ಪಂಚಪೀಠದ ಗುರುವು ನಕ್ಕರೆ
ಪೃಥ್ವಿ ಕುಲುಕುಲು ನಗುವದು
ಮಳೆಯು ಸುರಿವುದು ಹೊಳೆಯು ಹರಿವುದು
ಬೆಳೆಯು ಲಕಲಕ ಹೊಳೆವುದು ॥
ಇವರೆ ಸ್ಥಾವರ ಇವರೆ ಜಂಗಮ
ಇವರೆ ಮುಕ್ತಿಯ ಮಹಿಮರು
ಇವರೆ ವಿಶ್ವದ ಶಾಂತಿ ದೂತರು
ಶಿವನ ಪ್ರೀತಿಯ ಕೊಡುವರು ॥
ಪಂಚ ಗುರುಗಳು ಎಲ್ಲಿ ಬರುವರು
ಅಲ್ಲಿ ಶಿವಧೋ ಎನ್ನುವೆ
ಪಂಚ ಭೂತವ ಲಿಂಗ ಗೈವರು
ಅಲ್ಲಿ ಶಿವಶಿವಾ ಕೂಗುವೆ ॥
ಶಾಂತಿ ಪ್ರೀತಿ ನೇಹ ನೀತಿ
ತ್ಯಾಗದರ್ಥವೆ ಗುರುಗಳು
ಜಗವೆ ಆಲಯ ಮನವೆ ಲಿಂಗವು
ಭುವನ ದೇಗುಲ ಮಹಿಮರು ॥
*****


















