ಪ್ರೀತಿ ಸತ್ತ ಮನೆಯಲ್ಲಿ

ಗಂಡ ಹಳೆಯ ಪ್ರೇಯಸಿಯ ನೆನಪುಗಳನ್ನು ಎದೆಗೊತ್ತಿಕೊಂಡು ಸಂತೈಸುತ್ತಿದ್ದಾನೆ. ಹೆಂಡತಿ- ಒಂಟಿ ಬಾವಲಿಯ ರೆಕ್ಕೆ ಬಡಿತಗಳನ್ನು ಎಣಿಸುತ್ತಿದ್ದಾಳೆ. ಗೋಡೆಗಳು ಪಿಸುಗುಟ್ಟುತ್ತಿವೆ ಗಂಟಲಲ್ಲಿ ಪ್ರೀತಿ ಸತ್ತಿದೆ ಮನೆಯಲ್ಲಿ. ಗಂಡ ಸವೆದ ಕನಸುಗಳನ್ನು ಗುಡ್ಡೆಹಾಕಿ ಬೆಂಕಿ ಹಚ್ಚುತ್ತಿದ್ದಾನೆ. ಹೆಂಡತಿ-...

ನಿವೃತ್ತಿ ಜೀವನ

ನಾನೀಗ ನಿವೃತ್ತ, ಈಗ ಇಷ್ಟೇ ಕೆಲಸ ಯಾವಾಗ ನೋಡು ಈಗಂದುಕೊಂಡದ್ದನ್ನು ಇನ್ನೊಂದು ಕ್ಷಣಕ್ಕೆ ಮರೆಯುವುದು, ಮರೆತಿದ್ದು ಏನೆಂದು ತಲೆ ಕೆರೆಯುವುದು ಹಗಲಿಡೀ ಕಂಡಕಂಡವರಿಗೆ ಕೊರೆಯುವುದು ರಾತ್ರಿಯೆಲ್ಲಾ ಗೊರೆಯುವುದು ಆಗಾಗ ಏನಾದರೂ ಒಂದಿಷ್ಟು ಬರೆಯುವುದು. *****

ಹೊಸಯುಗ

ಯೋಗ ಪುಷ್ಪಾ ಮೊಗ್ಗು ಬಿಚ್ಚಲಿ ಜೋಗ ಶಕ್ತಿಯ ಚಿಮ್ಮಲಿ, ತ್ಯಾಗ ದೇವತೆ ತಪದ ದೇವತೆ ಆಗು ಭಾರತ ಪುರುಷನೀಂ ಕಲಹ ಯುಗದಿಂ ಕರುಣ ಯುಗಕೆ ಶರಣು ಶರಣು ಎನ್ನು ನೀಂ ಸಾಕು ಕತ್ತಲೆ ಶವದ...
ಹಣದ ಹುಟ್ಟು ಮತ್ತು ಬೆಳವಣಿಗೆ

ಹಣದ ಹುಟ್ಟು ಮತ್ತು ಬೆಳವಣಿಗೆ

೧.೨ ಹಣದ ಹುಟ್ಟು ಮತ್ತು ಬೆಳವಣಿಗೆ ವಿನಿಮಯ ಕ್ರಿಯೆ ಸರಿಯಾಗಬೇಕಾದರೆ ಮೌಲ್ಯವನ್ನು ಮಾಪನ ಮಾಡುವ ಸಾಮಾನ್ಯ ವಾದ ಮಾಪಕವೊಂದು (ಅಳತೆಗೋಲು) ಬೇಕೇ ಬೇಕು. ವಸ್ತು ವಿನಿಮಯ ವ್ಯವಸ್ಥೆಯ ಸೋಲಿಗೆ ಬಹುಮುಖ್ಯವಾದ ಕಾರಣ ಸಾಮಾನ್ಯ ಮೌಲ್ಯಮಾಪನ...

ಹೊಸ ಸಂವತ್ಸರಕ್ಕೆ

ತಲೆಯಲ್ಲಿ ನೆರೆ, ಕೆನ್ನೆ ಹಣೆಯಲ್ಲಿ ಹಳೆಯ ಬರೆ ಮೈ ಸುಕ್ಕು, ಉಸಿರಾಟ ಕೊಳವೆ ತುಕ್ಕು ಕಾಲೆರಡು ಕೋಲು, ಕೈ ಬೀಳು, ದೃಷ್ಟಿಯೆ ಹಾಳು ಹೊಸ ವರ್ಷ ಬಾ ಬಂದು ನಮ್ಮನ್ನಾಳು ಬುದ್ಧಿ, ಶ್ರಮ, ಹಣ...

ಗಳಿಗೆಬಟ್ಟಲ ತಿರುವುಗಳಲ್ಲಿ – ೩೩

ಹಸಿವು ತೀರಿಹೋದರೂ ಹಸಿ ಆರುವುದಿಲ್ಲ ರೊಟ್ಟಿ ಹಸಿವಿನೊಡಲಲ್ಲಿ ಕರಗಿಹೋದರೂ ರುಚಿ ತೀರುವುದಿಲ್ಲ. ಹಸಿವು ರೊಟ್ಟಿಗಳ ಆರದ ತೀರದ ನಿರಂತರ ಪಯಣಕೆ ಮೂಲ ಈ ಪರಸ್ಪರ ಸೆಳೆತ.

ನಿಶಬ್ದದ ತಂಗಾಳಿ ತಾಗಿ ಹೋಯಿತು

-೧- ಭೂಮಿ ಮೇಲೆ ಜಂಗಮನ ಹೆಜ್ಜೆ ತುಳಿಸಿಕೊಂಡರೂ ಪಾದಕ್ಕೆ ನೋವಾಯಿತೇ ಎನ್ನುತ್ತಾಳೆ ಅವ್ವ -೨- ದಡದಲ್ಲಿ ನಿಂತು ಮಾತಾಡಿದೆ ಕನಸುಗಳ ಕಳುಹಿಸಿದೆ ಆಕೆ ದೂರದಿಂದಲೇ ಹೂವಾದಳು -೩- ನಿನ್ನ ಶಬ್ದಕ್ಕೆ ಬದುಕು ಕಟ್ಟುವ ಕಸುವು...

ಸಪ್ನ

ಮಲಗಿದಾಗಲೆಲ್ಲಾ ಅವೇ ಕನಸುಗಳು ಮರುಕಳಿಸಿ ಅಂಕು ಡೊಂಕು ಕತ್ತಲೆದಾರಿ ಕಂದರದಲಿ ನನ್ನೊಗಿದು ಬಿಡುತ್ತದೆ ಬೆಚ್ಚಿ ಬಿದ್ದು ಎದ್ದು ಕೂರುತ್ತೇನೆ. ಮುಳುಗಿದನೋ ತೇಲಿದನೋ ಈಜಿದನೋ ಕಿತ್ತು ಕಿತ್ತು ಕಿಬ್ಬೊಟ್ಟೆಯ ನರಗಳೆಲ್ಲಾ ಪರ್ವತದ ಗುಡ್ಡೆ ರಾಶಿ ಕತ್ತಲ...