ ಚುಚ್ಚಿ ಸಾಯಿಸುತ್ತೀಯಾ? ನನ್ನ ಸತಾಯಿಸುತ್ತೀಯಾ? ಬಾಲ್ಯದ ತುಂಟತನಗಳ ನೆನಪು ಮುಖದಲ್ಲಿ ತಂದ ನಗು ಬೇಸರದ ಕ್ಷಣಗಳು ನೆನಪಾಗಿ ಮರುಗುತ್ತೇನೆ ಹಣೆಬರಹಕ್ಕಾಗಿ ವೇದನೆಯ ಬೇನೆಗೆ ಸಿಲುಕಿ ಕೊರಗುತ್ತೇನೆ...

ಪುಸ್ತಕಗಳಿವೆ ಅವು ಇರಬೇಕಾದ ಜಾಗದಲ್ಲಿ ಮರದ ಆಟಿಕೆಗಳಲ್ಲಿ ಒಪ್ಪ ಓರಣವಾಗಿ ಪೆಪಿರಸ್ ಹಾಳೆಗಳಲ್ಲಿ ಆದರೆ ಯಾಕೆ ಕಳೆದೊಂದು ವಾರದಿಂದಲು ಯಾವ ಓದುಗರೂ ಬಂದಿಲ್ಲ-ಒಬ್ಬ ವೃದ್ಧ ವಿದ್ವಾಂಸನ ಹೊರತು? ಆತ ಪ್ರತಿದಿನ ಬರುವವ ಗ್ರಂಥಾಲಯ ತೆರೆಯಲು ಕಾಯುವವ ಇ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...