ಮನೆಯ ಮುಂದೆ ಬೃಹದಾಕಾರವಾಗಿ ಬೆಳದ ಮರದಿಂದ ಉದುರುವ ಒಣಗಿದ ಎಲೆ, ಕಡ್ಡಿ ಕಸ, ಹುಳು ಹುಪ್ಪಟ್ಟೆ ಸಹಿಸಲಾರದೆ ಮನೆಯ ಗಂಡು ಮಕ್ಕಳು, ತಂದೆ ಎಷ್ಟು ಬೇಡವೆಂದರು ಕೇಳದೆ ಕಡಿಸಿ ಹಾಕಿದರು. ಶಾಕೋಪ ಶಾಕೆಯಾಗಿ ಹರಡಿ ಹಸಿರು ತಂಪನ್ನು ನೀಡುತ್ತಿದ್ದ ಮರವನ್ನು ಕಡಿಸಿ ಹಾಕಿದ್ದು ವೃದ್ಧ ತಂದೆಯ ಮನಸ್ಸಿಗೆ ಅತೀವ ನೋವಾಯಿತು. ಕಡಿದ ದಿಮ್ಮಿಗೆ ಮಕ್ಕಳು ಕೆಲಸಕ್ಕೆ ಹೋದ ಮೇಲೆ ವೃದ್ಧ ದಿನವೂ ನೀರೆರೆಯುತಿದ್ದ. ದಿಮ್ಮಿಯ ಎಕ್ಕೆಲಗಳಲ್ಲಿ ಚಿಗುರೊಡೆಯಲಾರಂಭಿಸಿತು. ಇದನ್ನು ಕಂಡ ಇವರ ಗಂಡು ಮಕ್ಕಳು ಮಳೆಗಳನ್ನು ತಂದು ದಿಮ್ಮಿಯ ಮೈಗೆ ಹೊಡೆದರು. ಚಿಗುರುತಿದ್ದ ದಿಮ್ಮಿ ಪೂರ್ತಿ ಸತ್ತಿತು. ಮನೆ ಒಳಗೆ ವೃದ್ಧ ತಂದೆ ಹೃದಯಾಘಾತದಿಂದ ಪ್ರಾಣ ಬಿಟ್ಟ.
*****