ನೆನಪೇ, ನೀನೇಕೆ
ಹೀಗೆ ಕಾಡುತ್ತೀಯಾ?
ಮನಸ್ಸನ್ನೇ ಚುಚ್ಚಿ ಸಾಯಿಸುತ್ತೀಯಾ?
ನನ್ನ ಸತಾಯಿಸುತ್ತೀಯಾ?
ಬಾಲ್ಯದ ತುಂಟತನಗಳ ನೆನಪು
ಮುಖದಲ್ಲಿ ತಂದ ನಗು
ಬೇಸರದ ಕ್ಷಣಗಳು ನೆನಪಾಗಿ
ಮರುಗುತ್ತೇನೆ ಹಣೆಬರಹಕ್ಕಾಗಿ
ವೇದನೆಯ ಬೇನೆಗೆ ಸಿಲುಕಿ
ಕೊರಗುತ್ತೇನೆ
ಮನದಲ್ಲಿ ಅದೇ ನೆನಪು ಮೂಡಿ
ಮರೆಮಾಡಿತು ನಗುವನ್ನು
ನೆನಪಾಗುತ್ತದೆ ಬಾಲ್ಯದ
ಸ್ನೇಹಿತನ ಮುಗ್ಧನಗು
ಕಳೆದು ಹೋದ ಮುದ್ದು ನಾಯಿ
ಪರಚುತ್ತದೆ ಮನವನ್ನು
ನೆನಪೆಂಬ ಮಹಾಸಾಗರ
ಬಚ್ಚಿಟ್ಟುಕೊಂಡಿದೆ ತನ್ನೊಡಲೊಳಗೆ
ಅದೆಷ್ಟೋ ವಿಚಾರಗಳನ್ನು
ಭಾವತರಂಗದ ಮೂಟೆಯಂತೆ.
*****


















