ಮರೆಯದಿರಣ್ಣ ಕನ್ನಡವ;
ಜನ್ಮ ಕೊಟ್ಟ ಈ ಕನ್ನಡವ
ಮಾತು ಕೊಟ್ಟ ನುಡಿಗನ್ನಡವ
ತುತ್ತು ಕೊಟ್ಟ ತಾಯ್ಗನ್ನಡವ ||
ಹಳಿಯದಿರಣ್ಣ ಕನ್ನಡವ;
ತಾಯ್ಮೊಲೆ ಉಣಿಸಿದ ಕನ್ನಡವ
ವಿದ್ಯೆಯ ನೀಡಿದ ಕನ್ನಡವ
ಸಭ್ಯತೆ ಕಲಿಸಿದ ಕನ್ನಡವ
ಅಳಿಸದಿರಣ್ಣ ಕನ್ನಡವ;
ಶತಶತಮಾನದ ಕನ್ನಡವ
ರಕ್ತದಿ ಬಂದಿಹ ಕನ್ನಡವ
ಉಸಿರಲಿ ನಿಂತಿಹ ಕನ್ನಡವ
ಕೆಡಿಸದಿರಣ್ಣ ಕನ್ನಡವ;
ದೇವಿ ಶಾರದೆಯ ಕನ್ನಡವ
ವೀಣೆ ಮಿಡಿಯುವ ಕನ್ನಡವ
ಹೃದಯ ತುಂಬಿದ ಕನ್ನಡವ
ಕಾಪಾಡಣ್ಣ ಕನ್ನಡವ;
ಕವಿ ಚೇತನದ ಕನ್ನಡವ
ಸವಿ ಹಾಡಿನ ತಿಳಿಗನ್ನಡವ
ನೆಮ್ಮೈಸಿರಿಯ ಕನ್ನಡವ
*****


















