ಕರೆಯುತ್ತೇನೆ ಮನಸೇ
ಕನಸಿನ ಕೋಣೆಯೊಳಗೆ
ಬೇಲಿಗಟ್ಟಿದ ಭಾವದೊಳಗೆ
ಅಲ್ಲಿ ಮಾತಾಡೋಣ ಮೌನದ ಬಗೆಗೆ
ಮೌನವಾಗೋಣ ಮಾತಿನ ಬಗೆಗೆ
ಬೆಳೆಯುತ್ತ ಬೆಳೆಯುತ್ತ ಹೋಗೋಣ
ಸಿಕ್ಕದ ಸುಖವನ್ನು,
ಹುಡುಕುತ್ತ ಹುಡುಕುತ್ತ ಹೋಗೋಣ
ಕಾಣದ ಮುಖವನ್ನು
ಗುಬ್ಬಚ್ಚಿ ಗೂಡಲ್ಲಿ ಜೋಪಾನ ಮಾಡೋಣ
ತೂಗಲಾರದ ತೊಟ್ಟಿಲನ್ನು,
ಕಳೆದು ಹೋಗದ ಹಾಗೆ ಹತ್ತುತ್ತ ಹೋಗೋಣ
ಕಾಣದ ಮೆಟ್ಟಿಲನ್ನು!
*****