ಕಿಲ್ಲೆ ಕಿಮ್ಮತ್ತುಗಳ ಹೊತ್ತ ಗೋರಿ-
ಗಳು ತೀಡಿ ತೀಡಿ ಕಿಚ್ಚು ಹುಚ್ಚೆದ್ದು ಹೋರಿ;
ದಕ್ಕಿಸಿಕೊಳ್ಳುವೆನೆಂದು ದಾಪುಗಾಲು
ಹಾಕುತ್ತಿದ್ದೇನೆ
ಹಾರುವ ಹದ್ದು ಸುತ್ತ ಸಂಕೀರ್ಣ ಸದ್ದು
ಮೂಳೆಗಳ ಕೂಳೆ ಮೇಲೆ ಕಾಲು
ಹಾಕಿ
ಆಟ ಆಡುತ್ತಿದ್ದೇನೆಂದು ಅನ್ನಿಸಿದರೂ
ನಿನ್ನ ಉಬ್ಬು ತಗ್ಗು ಹಳ್ಳಕೊಳ್ಳಗಳಲ್ಲಿ
ಕಾವೇರಿ
ಯಾಗಿ
ಹರಿದು ನನ್ನಲ್ಲಿ ನಿನ್ನ ಮುಳುಗು-
ಗೊಳಿಸಬೇಕೆಂಬ ನೆರೆ ಮೊಳಗು
ಬರುತ್ತಿದ್ದೇನೆ
ನಿನ್ನ ಹರಹು ಮೊರಹು ಅನಂತ ಸುಳಿಗೆ
ಸಿಕ್ಕಿ ಮುಳುಗಿ ತೊಳಗಿ ಮೇಲೇರುವ ತುಡಿತ ನನಗೆ
ಕಾಳಿಂಗ ಬದುಕ ಬಗ್ಗಿ ಒಗ್ಗಿಸುವ ಸುಗ್ಗಿ ಕನಸಿನ ಮಳಿಗೆ.
*****