ಪಾರ್ಕಿನಲ್ಲಿ ಹುಡುಗ ತನ್ನ ಪ್ರೇಯಸಿಗಾಗಿ ದಿನಗಟ್ಟಲೆ ಕಾದು ಕುಳಿತ. ಅವಳು ಬರಲೇ ಇಲ್ಲ. ಅವನ ಹೃದಯ ಬರಿದಾಯಿತು. ವಿರಹದ ನೋವಿನಲ್ಲಿ ಮರದ ಎಲೆಗಳನ್ನು ಕಿತ್ತಿ ಬೋಳುಮಾಡಿದ. ಮಾರನೆಯ ದಿನ ಪಾರ್ಕಿಗೆ ಬಂದು ನೋಡಿದ. ಪ್ರಿಯತಮೆಯ ಶವ ಮರದ ರೆಂಬೆಯಲ್ಲಿ ತೂಗಾಡುತ್ತಿತ್ತು. ಮರ ಹೇಳಿತು- “ನನ್ನ ಬೋಳಾದ ರೆಂಬೆ ಕೈಯ್ಯಲ್ಲಿ ನಿನ್ನ ಪ್ರಿಯತಮೆಯನ್ನು ಹಿಡಿದಿರುವೆ” ಎಂದಿತು. ಪ್ರೀತಿಸಿದ ಹುಡುಗ ಶವವನ್ನು, ಬೋಳು ಮರವನ್ನು ತಬ್ಬಿಕೊಂಡು ಅಳುತ್ತಲೇ ಇದ್ದ.
*****
Latest posts by ಪರಿಮಳ ರಾವ್ ಜಿ ಆರ್ (see all)
- ಶಿವಲಿಂಗ - April 13, 2021
- ಮುದುಕನ ಬಾಲ್ಯ - April 6, 2021
- ಹರಟೆಮಲ್ಲಿ - March 30, 2021