ಕಿವಿಗಡಚಿಕ್ಕುವಂತೆ ತಮಟೆಯ ಸದ್ದು ಹಾಯುತ್ತಿದ್ದಾರೆ ಕೂಂಡ ಎಲ್ಲರೂ… ದೊಡ್ಡಮ್ಮ-ಅಂತರಗಟ್ಟಮ್ಮ ಅಕ್ಕ-ತಂಗಿಯರು ಮೊದಲಾಗುವರು ಉಳಿದವರು ದೇವಿಯನು ಹಿಂಬಾಲಿಸುವರು ಕಾಲು ಸುಡದೇ? ಇಲ್ಲ ಎನ್ನುವರು! ಅಗೋ ಲಕುಮಿ ನನ್ನ ನೆರೆ ಮನೆಯವಳು ಹಾಯುತ್ತಿ...
ಗೂಳಿ ಗುಟುಕು ಹಾಕುವುದು ಬಳಿಯಲ್ಲಿದ್ದ ಸರ್ಕಾರಿ ಶಾಲೆಯ ಪಾಳುಬಿದ್ದ ಗೋಡೆಗೆ ಬಡಿದು ಪ್ರತಿಧ್ವನಿಸುತ್ತದೆ. ರಾಜಯ್ಯ ಈ ಶಾಲೆಗೆ ಹೆಡ್‌ಮಾಸ್ತರರಾಗಿ ಬಂದಮೇಲೆ ಶಾಲೆ ಒಂದಿಷ್ಟು ಒಪ್ಪವಾಗಿ ಸುಣ್ಣಬಣ್ಣ ಕಂಡಿದೆ. ಗೋಡೆಗಳ ಮೇಲೆ ಹಿರಿಯ ಕವಿ, ಸಾಹಿತಿಗ...
ಪ್ರೀತಿಯ ಪಳಿಯುಳಿಕೆಯ ಮೇಲೆ ಸಣ್ಣ ಜೋಪಡಿ ಕಟ್ಟಿ ಸುತ್ತ ಗುಲಾಬಿ ಗಿಡ ನೆಟ್ಟಿದ್ದೇನೆ. ಎದೆಗನ್ನಡಿ ದೇವದಾರು ಚೌಕಟ್ಟಿಗೆ ಅವುಚಿಕೊಂಡಿದೆ.. ತಿಂಗಳ ಬೆಳಕಿಗೆ ಬರದಿರಲಿ ಬೆಂಕಿಯುಗುಳುವ ಖಯಾಲಿ. ಮಾತು ಕತೆ ಸತ್ತ ದಿನಗಳಲ್ಲೂ ದೇಹವೇ ದಾಸ್ತಾನಿನ ಕೋಣ...
ಎಲ್ಲೋ ಕಳಕೊಂಡ ಖಾಲಿ ಪುಟವ ನಿನ್ನ ಕಣ್ಣಲ್ಲೇ ಹುಡುಕುವ ಹಟವ ಕೊಂದುಬಿಡಬೇಕೆಂದಿದೇನೆ ಗೆಳತಿ, ಎಲ್ಲರಂತೆ ಬದುಕುವ ಚಟವ ನನ್ನದಾಗಿಸಿಕೊಳ್ಳುವ ಸಲುವಾಗಿ! *****...
ಆತ್ಮರತಿ ಅಪಾಯಕಾರಿಯಾದದ್ದು. ನಮ್ಮಲ್ಲಿ ಆತ್ಮರತಿ ಮತ್ತು ಆತ್ಮ ವಿಶ್ವಾಸಗಳನ್ನು ಒಂದೇ ಎಂಬಂತೆ ನಂಬಿಸುವ ಆತ್ಮರತಿ ರೋಗಿಗಳು ಇದ್ದಾರೆ. ಆತ್ಮವಿಶ್ವಾಸವು ಮನುಷ್ಯನ ಮಾನಸಿಕ ವಿಕಾಸಕ್ಕೆ ಬೇಕಾದ ಸ್ಥೈರ್‍ಯವನ್ನು ತಂದುಕೊಟ್ಟರೆ, ಆತ್ಮರತಿ ಸ್ವಪ್ರಶಂ...
ಇಬ್ಬರು ಕಳ್ಳರು ಊರನ್ನು ದೋಚಿದರು. ರೈತರ ಕತ್ತು ಮುರಿದರು. ಒಬ್ಬ ಹಸಿದ ತೋಳದಂತೆ ತೆಳ್ಳಗಿದ್ದ. ಇನ್ನೊಬ್ಬ ಜಗದ್ಗುರುವಿನಂತೆ ದಪ್ಪಗಿದ್ದ. ಇಬ್ಬರು ಕಳ್ಳರಲ್ಲಿ ಅಷ್ಟೇಕೆ ವ್ಯತ್ಯಾಸ? ಅವರಲ್ಲೊಬ್ಬ ಒಡೆಯ, ಇನ್ನೊಬ್ಬ ಗುಲಾಮ. ಒಡೆಯ ಕೆನೆಹಾಲು ಕುಡ...
ವಾಸ-ನಾಲ್ಕು ಪುಟಗಳ ಮಧ್ಯೆ ಭಾಷೆ-ವ್ಯಾಕರಣ ಸೂತ್ರಗಳ ಮಧ್ಯೆ ಗಡಿ ಮಡಿಗಳ ಇಕ್ಕಟ್ಟಿನೊಳಗೆ ಹೀಗೆ ಬಿಕ್ಕಟ್ಟಿಗೆ ಸಿಕ್ಕು ಬಾಳಿದರೂ ತರ್ಕದ ತಲೆಮೆಟ್ಟಿ ಹಾಡುತ್ತದೆ ಕಟ್ಟು ಮೀರಿ ಹುಟ್ಟುವ ಪದ್ಯದ ಸತ್ಯ. ಅದರ ದನಿ – ಬಳೆ ನೂಪುರ ಕಾಲುಂಗರ, ಕಳ...
ಸಂಸಾರವೂ ಒಂದರ್ಥದಲ್ಲಿ ಸಮ್ಮಿಶ್ರ ಸರ್ಕಾರವೇ; ಹೊಂದಾಣಿಕೆಯದೇ ಮಂತ್ರ ತಪ್ಪಿದಲ್ಲಿ ದಂಪತಿಗಳು ಅತಂತ್ರ! *****...
ಸುತ್ತಿದ್ದೇನೆ ಎಷ್ಟೋ ನಾಡು ಅಲೆದಿದ್ದೇನೆ ಕಾಡು ಮೇಡು ಉಂಟು ತಾನೆ ಹೊಟ್ಟೆ ಪಾಡು ಆದರೂನು ಕಾಡುವುದು- ಮತ್ತೆ ಅದೇ ನೆನಪು ನೋಡ್ರಿ ಹೇಳುವಂಥ ಊರಲ್ರಿ ಒಳ್ಳೆ ಒಂದು ಹೋಟೆಲಿಲ್ರಿ ಇದ್ದರೂನು ಬೇಕು ಚಿಲ್ರಿ ಆದರೂನು ಕಾಡುವುದು- ಮತ್ತೆ ಅದೇ ನೆನಪು ನ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...







