“ನಾನು ನಿರಪರಾಧಿ. ನನ್ನದೇನು ತಪ್ಪಿಲ್ಲ” ಎಂದು ಮಗುವಿನಂತೆ ಅಳುತಿತ್ತು ಚೂಪಾದ ನಾಲಿಗೆ ಚಾಚಿ. “ನಾನು ಹಿಡಿದುಕೊಂಡೆ ಅಷ್ಟೇ” ಎಂದಿತು ಕೈ. “ನನ್ನ ನೀನು ಎತ್ತಿ ಮರಕ್ಕೆ ಏಟು ಹಾಕಲಿಲ್ಲವೇ? ಎಂದಿತು ಅಳುವನ್ನು ನಿಲ್ಲಿಸದ ಮಗುವಿನಂತೆ. ಕಡೆದು ಕೆಳಗೆ ಉರಿಳಿದ ಮರ ಕೈಗೆ ಹೇಳಿತು “ನೀನು ಕ್ರೂರಿ, ಘಾತುಕ. ಆ ಕೊಡಲಿಯನ್ನೇಕೆ ಅಪರಾಧಿ ಮಾಡುವೆ? ನಿನ್ನ ವಿವೇಕ ಎಲ್ಲಿ ಹೋಗಿತ್ತು?” ಎಂದಿತು ಮರ. ಮಾತಿಲ್ಲದಾದ ಮಾನವ.
*****