ಏರಬೇಕೆ? ಹೇಗೆ?
ಈ ಬೆಟ್ಟಗಳು ಮಂಜು ರಾಶಿಗಳಲ್ಲ.
ಮಂಜು ಕವಿದ ಶಿಖರಗಳಲ್ಲಿ ಮೆಟ್ಟಿಲು ಇಲ್ಲ.

ಅಲ್ಲಿರುವ ನಿನಗೆ
ಇಲ್ಲಿರುವ ನಾನು
ಕಳಿಸಿದ ದುಃಖದ ಸುದ್ದಿ:

ಒಮ್ಮೊಮ್ಮೆ ಎದ್ದಾಗಲೂ
ನೆತ್ತರೊಳಗಿನ ಪರ್ವತ
ನನ್ನ ಕೆಳಕ್ಕದುಮಿ
‘ಇಲ್ಲ’ ಅನ್ನುತ್ತದೆ.
‘ಬೇಡ’ ಅನ್ನುತ್ತದೆ.
ಸ್ವಂತ ದುಃಖದ
ಕಿರು ಸಂಕಟದಲ್ಲಿ ಕತ್ತಲು ನನ್ನನ್ನು
ಕಟ್ಟಿದೆ.
*****
ಮೂಲ: ಅಡೊನಿಸ್

ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)