ಹಸಿವು ನಿದ್ರಿಸುವುದಿಲ್ಲ
ರೊಟ್ಟಿಗೆ ಎಚ್ಚರವಿಲ್ಲ.
ಗಾಢ ನಿದ್ದೆಯಮಲಿನಲಿ
ರೊಟ್ಟಿ ಕಾಲಕ್ಕೆ
ಮೊದಲೇ ಪ್ರೌಢ.
ಕೂದಲು ಸೀಳುವ ಎಚ್ಚರದಲಿ
ಹಸಿವೆಗೆ ಸದಾ ನವ ಯೌವನ.
*****