ಓ ನನ್ನಣ್ಣ ಅಕ್ಕ ತಂಗಿಯರೆ
ನನ್ನಾತ್ಮ ಸಂಬಂಧ ಸಖ ಸಖಿಯರೆ
ತೋಡಿಕೊಳ್ಳಲೆ ನನ್ನ ಭಾವಗಳ ರಾಶಿ
ತುಂಬಿಕೊಳ್ಳಲೆ ನಿಮ್ಮ ನಿಸ್ವಾರ್ಥ ಪ್ರೀತಿ ಕಾಶಿ
ಕಳೆದವು ಎತ್ತಲೋ ಆ ಭವ್ಯ ದಿನಂಗಳು
ಎನ್ನ ಬದುಕಿನಲಿ ತಂದವು ಬೆಳಕಬಾಳು
ಅಲ್ಲಿ ಒಂದೊಂದುಗಳಿಗೆ ಚಿನ್ನವಾಗಿತ್ತು
ಮನದ ಮೂಲೆ ಮೂಲೆಯು ಧನ್ಯವಾಗಿತ್ತು
ಮಲ್ಲಯ್ಯನ ಗುಡ್ಡ ಆನಂದ ಪರಾಕಾಷ್ಠೆ
ಗುರುದತ್ತ ಗುರುಜಿಯಂತೂ ದಿವ್ಯಶ್ರೇಷ್ಟೆ
ಸುತ್ತೆಲ್ಲ ಪವಿತ್ರ ದೇಹ ಆತ್ಮಗಳ ಸುಳಿದಾಟ
ಅಲ್ಲಿ ಮೈಲಿಗೆಯೇ ಕಾಣದ ಶೀವಲೀಲೆಯಾಟ
ಭಜನೆ, ಚಿಂತನೆ, ಧ್ಯಾನಗಳ ವೈಭವ
ನಮ್ಮ ನಾವೇ ಮರೆತೇವು ತೊರೆದು ಭವ
ಈ ಆನಂದ ಸುಖಕ್ಕೆ ಹೇಳಲು ಶಬ್ದಗಳಿಲ್ಲ
ನಮಗೆ ಚಿಂತೆಗಳ ತುಂಬಲು ನಿಶಬ್ದಗಳಿಲ್ಲ
ಬಾಳಿನಲ್ಲೊಮ್ಮೆ ನಾವು ಅನುಭವಿಸಬೇಕು
ಅದುವೆ ಭಾವಸ್ಪಂದನದ ಜ್ಞಾನ ಬೆಳಕು
ಪರಮಾತ್ಮನಿಗೆ ಅರಿಯಲು ಅಳತೆಗೋಳಗಳಿಲ್ಲ
ಮಾಣಿಕ್ಯ ವಿಠಲ ಬಿಟ್ಟರೆ ಬೇರೆ ಆನಂದವಿಲ್ಲ
*****
















