ಒಮ್ಮೆ, ಶಿಷ್ಯನೊಬ್ಬ ಗುರುಗಳಲ್ಲಿ ಬಂದು ಪೆಚ್ಚು ಮುಖ ಹಾಕಿಕೊಂಡು ಕುಳಿತ. ಶಿಷ್ಯನ ಮುಖವನ್ನು ನೋಡಿ ಅವನ ಮನದ ಕಲ್ಲೋಲವನ್ನು ಗಮನಿಸಿದ ಗುರುಗಳು- “ಶಿಷ್ಯಾ! ನಿನ್ನ ಕಾಡುತ್ತಿರುವ ವಿಷಯವೇನು?” ಎಂದರು. “ಗುರುಗಳೇ! ವನ ವನ ಸುತ್ತಾಡಿದೆ. ಕಾಡು ಮೇಡು ಅಲೆದಾಡಿದೆ. ಬೆಟ್ಟ ಗುಡ್ಡ ಹತ್ತಿದೆ. ಸಮುದ್ರಯಾನ...

ಇನ್ನೆಷ್ಟು ದಿನ ಬಿತ್ತುತ್ತಾರೆ ಅವರು ಪಾಕಿಸ್ತಾನದಲಿ ಭಾರತ ವಿರೋಧಿ ಬೀಜಗಳನ್ನು ಇನ್ನೆಷ್ಟು ದಿನ ಬಿತ್ತುತ್ತಾರೆ ಇವರು ಭಾರತದಲ್ಲಿ ಪಾಕಿಸ್ತಾನ ವಿರೋಧಿ ಬೀಜಗಳನ್ನು ಅಲ್ಲಿ ಬಾಂಬ್ ಸ್ಫೋಟಿಸಿದ್ದಕ್ಕೆ ಇವರು ಇಲ್ಲಿ ಅಭಿನಂದಿಸುತ್ತಾರೆ. ಇಲ್ಲಿ ಬಾ...

ಜಗತ್ತಿನಾದ್ಯಂತ ಇತ್ತೀಚೆಗೆ ಪರಿಸರಮಾಲಿನ್ಯ ಶಬ್ಧ ಮಾಲಿನ್ಯ, ಭೂಮಿಯನ್ನು ಕೊರೆಯುವುದು, ಸ್ಫೋಟಗೊಳಸುವುದು ಇದೇ ಮೊದಲಾದ ಕಾರಣಗಳಿಂದಾಗಿ ಭೂಮಿ ನಿಧಾನವಾಗಿ ಬಿಸಿಯಾಗುತ್ತಲಿದೆ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ಭೂಮಿ ಬಿಸಿಯಾದಾಗ ಸ್ವಾ...

ಮರೆಯದಿರಣ್ಣ ಕನ್ನಡವ; ಜನ್ಮ ಕೊಟ್ಟ ಈ ಕನ್ನಡವ ಮಾತು ಕೊಟ್ಟ ನುಡಿಗನ್ನಡವ ತುತ್ತು ಕೊಟ್ಟ ತಾಯ್ಗನ್ನಡವ || ಹಳಿಯದಿರಣ್ಣ ಕನ್ನಡವ; ತಾಯ್ಮೊಲೆ ಉಣಿಸಿದ ಕನ್ನಡವ ವಿದ್ಯೆಯ ನೀಡಿದ ಕನ್ನಡವ ಸಭ್ಯತೆ ಕಲಿಸಿದ ಕನ್ನಡವ ಅಳಿಸದಿರಣ್ಣ ಕನ್ನಡವ; ಶತಶತಮಾನದ ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತ...

ಮೂಲ: ಸ್ಯಾಫೋ (ಗ್ರೀಕ್ ಕವಯಿತ್ರಿ, ಕ್ರಿ.ಪೂ. ೬-೭ನೆಯ ಶತಮಾನ) ದೇವಿ ಆಪ್ರೋದಿತೆಯೆ ಸಕಲ ವೈಭವದ ಸಿಂಹಾಸನವ ಏರಿರುವ ರೂಪವಿಖ್ಯಾತಯೆ! ಎಲ್ಲರಿಗು ಮಿಗಿಲು ಸಾವಿಗೂ ದಿಗಿಲು ಎನ್ನಿಸುವ ಸ್ಯೂದೇವ ಪಡೆದಂಥ ಮಗುವೆ ಅಂಗಲಾಚುವೆ ದೇವಿ ಬಳಿಸಾರಿ ಅಡಿಯ ದು...

ಹೆಡ್‌ಮಾಸ್ಟರನ್ನೇನೋ ವರ್ಗ ಮಾಡಿಸಿದ್ದಾಯಿತು; ಆದರೆ ರಾಜೇಂದ್ರನ ಬಳಗವನ್ನು ಅವರಿಷ್ಟಪಟ್ಟರೆ ಎಲ್ಲಾದ್ರೂ ದೂರದೂರಲ್ಲಿ ಉದ್ಯೋಗ ಕೊಡ್ಸಿ ಸಾಗ್ ಹಾಕೋವರ್ಗೂ ತಯಾರು ಸಾವ್ಕಾರ್ ಸಂಗಪ್ಪ. ಆದ್ರೆ ಶಾನುಭೋಗರು ಎಚ್ಚರಿಕೆ ನೀಡಿದರು. “ಉದ್ಯೋಗ ಸಿಕ್ಕಿದರ...

ಕಿನ್ನರ ಕಿಂಪುರುಷರ ನೌಕೆಗಳಂತೆ ತೇಲುತಿಹುದು ಬುರುಗಿನ ಬೆಳ್ಳಿ ಶರಧಿಯ ಮೇಲೆ,- ನೂರೊಂದು ಕಡೆಗೆ ತೇಲುತಿಹುದು ನೋಡಾ! ಬೆಣ್ಣೆ ಕಡಿದ ಮಜ್ಜಿಗೆಯಂತೆ ಹುಟ್ಟು ಕಡಿದ ನೀರು ಅಟ್ಟಿಸುತಿಹುದು ನೋಡಾ! ತಪತಪನೆ ಕಾಯ್ದು ಕೋಟಿ ಸೂರ್ಯರಂತೆ ಕಣ್ಣು ಕುಕ್ಕಿ ...

ವೀರಭದ್ರನೆ ಏಳು ವೀರ ರುದ್ರವ ಹೇಳು ಬಾಳೆಹೊನ್ನೂರಿನಲಿ ಕೂಗಿ ಹಾಡು ಜ್ಞಾನ ಖಡ್ಗವ ಬೀಸು ಶಿವನ ಢಮರುಗ ಢಮಿಸು ಕಡಲ ಅಲೆಗಳ ರುದ್ರ ನಾಟ್ಯವಾಡು ನೋಡು ದುಷ್ಟರ ಕೂಟ ರುಂಡಮುಂಡರ ಕಾಟ ತಾರಕನ ದ೦ಡುಗಳ ಹಿಂಡು ಮೆಟ್ಟು ಸತ್ಯವಂತರ ಉಳಿಸು ಹಗಲುಗಳ್ಳರ ಅಳಿ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...