ಚಿತ್ರ: ಅಲೆಕ್ಸಾಂಡ್ರ
ಚಿತ್ರ: ಅಲೆಕ್ಸಾಂಡ್ರ

ನಿವೃತ್ತ ಜೀವನ ಇಷ್ಟು ವಿಕಾರವಾಗಿರುತ್ತೆ – ಅಂತ ನಾನು ಊಹಿಸಲೇ ಇಲ್ಲ. ಹೊತ್ತು ಹೋಗದೆ… ಏನು ಮಾಡಬೇಕೋ ಗೊತ್ತಾಗದೇ, ಮಾತನಾಡುವವರು ಯಾರೂ ಇಲ್ಲದೇ… ಎಲ್ಲಾ ಅಯೋಮಯ ಅನಿಸುತ್ತಿದೆ. ಉದ್ಯೋಗದಲ್ಲಿ ಇರೋ ದಿನಗಳ ದಿನಚರ್ಯೆಯನ್ನು ಬದಲಿಸಿ ಹೊಸ ಕಾರ್ಯಕ್ರಮ ಪಟ್ಟಿಗೆ ಹಾಕಿಕೋಬೇಕು – ಅಂತ ಅನಿಸುತ್ತಿದೆ.

ಹಳೇ ದಿನಗಳ ನಡೆತೆಯ ವೇಗಕ್ಕೆ ಬ್ರೇಕ್ ಅಗ್ತಾ ಆಗ್ತಾ ಇದೆ! ಹೊಸ ಕಾಲಕ್ರಮದ ಪಟ್ಟಿಗೆಯನ್ನು ತಯಾರಿಸಿಕೊಬೇಕು.

ಟಿ. ವಿ ನೋಡೋಣಾ ಅಂದರೆ… ಆ ಸೀರಿಯಲ್ಸ್ ನನಗೆ ಇಷ್ಟ ಇರೋದಿಲ್ಲ. ಪುಸ್ತಕಪಠಣೆ ಮಾಡೋಣಾ… ಅಂದರೆ – ಅದೂ ಅಷ್ಟಷ್ಟು ಮಾತ್ರಾನೇ ಆಗುತ್ತೆ ನನ್ನಿಂದ. ಪುಸ್ತಕ ಪಠಣೆ ಮಾಡುವವರು ಹೇಳೋದು ಕೇಳಿದಮೇಲೆ ನನಗೆ… ಓದುವ ಅಭ್ಯಾಸ ಕಡಿಮೆ ಇರೋದು ಎಷ್ಟು ಕೆಟ್ಟುತನಾನೋ ಗೊತ್ತಾಗ್ತಾಯಿದೆ.

ನಾನು ಮಾಡಿದ ಉದ್ಯೋಗನೇ ಆ ತರಹಾ ಇದೆ – ಏನ್ಮಾಡಲಿ? ನನಗೆ ಸ್ನೇಹಿತರು ಮೊದಲೇ ಇಲ್ಲ. ಬಂಧು ಜನಗಳ ಹತ್ತಿರ ಅಷ್ಟಷ್ಟು ಮಾತ್ರವೇ ನನ್ನಸೇರಿಕೆ.

ಉದ್ಯೋಗದಿಂದ ನಿವೃತ್ತನಾಗಿದ್ಮೇಲೆ ಮೂರು ತಿಂಗಳಲ್ಲೇ ಭಯಂಕರವಾದ ಒಂಟಿತನ ನನ್ನನ್ನು ಕಾಡುತ್ತಿದೆ. ವರೆಂಡಾಗೆ ಹೋಗಿ ನಮ್ಮನೆ ಎದುರಿನಲ್ಲಿದ್ದ “ಪಾರ್ಕ್” ಕಡೆ ನೋಡಿದ್ದೆ. ಸಮಯ ಹನ್ನೊಂದಾಗಿದೆ ಕೆಲಸದಲ್ಲಿದ್ದಾಗ ಈ ಸಮಯದಲ್ಲಿ ಪೂರ್ತಿ ‘ಬಿಜೀ’… ಎಷ್ಟು ವಿಚಿತ್ರ? ಆವಾಗಲೂ ಇದೇ ಗಡಿಯಾರ… ಈವಾಗಲೂ ಇದೇ ಗಡಿಯಾರ. ಆವಾಗಲು ದಿನಕ್ಕೆ ಇಪ್ಪತ್ನಾಲ್ಕು ಗಂಟೆ… ಈವಾಗಲೂ ದಿನಕ್ಕೆ ಇಪ್ಪತ್ನಾಲ್ಕು ಗಂಟೇನೆ! ಆದರೆ – ಆವಾಗ ಕಾಲ ‘ಜೆಟ್’ ವೇಗದಲ್ಲಿ ನಡೆಯುತ್ತಿತ್ತು.

ಈವಾಗ ಮುದುಕನಾಗಿದ್ದ ಒಂಟೆತ್ತಿನಗಾಡಿ ತರಹ ಮೆತ್ತಗೆ ಚಲಿಸುತ್ತಿದೆ. ಕೆಲಸದ ಮೌಲ್ಯ ಗೊತ್ತಾಗುತ್ತಿದೆ. ಆವಾಗ ‘ ನು ಕೆಲಸಾನೊ… ಉಸಿರು ತೊಗೊಳ್ಳೋದಿಕ್ಕೂ ಸಮಯ ಇರ್ತಾ‌ಇಲ್ಲ!’ ಅಂದುಕೊಂಡಿದ್ದ ನಾನು ಈವಾಗ… ಉಸಿರು ಎದೆತುಂಬ ಎಷ್ಟು ಹೀರಿಕೊಂಡರೂ ಕ್ಷಣಗಳು ತಳ್ಳೋದು ಕಷ್ಟವಾಗಿದೆ. ಚೆಪ್ಲಿ ಹಾಕ್ಕೊಂಡು, ಮನೆಗೆ ಬೀಗ ಹಾಕಿ ಪಾರ್ಕ್ ಕಡೆ ನಡೆದಿದ್ದೆ.

ಶ್ರೀಮತಿ ಆಫೀಸ್‍ಗೆ ಹೋಗಿದ್ದಳು. ಮಕ್ಕಳೆಲ್ಲರಿಗೂ ಓದುಗಳು, ಮದುವೆಗಳು ಎಲ್ಲಾ ಮುಗಿಸಿಕೊಂಡು … ರೆಕ್ಕೆಗಳು ಬಿಚ್ಚಿಕೊಂಡ ಹಕ್ಕಿಗಳ ತರಹ – ಅವರವರ ಗೂಡುಗಳಲ್ಲಿ, ಅವರವರ ಪ್ರವೃತ್ತಿಗಳಲ್ಲಿ, ಅವರವರ ಸಂಸಾರಗಳನ್ನು ಈಜುತ್ತಿದ್ದಾರೆ! ಬೆಳಗ್ಗೆ ಎಂಟು ಗಂಟೆ ಆಗ್ತಾನೇ ಮನೆಯಲ್ಲಿ ನಾನೊಬ್ಬನೇ ಒಂಟಿಯಾಗಿ, ಏಕೈಕ ಭೂತದ ತರಹ ಇರುತ್ತಿದ್ದೇನೆ.

ಜೀವನದಲ್ಲಿ ಈ ಒಂಟಿತನ ‘ಇಷ್ಟು’ ಭಯ ಪಡಿಸುತ್ತೆ… ಅಂತ ನಾನು ಯಾವಾಗಲೂ ಊಹಿಸಲಿಲ್ಲ. ಪಾರ್ಕಲ್ಲಿ ಒಂದು ಮರದ ನೆರಳಿನಲ್ಲಿ ಇದ್ದ ಬೆಂಚ್ ಮೇಲೆ ಕೂತ್ಕೊಂಡೆ. ಯೋಚನೆಗಳನ್ನು ತಾತ್ಕಾಲಿಕವಾಗಿ ನಿಲಿಸಿದ್ದೆ. ಸ್ವಲ್ಪ ದೂರದಲ್ಲಿದ್ದ ಬೆಂಚ್‍ಗಳಮೇಲೆ ಯಾರೋ ಕೂತ್ಕೊಂಡು ಮಾತನಾಡಿಕೊಳ್ಳುತ್ತಿದ್ದಂತೆ
ಕೇಳಿಸಿತ್ತಿದೆ.

“ಏನೋನ್ರಿ… ಈ ಒಣಗಿದ ಪತ್ರ ಯಾವಾಗ ಸೋಲುತ್ತೋ – ಯಾವಾಗಬೀಳುತ್ತೋ…?” ವಿಚಾರವಾಗಿ ಒಂದು ಕಂಠ ಕೇಳಿಸುತ್ತಿದೆ.

“ಇಲ್ಲಿ ಇದ್ದಿದ್ದು ಒಂದೇ ಒಣಗಿದ ಪತ್ರವಲ್ಲ! ಒಂಬತ್ತು ಒಣಗಿದ ಪತ್ರಗಳು” ನಗುತ್ತಾ ಇನ್ನೊಂದು ಕಂಠ.

“ದಿನಗಳು ಹೇಗೆ ತಳ್ಳೋದು…? ಅಂತ ವ್ಯಥೆಯಾಗಿ, ಜೀವನದ ಮೇಲೆ ವಿರಕ್ತಿಯಾಗಿ ಇದೆ ಉಮಾಪತಿ” ಅನ್ನುತ್ತಿದೆ ಇನ್ನೊಂದು ಕಂಠ.

“ಮನೆಯಲ್ಲಿ ನಮಗೆ ಗೌರವ ಇಲ್ಲ. ಸಮಯಕ್ಕೆ ಇಷ್ಟು ತಿಂಡಿ – ತೀರ್ಥಗಳು ಕೊಡದೇ… ಯಾವುದೋ ನಾಯಿಗೆ ಹಾಕಿದ ಥರಾ ಇರುತ್ತದೆ” ನಿರಾಸೆ ಶಬ್ದಿಸೋ ಕಂಠ.

“ಹೆಂಡತಿ ಹೋಗಿದ್ಮೇಲೆ ಸೋಸೆಯಿಂದರಿಗೆ ನಾವು ದಿಕ್ಕಿಲ್ಲದವರ ತರಹ ಅನ್ನಿಸುತ್ತೋ – ಏನೋ” ಆನಂದರಾವ್ ಅಂದ.

“ಸಾಕು ನಿಲ್ಲಿಸಿರಿ ಆನಂದರಾವ್! ಹೆಂಡತಿ ಇರೋವಾಗ – ಜಾಬ್ ಮಾಡ್ತಾ ಇರೋವಾಗ ನಡೆದಿದ್ದ ತರಹ ಈವಾಗ ನಡೆಯೋದಿಲ್ಲ… ಅಂತ ನಾವು ಅರ್ಥ ಮಾಡಿಕೋಬೇಕು. ಮುದುಕರು ಆಗಿದ್ಮೇಲೆ ನಮ್ಮನ್ನ ಶ್ರಧ್ಧೆಯಾಗಿ ನೋಡುವದು, ಗೌರವ ಕಡಿಮೆಯಾಗೋದು… ನಾವೇ ಗಮನಿಸಿ ಅದಕ್ಕೆ ಅಡ್ಜಸ್ಟ್ ಆಗಬೇಕು. ನಿಮ್ಮ ವಿಷಯ ನನಗೆ ಗೊತ್ತಿಲ್ವಾ? ಗಂಟೆ ಗಂಟೆಗೆ ಫಿಲ್ಟರ್ ಡಿಕಾಕ್ಷನ್ ಫ್ರೆಶ್ಶಾಗಿ ಕಾಫಿ, ದಿನಕ್ಕೊಂದು ತರಹ ಬೆಳಗಿನ ಉಪಾಹಾರ… ಇದೆಲ್ಲ ಯಾರು ಸರಿಮಾಡ್ತಾರೆ? ಅಡ್ಜಸ್ಟ್ ಆಗಬೇಕಪ್ಪಾ…! ಜೀವನ ಕೊನೆದಶೆ – ದಿಶೆ ಬಿಟ್ಟು ನಡೆಯುತ್ತೆ! ಮುದಿ ವಯಸ್ಸಲ್ಲಿ ಔಷಧ ಇಲ್ಲದ ಅಸ್ವಸ್ಥತೆ…” ಅಂದ ಮನು.

“ನಾವು ಕೂಡಾ ಸ್ವಲ್ಪ ಹೊಂದಿಕೊಂಡು ಹೋಗಬೇಕುರೀ” ಯಾವಾಗಲೂ ನಿಜಹೇಳೋ ಚಲಪತಿ ಹೇಳಿದ್ದ. “ಸರಿ ಸರಿ! ಇನ್ನು ಟಾಪಿಕ್ ಬದಲಾಯಿಸಿ. ಎಷ್ಟೋ ಹೊತ್ತು ಪಾರ್ಕಲ್ಲಿ, ಮನೆಯಲ್ಲಿ ಕೂತ್ಕೊಂಡಿರ್ತೀವಿ? ಏನಾದರೂ ಪ್ರಯೋಜನವಾಗಿರೋ ಕೆಲಸ ಮಾಡಿದರೆ ಚೆನ್ನಾಗಿರುತ್ತೆ!”

“ಅದೇ ನಾನೂ ಯೋಚನೆ ಮಾಡ್ತಾ ಇದ್ದೀನಿ ರಮಾಪತೀ! ಎಷ್ಟು ಹೊತ್ತು ಸೀಲಿಂಗ್ ನ ನೋಡ್ತಾ…  ಹಾಳಾದ ಟಿ. ವಿ – ನೋಡ್ತಾ ಕೂತ್ಕೊಳ್ಳೋದು ಹೇಳಿ?!”

“ಅದಕ್ಕೇನೆ ನಾವೆಲ್ಲರೂ ಒಂದು ಯೋಚನೆ ಮಾಡಬೇಕು. ಮೈಯಲ್ಲಿ ಶಕ್ತಿ, ಮೆದುಳಲ್ಲಿ ಯೋಚನಾಚಾತುರ್ಯ ಇರೋವಾಗ… ಸುಮ್ಮನೇ ಕೂತುಕೊಂಡು, ತಿಂದು… ಸಮಯ ಹೋಗುತ್ತಿಲ್ಲ!” ಅಂತ ಬೇಸರ ಮಾಡಿಕೊಳ್ಳೊದಕ್ಕಿಂತ ಯಾವುದಾದರೂ ಒಳ್ಳೆಯ ಕೆಲಸ ಮಾಡುವ ಉಪಾಯ ಹುಡುಕಿದರೆ….?” ” ನಿನ್ನ ವಿಷಯ ಚೆನ್ನಾಗಿದೆ…! ನಿನಗೆ ಪೆನ್ಷನ್ ಬರುತ್ತೆ. ನಿನ್ನ ಹೆಂಡತಿ ಸಮಯಕ್ಕೆ ಸರಿಯಾಗಿ ಎಲ್ಲಾ ಅಚ್ಚುಕಟ್ಟಾಗಿ ಮಾಡ್ತಾಳೆ! ನನ್ನ ವಿಷಯ ಹೇಗೆ ಹೇಳು! ಒಂಟಿಯಾಗಿರ್ತೀನಿ. ಕಷ್ಟಪಟ್ಟು ಅಡಿಗೆ ಮಾಡಿಕೊಂಡಿದ್ದರೇನೇ ಊಟಾ… ಆ ಕೆಲಸದಲ್ಲೇ ಕಾಲ ಕಳೆಯುತ್ತಿದೆ ಅಂತಿಟ್ಟುಕೋ! ಜೀವಭಾಗಸ್ವಾಮಿ ಮುಂದೇ ಹೋಗಿಬಿಟ್ಟರೆ ಕಷ್ಟಾನೇ ನಾಗೆಶಂ!”

“ನಿರಂತರವೂ ನಮಗೆ ಸೇವೆ ಮಾಡ್ತಾ – ನಾವು ಸಾಯೋಂತವರಿಗೂ ಎನ್ ಪೆಯಿಡ್ ಸರ್ವೆಂಟ್ ತರಹ ಇರಬೇಕು ಅಂತೀರಾ? ಎಷ್ಟು ಸ್ವಾರ್ಥ ನಿಮಗೆ?”

“ಹೌದೌದು ! ನಮಗೆ… ನಮ್ಮ ಮಕ್ಕಳಿಗೆ, ಮಮ್ಮಕ್ಕಳಿಗೆ ಅಡಿಗೆ ಮಾಡಿ – ಬಡಿಸಿ… ಹೀಗೆ – ಮಹಿಳೆಯರ ವಿಷಯದಲ್ಲಿ ಗಂಡಸರ ಭಾವಗಳು ದಾರುಣವಾಗಿವೆ. ಅದಕ್ಕೇನೆ ಅವರು ಎದುರು ದಾಳಿ ಮಾಡುವದು”

“ಅಡಿಗೆ ಮಾಡಿ ಗಂಡನಿಗೆ ಬಡಿಸೋದು ಕೂಡಾ ‘ಸರ್ವೆಂಟ್’ ಕೆಲಸ ಅಂಕೊಂಡಿದ್ದರೆ – ಮದುವೆ ಯಾಕೆ ಮಾಡಿಕೋಬೇಕು?”

“ಮತ್ತೆ…? ಅವರು ಮಾಡೋ ಕೆಲಸ ನಾವು ಮಾಡೋಕಾಗುತ್ತಾ? ಹೆಂಡತಿಗೆ ಕಾಯಿಲೆ ಬಂದರೆ… ಅವರ ತರಹ ನಾವು ಮಾಡಿ ಜೋಪಾನವಾಗಿ ನೋಡುಕೊಳ್ಳುತ್ತಾರೋ… ಆತ್ಮ ಸಾಕ್ಷಿಯಾಗಿ ಹೇಳಿ! ನಮ್ಮನ್ನ ನಾವೇ ಮಾಡಿಕೋಬಾರದು ನೋಡಿ!”

“ನಿಜಾನೇ…! ನಾವು ಏನೂ ಮಾಡೋದಿಲ್ಲ. ಅದುಮಾತ್ರ ಯಥಾರ್ಥವೆ. ಮಾಡಿಸಿಕೊಳ್ಳೋದು ಬಿಟ್ಟು, ಮಾಡೋದು ಮಗಧೀರರಾಗಿದ್ದ ನಮಗೆ ಅವಮಾನ ಬೇರೆ… ಅಲ್ವೇ?” ಆಕ್ಷೇಪಣೆಯಾಗಿ ಹೇಳಿದ್ದ ಇನ್ನೊಬ್ಬ . “ಗಂಡುಸುತನ – ಏನೆಂದರೆ ಪಿಡಿಸೋದೊಂದು, ಸಂಸಾರಮಾಡಿ ಮಕ್ಕಳನ್ನ ಹೆತ್ತಿಸೋದು… ಅಷ್ಟೇತಾನೆ!”

“ಹಾಗಂತೀರೇನ್ರಿ? ಗಂಡುಸು ಮಾತ್ರ ‘ಎಣ್ಣೆ’ ಹಿಂಡುವ ಯಂತ್ರಕ್ಕೆ ಕಟ್ಟಿದ ‘ಎತ್ತಿ’ ನ ತರಹ ದುಡಿದು ಅನುಕೂಲ ಮಾಡಿದರೆ… ಮನೆಯಲ್ಲಿ ಹಾಯಾಗಿ, ನೆರಳಲ್ಲಿ ಇದ್ದು ಅಡಿಗೆ ಮಾಡಿಕೊಂಡು ತಿನ್ನೋದು ಕಷ್ಟಾನಾ?” ಒಬ್ಬರು ವ್ಯಂಗ್ಯವಾಗಿ ಹೇಳಿದ್ದರು.

“ಹೋಗಲಿ – ನಮ್ಮಲ್ಲಿ ಎಷ್ಟು ಜನ ಆ ಕೆಲಸವನ್ನು ಇಷ್ಟವಾಗಿ ಮಾಡ್ತಾರೋ ಮನಹ್ಪೂರ್ವಕವಾಗಿ ಹೇಳಿ!”

“ಆ ತರಹ ಹೆಣ್ಣು ಕೆಲಸಗಳು, ಗಂಡು ಕೆಲಸಗಳು ಒಬ್ಬರೇ ಮಾಡಿದ್ದರೆ… ಹೆಣ್ಣು -ಗಂಡು ಭೇದ ಯಾಕ್ರೀ? ದೇವರು ಎಲ್ಲರನ್ನೂ ಗಂಡಸರಾಗಿನೋ – ಹೆಂಗಸರಾಗಿಯೋ ಹುಟ್ಟಿಸಿದ್ದರೆ ಆಗುತ್ತಿತ್ತಲ್ವೇ?”

“ಅದೂ ಆಗುತ್ತಿದೆ ನೋಡಿ! ಎಲ್ಲಿ ನೋಡಿದ್ದರು ಹೆಣ್ಣು ಮಕ್ಕಳು ಚೆನ್ನಾಗಿ ಓದಿ – ಕುಮಾರ ರತ್ನಗಳಿಗಿಂತ ಒಳ್ಳೇ ಕೆಲಸಗಳನ್ನು ಮಾಡ್ತಾ ಇದಾರೆ. ನೋಡೋದಕ್ಕೆ ಹೆಣ್ಣುಮಕ್ಕಳು ಜಾಸ್ತಿ ಇದ್ದಷ್ಟು ಅನಿಸಿದರೂ – ಗಂಡು ಮಕ್ಕಳಿಗೆ ಮಾದುವೆ ಮಾದಬೇಕಂದು ಕೊಂಡಿದ್ದಾಗ ಹೆಣ್ಣು ಮಕ್ಕಳ ‘ಸಂಖ್ಯೆ’ ಕಡಿಮೇನೆ ಕಾಣುತ್ತದೆ!”

“ಸರಿ ಸರಿ! ನಮ್ಮ ಸಂಭಾಷಣೆ ಇನ್ನೊಂದು ಪಕ್ಕಕ್ಕೆ ಹೋಗುತ್ತಿದೆ. ತಿರಗಾ ಟಾಪಿಕ್ ಪಕ್ಕಕ್ಕೆ ತಿರಿಗಿಸೋದು ಮೇಲೇನೋ!”
*   *   *   *   *

ಆ ಸಂವಾದ ತುಂಬಾ ಇಂಟ್ರಷ್ಟಿಂಗಾಗಿ ಅನಿಸಿ ನಾನು ಎದ್ದು, ಅವರಕಡೆಗೆ ಹೋಗಿದ್ದೆ. ಕೈ ಮುಗಿದು ಅವರಿಗೆ ನಮಸ್ಕಾರ ಮಾಡಿದ್ದೆ. ಅವರು ನನ್ನನ್ನು ನೋಡಿ ಕೈಮುಗಿದು ಮೌನ ವಹಿಸಿದ್ದರು. ನನ್ನ ‘ಪ್ರವರ’ ಹೇಳಿಕೊಂಡು “ಇಷ್ಟು ದಿನ ನನ್ನ ಸುತ್ತ-ಮುತ್ತ ಏನು ಆಗುತ್ತಿದೆಯೋ ಗುರ್ತಿಸದ ಅಂಧ ನಾನು. ಹೊತ್ತು ಹೋಗದವರು ಇಲ್ಲಿ ಸೇರಿ ಸುಮ್ಮನೇ ಮಾತಾಡ್ತಾರೆ ಅಂತ ಭಾವಿಸಿದ್ದೆ! ನನ್ನ ಭಾವನೆ ಎಷ್ಟು ತಪ್ಪು ಭಾವನೆಯೂ ಗೊತ್ತಾಯಿತು. ‘ತನ್ನ ವರಿಗೂ ಬಂದರೆ… ’ ಅನ್ನೋ ತರಹ… ಈದಿನ ಇಲ್ಲಿಗೆ ಸೇರಿಸಿ ನನ್ನನ್ನು ನಿಮ್ಮಲ್ಲಿ ಒಬ್ಬ ಅನ್ಕೊಂಡಿದ್ದರೇ ಸಂತೋಷ!” ಅಂದೆ ನಾನು. ಒಂದು ನಿಮಿಷ ಒಬ್ಬರನೊಬ್ಬರು ನೋಡಿ ಕೊಂಡು, ಅಂಗೀಕಾರವಾಗಿ ತಲೆ ತೂಗಿಸಿದರು. ನಾನು ಅವರನ್ನು ಸಮೀಪಿಸಿ ಬೆಂಚ್ ಖಾಲಿ ಇರೋಕಡೆ ಕುತ್ಕೊಂಡೆ.

“ಹತ್ತನೇ ಒಣಗಿದ ಪತ್ರ ನಮ್ಮಲ್ಲಿ ಸೇರಿದ್ದಕ್ಕೆ ಸಂತೋಷ” ಅಂದ ಚಮತ್ಕಾರಿ ಪರಂಧಾಮ್.

“ಈವಾಗ ಊಟದ ಪತ್ರ (ಎಲೆ) ಪೂರ್ತಿ ತುಂಬಿದೆ!” ವಿಶ್ವೇಶ್ವರರಾವು ಮಾತು ಸೇರಿಸಿದ.

“ಎಲೆ… ಅಲ್ಲ… ಎಲೆಗಳು… ನಾವೆಲ್ಲರೂ ಶ್ರಮಿಸಿ – ಒಂದು ಎಲೆಗಳ ಗಂಟು ಆಗಬೇಕು. ಅವುಗಳನ್ನು ಎಲ್ಲರಿಗೂ ಹಂಚಬೇಕು. ಆ ಆನಂದ ಎರಡರಷ್ಟು ಆಗುತ್ತೆ!” ಅಂದ ದಯಾನಿಧಿ.

ನಾನು ಚಪ್ಪಾಳೆ ತಟ್ಟಿದ್ದೆ. ಎಲ್ಲರೂ ನನ್ನ ಜೊತೆ ಸೇರಿದರು. ನನ್ನಕಡೆ ನೋಡುತ್ತಾ “ನನ್ನ ಹೆಸರು ನಾಗೇಶ… ತಾವು…?” ಎಲ್ಲರಿಗೂ – ಎಲ್ಲರ ಪರಿಚಯ ಆಯಿತು.

ನಾನು ಸಹ ಪ್ರತಿದಿನ ಇಲ್ಲಿಗೆ ಬಂದು ಸ್ವಲ್ಪ ಹೊತ್ತು ನಿಮ್ಮ ಹತ್ತಿರ ಮಾತನಾಡಿ ನನ್ನ ಮನಸ್ಸನ್ನು ಹಂಚಿಕೊಳ್ಳುತ್ತೇನೆ. ಆದರೆ… ವೃಥಾ ಪ್ರಸಂಗ ಅಲ್ಲದೆ… ದಯಾನಿಧಿ ಹೇಳಿದ ತರಹ ಏನಾದರೂ ಒಂದು ಸತ್ಕಾರ್ಯ ಆರಂಭ ಮಾಡಿದರೆ ಚೆನ್ನಾಗಿರುತ್ತೆ. ಆ ವಿಷಯ ಯೋಚನೆ ಮಾಡಿ! ಅನೇಕ ವೃತ್ತಿಗಳಲ್ಲಿ ಎಷ್ಟೋ ಸಮರ್ಥವಂತರಾಗಿ ಕೆಲಸಮಾಡಿ ನಿರ್ವಹಿಸಿದ ನಮಗೆ… ಮೈಯಲ್ಲಿ ಶಕ್ತಿ ಇದ್ದು, ಖರ್ಚುಗೆ ಭಯವಿಲ್ಲದಂಗಿರುವ ನಮಗೆ ‘ಪೆನ್ಶನ್’ ಇದ್ದುದರಿಂದ ಏನಾದರು ‘ಒಳ್ಳೇ ಕೆಲಸ’ ಆರಂಭ ಮಾಡಿದರೆ ನಮ್ಮ ಮನಃಶರೀರಗಳಿಗೆ ಸುಖ, ಪ್ರಮೋದ ಆಲ್ವಾ? ಹೊಸದಾಗಿ ಬಂದು ಸಲಹೆ ಕೊಡುತ್ತಿದ್ದೇನೆ ಅಂತ ಭಾವಿಸಬೇಡಿ. ನಿಮ್ಮಲ್ಲಿ ಕೂಡಾ ಈ ಅಭಿಪ್ರಾಯ ನಿಮ್ಮ ಮಾತುಗಳಲ್ಲಿ ಹೇಳಿದರಲ್ವಾ?! ಅದಕ್ಕೆ ಹೀಗೆ ಹೇಳೋದಿಕ್ಕೆ ನಾನು ಸಹ ಧೈರ್ಯಮಾಡಿದ್ದೇನೆ” ಅಂದೆ ಮೆಲ್ಲಗೆ – ಎಲ್ಲರ ಮುಖಗಳನ್ನೂ ಪರಿಶೀಲಿಸುತ್ತ.

ಐದು ನಿಮಿಷಗಳ ನಿಶ್ಶಬ್ದದ ಅನಂತರ ಎಲ್ಲರು ಅಂಗೀಕಾರವಾಗಿ ತಲೆ ತೂಗಿದರು.

ಒಬ್ಬೊಬ್ಬರು ಒಂದೊಂದು ಸಲಹೆ ಕೊಟ್ಟಿದ್ದರು. ಎಲ್ಲರ ಸಲಹೆಗಳು…ಒಂದು ಪೇಪರಲ್ಲಿ ‘ಪಾಯಿಂಟ್ಸ್’ ತರಹ ಬರೆದಿಟ್ಟಿದ್ದೇವೆ. ಎಲ್ಲರ ಸಲಹೆಗಳನ್ನು… ಯೋಚಿಸಿ – ಅವನ್ನ ಅನುಕೂಲವಾಗಿ ‘ಅನುಕ್ರಮಣಿಕೆ’ ಯನ್ನು ಬರೆದಿಟ್ಟುಕೊಂಡಿದ್ದೇವೆ. ವರ್ಗಗಳಾಗಿ ಬೇರ್ಪಡಿಸಿದ್ದೇವೆ.
*   *   *   *   *

ನಮ್ಮ ಹೊಸ ದಿನಚರಿ ಆರಂಭವಾಯಿತು. ಕೆಲಸ ಇರೋವಾಗ ನಡೆದ ತರಹ ಕಾಲ ‘ಚರ ಚರ’ ನೆಡೆದು ಹೋಗುತ್ತಿತ್ತು. ನಮ್ಮ ಸೇವಾ ಸಂಸ್ಥೆಯ ಹೆಸರು “ಸ್ಪಂದನೆ” ಅಂತ ಇಟ್ಟುಕೊಂಡಿದ್ದೇವೆ. ಕಾಲೋನಿ ಎಲ್ಲಾ ಓಡಾಡಿ ಪ್ರಪ್ರಥಮವಾಗಿ ‘ನಿವೃತ್ತ’ ಉದ್ಯೋಗಸ್ತರನ್ನು ಆಯ್ಕೆ ಮಾಡಿ ಅವರ ಪರಿಚಯ ಮಾಡಿಕೊಂಡು, ಅವರನ್ನು ಕೂಡಾ ನಮ್ಮ ಜೊತೆಗೆ ಸೇರಿಸಿಕೊಂಡಿದ್ದೇವೆ. ಒಂದು ಪಧಕ ತಯಾರಿಸಿಕೊಂಡು ನಮ್ಮ ಪ್ರಾಂತದಲ್ಲಿ ಎಷ್ಟು ಮನೆಗಳಿವೆ?… ಎಷ್ಟು ಬೀದಿಗಳಿವೆ…?ಎಲ್ಲಾ ಗುರಿತಿಸಿ – ಒಂದೊಂದು ಮನೆಗೆ ಒಂದೊಂದು ವಿವರಗಳಿದ್ದ ಪೇಪರನ್ನು ಹಂಚಿ, ಅದರಲ್ಲಿ ಅವರವರ ಸಮಸ್ಯೆಗಳೇನು? ಅವರವರಿಗೆ ಯಾವ ವಿಷಯಗಳಲ್ಲಿ ನಮ್ಮ ಸಹಾಯ ಬೇಕಾಗುತ್ತದೆ?… ಇತ್ಯಾದಿ ವಿವರಗಳನ್ನು ಬರೆದಿರಿಸಿ… ನಾವು ಬಂದು ಕಲೆಕ್ಟ್ ಮಾಡಿ ಕೊಳ್ಳುತ್ತೇವೆ…” ಅಂತ ಹೇಳಿದ್ದೇವೆ. ಯಾರ ಮನೆಯಲ್ಲಿ ಯಾರು ಕೆಲಸ ಮಾಡುತ್ತಿದಾರೆ ಒಂದೊಂದು ಮನೆಯಲ್ಲಿ ಎಷ್ಟು ಜನ ಇದಾರೆ? ಇವನ್ನು ಸೇಕರಣೆ ಮಾಡಿದ್ದೇವೆ.

ಸ್ಲಮ್ ಗೆ ಹೋಗಿ ಎಲ್ಲರನ್ನು ಸೇರಿಸಿ… ವಿದ್ಯೆ,ಆರೋಗ್ಯ, ಶುಭ್ರತೆ, ವೈದ್ಯಗಳ ಬಗ್ಗೆ ಹೇಳೋದು, ಅದಕ್ಕೆ ಸಹಕರಿಸೋದು, ಅವರು ಕೇಳದೇ ಇದ್ದಿದ್ದಾಗಲು ಸಹ ಅವರಿಗೆ ಮತ್ತಷ್ಟು ವಿವರವಾಗಿ ಹೇಳಿ… ಒಪ್ಪಿಸೋದು… ಇದೆಲ್ಲ – ಒಂದು ‘ಗ್ರೂಪ್’ ಮಾಡುತ್ತೆ.

ಉಪಾಧ್ಯಾಯ ವೃತ್ತಿಯಲ್ಲಿದ್ದವರನ್ನು, ವೈದ್ಯರತ್ರ ಪರಿಚಯವಿರೋ ಅವರನ್ನು ಆ ಗ್ರೂಪ್ ಗೆ ಸೇರಿಸಿದ್ದೇವೆ. ಕಾಲೋನಿಯಲ್ಲಿರೋ ಬೀದಿಗಳು, ಕರೆಂಟ್, ಶುಭ್ರತೆ… ಇನ್ನೂ ಸೂಕ್ಷ್ಮ ಸದುಪಾಯಗಳ ವಿಷಯ ಅಧಿಕಾರಿಗಳ ಹತ್ತಿರ, ಸ್ವಚ್ಚಂದ ಸೇವಾ ಸಂಸ್ಥೆಗಳ ಜೊತೆಗೆ ನಾವೂ ಸೇರಿ ಶ್ರಮದಾನ ಮಾಡುತ್ತಿದೇವೆ.

ಮೂರು, ನಾಲ್ಕು ತಿಂಗಳಾಗೋವೇಳೆಗೆ ಕಾಲೋನಿ ಪೂರ್ತಿಯಾಗಿ… ‘ನೋಡುವವರಿಗೆ’ ಇಷ್ಟವಾಗಿರೋ ತರಹ ಮಾಡಿದ್ದೇವೆ. ಬೀದಿಗಳಲ್ಲಿ ಗಿಡಗಳನ್ನು ನೆಟ್ಟಿದ್ದೇವೆ. ಅಲ್ಲಿದ್ದ ಜನಗಳನ್ನು ಮಿತ್ರರಾಗಿ ಮಾತನಾಡಿ… ಆ ಗಿಡಗಳಿಗೆ ನೀರು ಹಾಕುವ ಕೆಲಸಕ್ಕೆ ಒಪ್ಪಿಸಿದ್ದೇವೆ. ಇವೆಲ್ಲಾ ನೋಡೋದಿಕ್ಕೆ ನಮ್ಮಲ್ಲಿ ಒಂದು ಗ್ರೂಪ್ ಬಾಧ್ಯತೆ ವಹಿಸುತ್ತಿದೆ.

ರಾತ್ರಿ ಒಂಬತ್ತು ಗಂಟೆ ಆದ್ಮೇಲೆ ‘ಬಷ್ಟಾಪ್’ ನಿಂದ ಬರೋ ಅವರಿಗೆ (ವಾಹನವಿಲ್ಲದವರಿಗೆ) ಸಹಾಯ ಮಾದುವದಿಕ್ಕೆ ಒಂದು ಗ್ರೂಪ್, ಮನೆಗಳಲ್ಲಿ ಒಂಟಿಯಾಗಿದ್ದವರಿಗೆ ಸಹಾಯ ಬೇಕಾದವರಿಗೆ ಒಂದುಗ್ರೂಪ್… ಹೀಗೆ ನಮ್ಮ ಸಹಕಾರ ಬೇಕಾದವರಿಗೆ ಸಹಾಯ ಮಾಡುತ್ತಾ… ಹೊತ್ತು ಹೋಗದೆ ಇರೋ ನಾವು ನಮ್ಮ ಸಮಯವನ್ನು ಅತ್ಯಂತ ವೇಗವಾಗಿ, ಅತ್ಯಂತಸುಲಭವಾಗಿ, ಆನಂದದಾಯಕವಾಗಿ ನೆರವೇರಿಸುತ್ತಿದ್ದೇವೆ.

ಎಲ್ಲರು ಸೇರಿ… ವಿಶ್ರಾಂತ ಮಹಿಳೆಯರನ್ನು ಸೇರಿಸಿಕೊಂಡು – ಸುಮಾರು ನೂರು ಜನ ಆಗಿದ್ದೇವೆ. ನಮ್ಮ ಪೆನ್ಷನಲ್ಲಿ ಹತ್ತನೇ ಭಾಗ – ಪ್ರತಿ ತಿಂಗಳು ಸೇರಿಸಿ ಒಂದು ನಿಧಿಯಾಗಿ ವ್ಯವಸ್ಥೆಯೂ ಮಾಡಿದ್ದೇವೆ. ಅದನ್ನು ಒಂದು ಭಾನುವಾರ ಒಂದೊಂದು ಪ್ರಯೋಜನವಾದ ಕೆಲಸ ಮಾಡುತ್ತಿದ್ದೇವೆ.

ಹಾಸ್ಪಿಟಲ್ ಗೆ ಹೋಗಿ ರೋಗಿಗಳನ್ನೂ ಕಂಡು ಧೈರ್ಯ ಹೇಳಿ, ಬ್ರೆಡ್, ಹಣ್ಣು, ಹಾಲು ಹಂಚುವದು… ಎಲ್ಲರ ಮನೆಯಲ್ಲಿರೋ ಹಳೇ ಬಟ್ಟೆಗಳು ಸೇರಿಸಿ ಅನಾಥಾಶ್ರಮದಲ್ಲಿ ಬೇಕಾದವರಿಗೆ ಹಂಚುವದು ಮಾಡುತ್ತಿದ್ದೇವೆ. ಮಧ್ಯ – ಮಧ್ಯ ಪಾರ್ಕಲ್ಲಿ ಎಲ್ಲರೂ ಸೇರಿ ನಾವು ಮಾಡುತ್ತಿದ್ದ ಪದ್ಧತಿಗಳ ಮೇಲೆ ‘ಚರ್ಚೆ’ ನಡೆಸಿ, ಇನ್ನೂ ಅನುಕೂಲವಾಗಿ ಮಾಡುವದಕ್ಕೆ ‘ರೂಪಕಲ್ಪನೆ’ ಮಾಡಿಕೊಳ್ಳುವದು, ಒಬ್ಬರಿಗೆ ಇನ್ನೊಬ್ಬರ ಸಹಾಯಕ ಚರ್ಚೆಗಳು ನಡೆಸಿ ಆ ಅಂಶಗಳನ್ನ ಅಭಿವೃಧ್ಧಿ ಪಥಕಗಳಾಗಿ ನಿರ್ಣಯಿಸುತ್ತೇವೆ.

ಸತ್ಸಂಗ, ರಾಮಾಯಣ, ಭಾರತ, ಭಾಗವತಗಳ ಪಾರಾಯಣ, ಪ್ರವಚನೆ, ಪ್ರಶ್ಣೋತ್ತರ ಕಾರ್ಯಕ್ರಮಗಳು- ಮೂರು ತಿಂಗಳಿಗೊಂದುಸಲ “ಉಚಿತ ವೈದ್ಯ ಪರೀಕ್ಷೆ” ಕಾರ್ಯಕ್ರಮ ನಡೆಯುತ್ತಿದೆ.

ಇಷ್ಟು ರಮ್ಯವಾಗಿ, ಆನಂದವಾಗಿ, ಪ್ರಯೋಜನಕರವಾಗಿ ಸಮಯ ಕಳೆಯುತ್ತಿದ್ದಿದು ನಮಗೆಷ್ಟೋ ಹರ್ಷದಾಯಕವಾಗಿದೆ. ಒಂದು ವರ್ಷವಾಗೋಹೊತ್ತಿಗೆ… ನಮಗೆ ಮನೋಬಲ, ಶಾರೀರಕಾರೋಗ್ಯ ಆದೆಷ್ಟು ಮಟ್ಟಿಗೆ ಸುಧಾರಿಸಿಕೊಂಡಿದ್ದು, ಉತ್ಸಾಹಿಗಳಾಗಿ ತಯಾರಾಗಿದ್ದೇವೆ. ನಾವು ಇಷ್ಟು ಮಾಡುತ್ತಿದ್ದೀವಲ್ಲಾ… ಅಂತ ಒಂದು ವಿಧವಾದ ‘ಹೆಮ್ಮೆ’ ನಮ್ಮಲ್ಲಿ ತುಂಬಿಕೊಂಡಿದೆ.

ನಾವು ಮಾಡುವ ಕೆಲಸಗಳು ಬಹಳ ಜನಗಳಲ್ಲಿ ಗೌರವ ಮೂಡಿಸುತ್ತಿವೆ. ಮರ್ಯಾದೆ ತರುತ್ತಿವೆ.

ನಮ್ಮ ಮನೆಗಳಲ್ಲಿ ಇದ್ದು… ಇನ್ನೊಬ್ಬರಿಗೆ ಪ್ರತಿಬಂಧಕವಾಗಿದ್ದೇವೆ… ಅನ್ನುವ ಚಿಂತೆ ಹೋಯಿತು.

ಸತ್ಸಂಗ, ಪ್ರವಚನದಿಂದ ನಮ್ಮನ್ನು ಬಹಳ ಜನರಲ್ಲಿ ಮಾರ್ಪಾಟು ಬಂತು. ಕಾಲ ತಳ್ಳೋದಕ್ಕೆ ಏನೇನೋ ಅಸಂಬದ್ಧಗಳು ಮಾತಾಡೋದು ಹೊಯಿತೀವಾಗ.

ಸಮಯ ವ್ಯರ್ಥವಾಗುತ್ತಿಲ್ಲವಲ್ಲ…. ಅಂತ ಆನಂದ ಒಂದುಕಡೆ… ನಮ್ಮ ಕೆಲಸಗಳ ಮೇಲೆ “ಆತ್ಮಪರಿ ಶೀಲನೆ” ಮಾಡಿಕೊಳ್ಳೋದು ಒಂದು ಶುದ್ಧವಾದ ಪದ್ಧತಿಯೂ ಆಗುತ್ತದೆ. ನಮ್ಮಲ್ಲಿ ಬಂದಿದ್ದ ಬದಲಾವಣೆಗೆ ನಮಗೆ ತೃಪ್ತಿಯಾಗಿದೆ. ಆದರೆ….. ಒಂದು ವಿಷಯ ಮಾತ್ರ ನಮ್ಮನ್ನು ಕಾಡುತ್ತಿದೆ. ‘ಎದೆ’ ಕಾಯಿಲೆದಿಂದ ನರಳುತ್ತಿದ್ದ ‘ಭಾಸ್ಕರಯ್ಯ’ ರವರಿಗೆ – ಮನೆಯಲ್ಲೇ ಕೂತುಕೊಂಡು… ಆದಾಯ, ವ್ಯಯಗಳು, ಮಾಡಬೇಕಾಗಿರೋ ಕಾರ್ಯಕ್ರಮಗಳ ‘ಲಿಸ್ಟ್’
ತಯಾರುಮಾಡುವ ಕೆಲಸ ಒಪ್ಪಿಸಿದ್ದೇವೆ.

ಒಂದು ದಿನ ಭಾಸ್ಕರಯ್ಯ ‘ಮರಣ’ ಹೊಂದಿದಾಗ… ನಮ್ಮಲ್ಲಿ ಒಬ್ಬನನ್ನ ಕಳೆದುಕೊಂಡಿದ್ದ ದುಃಖವನ್ನು ತೆಡೆದುಕೊಳ್ಳಲು ಆಗಲಿಲ್ಲ! ಎಪ್ಪತ್ತೈದು ಜನ ಭಾಸ್ಕರಯ್ಯನ ಭೌತಿಕ ಶರೀರವನ್ನು ನೋಡಲು ಬಂದು, ಅವನ “ಕೊನೆ ಮಜಲು” ಗೆ ದೇಹವನ್ನು ಹೊತ್ತುದಕ್ಕೆ ಖಂಡಿತವಾಗಿಯೂ ಭಾಸ್ಕರಯ್ಯನ ‘ಆತ್ಮ’ ಸಂತೋಷ ಹೊಂದಿರುತ್ತೆ ಅನಿಸಿತು ನನ್ನ ಮನಸಿಗೆ.

ಎಲ್ಲೋ ಹುಟ್ಟಿ, ಇನ್ನೆಲ್ಲೋ ಬೆಳೆದು, ಎಲ್ಲೆಲ್ಲೊ ಉದ್ಯೋಗಮಾಡಿ… ನಿವೃತ್ತ ಜೀವನದಲ್ಲಿ… ಹೀಗೆ… ಸ್ವಲ್ಪ ಕಾಲ ಸೇರಿ – ಇದ್ದಿದಕ್ಕೆ… ಇಷ್ಟು ಸಾನ್ನಿಹಿತ್ಯವಾಗುವದು ಬಹಳ ‘ವಿಚಿತ್ರ’ ಅನಿಸುತ್ತೆ.

ಸ್ಮಶಾನದವರೆಗೂ ಭಗವನ್ನಾಮ ಜಪಿಸುತ್ತಾ ಅನುಸರಿಸಿ, ನಮ್ಮ ಗೆಳಯನಿಗೆ “ತುದಿ ಬೀಳ್ಕೊಡು” ಹೇಳಿ- ಬಾಧಾ ತಪ್ತ ಹೃದಯಗಳಿಂದ ಹಿಂದಕ್ಕೆ ಬಂದಿದ್ದೇವೆ.

ನಾವೂ ಒಂದು ದಿನ ಹೀಗೆ ಪಯಣವಾಗಿ ಹೋಗಬೇಕಲ್ಲವೆ???…. ಅನ್ನುವ “ಸತ್ಯ” ಅಲ್ಲಿದ್ದ ಎಲ್ಲರ ಮುಖದಲ್ಲೂ ಓಚರವಾಯಿತು.
*****
ತೆಲುಗು ಮೂಲ: ಆಖರು ಮಜಿಲೀ / ಹೈಮವತಿ ಆದೂರಿ