ಅವರ ಮನೆಯಲ್ಲಿ ಹಣ್ಣು ಹಣ್ಣು ಮುದುಕ ಸ್ವರ್ಗಸ್ತನಾಗಿದ್ದ. ಮನೆಯವರು ಅಜ್ಜನ ಕೊನೆಯ ಯಾತ್ರೆಗೆ ಸಿದ್ಧ ಮಾಡುತಿದ್ದರು. ಎಲ್ಲರು ಒಂದಲ್ಲ ಒಂದು ಕೆಲಸದಲ್ಲಿ ತೊಡಗಿದ್ದರು. ಅಳುವವರು ಯಾರೂ ಕಾಣಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಹೃದಯ ವಿದ್ರಾವಕ ರೋದನ ಶುರುವಾಯಿತು. ಎದೆ ಬಡಿದು ಕೊಂಡು ನಾಲ್ಕು ರಸ್ತೆಗಳಿಗೆ ಕೇಳುವ ಹಾಗೆ ಅತ್ತರು. ಅಜ್ಜನನ್ನು ಹೊಗಳಿ ಇನ್ನು ಕೆಲವರು ಅತ್ತರು. “ಇಷ್ಟು ಮಮತೆ ತೋರಿ ಅಳುವವರು ಯಾರು?” ಎಂದರು ಒಬ್ಬರು. ಉತ್ತರ ಸಿಗುವುದರ ಒಳಗೆ ಅವರು ತೇವ ವಿಲ್ಲದ ಕಣ್ಣನ್ನು ಒರೆಸಿಕೊಂಡು ನೋಟಿನ ಕಂತೆಯನ್ನು ಜೇಬಿನಲ್ಲಿ ಇಟ್ಟು ಕೊಂಡು ನಗುನಗುತ್ತಾ ಹೋದರು.
*****