ನಾಚಿಗಿ ಬರತೈತೆ ನನಗಂಡಾ

ನಾಚಿಗಿ ಬರತೈತೆ ನನಗಂಡಾ ನಿನಕೂಡ
ನಾಚಿಗಿ ಬರತೈತೆ ||ಪಲ್ಲ||

ಬಾಯಾಗ ಹಲ್ಲಿಲ್ಲ ಕಣ್ಣಾಗ ಎಣ್ಣಿಲ್ಲ
ಸಗತಿಲ್ಲ ನಡಿಗೀ ಸುಗತಿಲ್ಲ
ಜೋತಾಡಿ ಹೋಗ್ತೀದಿ ಮಾತಾಡಿ ಬೀಳ್ತೀದಿ
ಮೈಮ್ಯಾಲ ವೈನಾ ನಿನಗಿಲ್ಲ ||೧||

ಗೆಳತೇರು ಗರತೇರು ಗ್ವಾಡಂಬಿ ಚಲುವೇರು
ತೇರಂತ ಅಂತಾರ ನಿನಕಂಡ
ಗಂಡನ್ನ ಜಗ್ಗಾಕ ಹಗ್ಗೊಂದ ಬೇಕಂತ
ನಗತಾರ ಸೂಳ್ಯಾರ ಮನಗಂಡ ||೨||

ಮಿಸ್ಯಾಗ ಕರಿ ಇಲ್ಲ ಮಗ್ನ್ಯಾಗ ಹಸನಿಲ್ಲ
ತುಟಿಯಾಗ ತಂಬೂರಿ ನಿನಗಿಲ್ಲ
ತಲಿತುಂಬ ಬುರುಬೂರಿ ಹೇನಂತ ಕೂರೆಂತ
ಕೌವ್ವಂತ ನಗತಾರ ಹಗಲೆಲ್ಲ ||೩||

ಹರೆಯಾದ ಹುಡಗೀಯ ಬೆಡಗೀಯ ಮಡದೀಯ
ಮಗ್ಗಲಕ ಕರದೀಯ ಕುರ್ರಂತ
ಪಂಚೇತಿ ಬಂತಲ್ಲ ಸಂತ್ಯಾಗ ಚಿಂತ್ಯಾತ
ಚಿರ್ಚಾದ ಚಲುವೆಲ್ಲ ಚುರ್ರಂತ ||೪||

ಗಂಡಂದ್ರು ಗಂಡಲ್ಲ ಹೆಣ್ಣಂದ್ರು ಹೆಣ್ಣಲ್ಲ
ಹುಟ್ಟಿದ್ರು ಹುಟ್ಟಿಲ್ಲ ನನಗಂಡಾ
ಮೆಟ್ಟಿದ್ರು ಮೆಟ್ಟಿಲ್ಲ ಕಟ್ಟಿದ್ರು ಕಟ್ಟಿಲ್ಲ
ಹೊಲವಿಲ್ಲ ಮನಿಯಿಲ್ಲ ಮಹಗಂಡಾ ||೫||
*****
ಗಂಡ = ನಿರಾಕಾರ ಪರಮಾತ್ಮ
ಗೆಳತೇರು = ಐಹಿಕ ಭೋಗಗಳು
ಮಡದಿ = ಆತ್ಮ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಳುವವರು ಯಾರು?
Next post ಸುಟ್ಟು ಬಿಡಿ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

cheap jordans|wholesale air max|wholesale jordans|wholesale jewelry|wholesale jerseys