ಮಲ್ಲಿ – ೧೭

ಮಲ್ಲಿ – ೧೭

ಬರೆದವರು: Thomas Hardy / Tess of the d’Urbervilles

ಕೆಂಪಿಯೂ ಬಂದು ರಾಣಿಯವರನ್ನು ಕಾಣಿಸಿಕೊಂಡಳು.

ರಾಣಿಯೂ ಅವಳನ್ನು ವಿಶ್ವಾಸದಿಂದ ಕರೆದು ಕೂರಿಸಿಕೊಂಡು “ಏನು ಕೆಂಪಮ್ಮಾ, ಬಂದೆ?” ಎಂದು ವಿಚಾರಿಸಿದಳು.

“ಬುದ್ದಿ, ತಮ್ಮ ಪಾದ ತಿನ್ನೋದು ತಮ್ಮಅನ್ನ, ಇರೋದು ತಮ್ಮ ಮನೆ, ಉಡೋದು ತಮ್ಮ ಸೀರೆ ಹಿಂಗಿರೋವಾಗ ತಾನು ಕೆಂಪೀನ ಕೆಂಪಮ್ಮ ಅಂದರೆ ಬದುಕಬೋದಾ? ಏನಾಗಲಿ, ತಾವು ದಣಿಗಳು, ನಾವು ಪಾದದ ಗುಲಾಮರು. ನನ್ನ ಕೆಂಪೀ ಅಂತಲೇ ಕರೀಬೇಕು ತಮ್ಮ ಪಾದ.”

“ನೋಡು, ಮೊಳಕೆ ಬಂದು ಬೆರಳ ಗಾತ್ರ ಇದ್ದರೆ ಸೊಸಿ ಅಂತೀವಿ; ಅದು ರಟ್ಟೆ ಗಾತ್ರ ಆದಾಗ ಗಿಡ ಅಂತೀವಿ. ತೊಡೆ ಗಾತ್ರ ಆದಾಗ ಮರ ಅಂತೀನಿ. ಹಂಗೆ ಮಲ್ಲಿ ಬರೋಕೆ ಮುಂಚೆ ಕೆಂಪಿ ಈಗ ಕೆಂಪಮ್ಮ, ಮುಂದೆ ನಾವಂದುಕೊಂಡಂಗೇ ಬುದ್ಧಿಯೋರು ಮೆಚ್ಚಿಕೊಂಡು ಮಾಡಿಕೊಂಡರೆ ನಮ್ಮಂಗೆ ನೀನೂ ಕೆಂಪಮ್ಮಣ್ಣಿ. ಅದಕ್ಕೆನಾ? ಇರಲಿ. ಅದೇನು ನೀನು ಬಂದದ್ದು ಹೇಳು.”

” ಇನ್ನೇನು ಬಡವರು ಬುದ್ದೀ ಅಂತ ಬರೋದು ಇನ್ಯಾಕೆ? ಏನಾದರೂ ಕೀಳೋಕೆ ! ಏನಾದರೂ ಕೇಳೋಕೆ ? ತಮ್ಮ ಪಾದ, ಕೇಳಿಕೋ ಅಂದರೆ ಕೇಳಿಕೋತೀನಿ.”

“ಹೇಳು – ನಾವೂ ಕೇಳೋವ,?

” ಬುದ್ದಿ, ಇನ್ನು ಎಂಟು ದಿನಕ್ಕೆ ಮಲ್ಲಿಗೆ ಹುಟ್ಟಿದಹಬ್ಬ- ಅವೊತ್ತು ಅಲ್ಲಿ ದೊರೆ ಮಗ ಬಂದಿದ್ದಾಗ, ತಾವೇ ಅವಳಿಗೆ ಒಡವೆ ವಸ್ತ್ರಾ ಹಾಕಿ ಸಿಂಗಾರ ಮಾಡಿದ್ದಿರಿ. ಇನ್ನೊಂದು ಸಲ ಹೆಂಗೇ ಸಿಂಗಾರ ಮಾಡಿ ನೋಡಿಬೇಕು ಅನಸ್ತದೆ. ಈ ಮುಕ್ಕ ಯಾವಾಗಲೋ ಏನೋ? ಕಣ್ಣ್ಮುಚ್ಚೋಕೆ ಮುಂಚೆ ನೋಡಬೇಕು ಬುದ್ದಿ.”

“ಇದೇನು. ಮಹಾ! ಖಾಂನದರಿಗೆ ಹೇಳಿದರೆ ಆಗಲಿ ಅಂತಾರೆ, ಆದರೆ, ಈಗ ಇವಳ ಅಳತೆಯೋವು ನಮ್ಮ ಅರಮನೇಲಿ ಇದ್ದಾವೋ ಇಲ್ಲವೋ? ಇಲ್ಲದಿದ್ದರೆ ಮಾಡಿಸಿಯೇ ಬುಡೋದು. ಆಯ್ತು, ಎಷ್ಟು ತುಂಬ್ರದೆ ಅವಳಿಗೆ ?

“ಇದು ಒಂಭತ್ತು ಬುದ್ಧಿ. ”

” ನೋಡಿದೆಯಾ, ವಯಸ್ಸು ಹೆಂಗೆ ಬಂತು? ಆದರೂ ನೀನು ನಿಜನಾಗಿ ಮೊಗಾನ ಚೆನ್ನಾಗಿ ಬೆಳಿಸಿದಿ. ನೋಡಿದರೆ, ಹನ್ನೆರಡು ವರ್ಷದವಳಂಗೇ ಕಾಣ್ತಾಳೆ. ಹಾರುವರ ಮನೇಲಾಗಿದ್ದರೆ ಅವಳಿಗೆ ಆಗಲೇ ಗಂಡು ಹುಡುಕುತಿದ್ದರು.?

“ಅವರು ಉತ್ತಮರು. ನಾವು ಅವರಂಗೆ ಅದೇವಾ ಬುದ್ಧಿ. ಆದರೆ, ದೇವರು ನಮಗೆ ಆ ಕಷ್ಟ ತಪ್ಪಿಸವ್ನಲ್ಲಾ ! ತಾವಿಕೋವಾಗ ನಮಗೇಕೆ ಆ ಸಂಕಟ?”

“ನಮಗೆ ಬುಟ್ಟರೆ, ನಮಗೆ ಗೊತ್ತಿರೋದು ಒಂದೇ ದಾರಿ. ನಮಗೆ ಪಸಂದಾದ್ದೆಲ್ಲ ನಮ್ಮ ಖಾವಂದ್ರಿಗೆ ಮೀಸಲು. ನೀನೊ ಪ್ಪೀಯಾ ? ”

” ಬುದ್ಧಿ ಯೋರ ಮಾತಿಗೆ ಎದುರು ಹೇಳಿ ನಾನ್ಯಾವ ನರಕಕ್ಕೆ ಹೋಗಲಿ?”

“ನಿಮ್ಮ ಮಲ್ಲಣ್ಣ ಏನಂತಾನೋ?”

“ಅವರು ಬುಡಿ ಬುದ್ಧಿ, ದೇವರಂತಾವ್ರು. ನಿಂದು ಮೊಗ, ನೀನೇನಾದರೂ ಮಾಡಿಕೋ ಅಂದರು.”

“ಏನಾದರೂ ಮಾಡಿಕೋ ಅನ್ನೋದು ತಪ್ಪಿಸಿಕೊಳ್ಳೋ ಮಾತು. ಬಾಯಿ ಬುಟ್ಟು ಆಗಲಿ ಅಂದರೆ ಮುಂದಿನ ಮಾತು.”

” ಅದೊ ಆಗಬೊಯ್ದು. ”

“ಹಂಗಾದರೆ ಹೋಗಿ ಕೇಳಿಕೊಂಡು ಬಾ.” * * * *

ಇಂದು ಮಲ್ಲೀಗೆ ಹುಟ್ಟಿದ ಹಬ್ಬ. ಮಲ್ಲಣ್ಣನ ಮನೆಯ ಮುಂದೆ ಒಳ್ಳೇ ಚಪ್ಪರ ಹಾಕಿದೆ… ಅರಮನೆಯವರೇ ಬಂದು ಅದನ್ನು ಸಿಂಗರಿಸಿ ಕಂದೀಲು ಗುಳೋಪು, ಕಟ್ಟಿದ್ದಾರೆ. ಮೇಲು ತೋರಣ, ಚಿತ್ರದ ಛತ್ತು, ಎಲ್ಲಾ ಮದುವೆ ಮಂಟಪಕ್ಕೆ ಇದ್ದೆ ಹಾಗೆ ಇವೆ. ಒಂದು ಕಡೆ ಎತ್ತರವಾದ ಗಾದಿಮಾಡಿ ಅಲ್ಲಿ ರಾಣಿಯವರು ಕುಳಿತು ಕೊಳ್ಳುವುದಕ್ಕೆ ಸೋಫಾ ತಂದು ಹಾಕಿದ್ದಾರೆ. ಎದುರಿಗೆ ಖಾವಂದರು ಬಂದು ಮುಹರ್ತ ಮಾಡಲು ಒಂದು ಸಣ್ಣ ಮಂಟಪ ಕಟ್ಟಿ ಅದನ್ನು ಪುಷ್ಪಗಳಿಂದ ಅಲಂಕರಿಸಿದ್ದಾರೆ. ಮಗ್ಗುಲಲ್ಲಿ ಗಂಧದೆಣ್ಣೆ ಬೆರಿಸಿರುವ ತುಪ್ಪ ಹಾಕಿ ಐದು ಸೊಡರಿನ ಪಂಚಾರ್ತಿಯಂತಹ ದೀಪವನನ್ನು ಹಿಡಿ ದಿರುವ ದೀಪದ ಮಲ್ಲಿಯನ್ನು ಇಟ್ಟಿದ್ದಾರೆ.

ಮಂಟಪದಲ್ಲಿ ಊರಿನ ಮುತ್ತೈದೆಯರೆಲ್ಲಾ ಬಂದು ಕುಳಿತಿ ದ್ದಾರೆ. ಮಲ್ಲೀಗೆ ಮೊಗ್ಗಿನ ಜಡೆ ಹೆಣೆದು ಬಕಾವಲಿಯ ಅಲಂಕಾರ ಮಾಡಿ ಕುಳ್ಳಿರಿಸಿದ್ದಾರೆ. ಮಂಟಪದ ಒಂದು ಕೊನೆಯಲ್ಲಿ ಓಲಗದವರು ಕುಳಿತು ನಾಗಸ್ವರ ಬಾರಿಸುತ್ತಿದ್ದಾರೆ. ಗಂಡಸರೆಲ್ಲರೂ ಮಂಟಪದ ಆಚೆ ನಿಂತ್ಕು ಕುಳಿತು ನೋಡುತ್ತಿದ್ದಾರೆ.

ಮಲ್ಲಣ್ಣ ನಾಯಕನೇ ಅಂದು ರಾಜಕುಮಾರನ ದರ್ಶನಕ್ಕೆ ಹೋದಾಗ ಹೊಲಿಸಿಕೊಟ್ಟಿದ್ದ ರೇಶಿಮೆಯ ನಿಲುವಂಗಿ, ಷರಾಯಿ, ರುಮಾಲುಗಳನ್ನೂ, ವಲ್ಲಿಯನ್ನೂ ಧರಿಸಿ ಮದುವೆಗಂಡಿನ ಹಾಗೆ ಓಡಾಡುತ್ತಿದ್ದಾನೆ. ಬಂದವರನ್ನೆಲ್ಲಾ ಕೈಮುಗಿದು “ಬುದ್ಧಿಯವರು ದಯಮಾಡಬೇಕು” ಎಂದು “ಚಾಪೆಯನ್ನು ತೋರಿಸುತ್ತಿದ್ದಾನೆ. ಆದರೂ ಅವರೆಲ್ಲ “ಬುಡೋ ಮಲ್ಲಣ್ಣ ! ನಾನೇನು ಕೂತುಕೊಂಡು ಹಾಡುಹಸೆ ಕೇಳಬೇಕಾ? ಏನೋ ನಿನ್ನ ಮೊಗೀನಲಂಕಾರ ನೋಡು ಕೊಂಡು ಹೋಗೋವಾ ಅಂತ ಬಂದೋ? ಎನ್ನುತ್ತಾರೆ. ಆ ಚೆನ್ನಾ ಯಿತು, ಬುದ್ಧಿಗೋಳು ತಾವೆಲ್ಲ ಚೆನ್ನಾಗಿರು ಅಂತ ಮೊಗಾನ ಹರಸ ದಿದ್ದರೆ ಅದೀತಾ? ಏನೋ ನಾವು ಬಡಬೊಡ್ಡೀ ಮಕ್ಕಳು ದಿನಾ ತನ್ಮನ್ನೆಲ್ಲಾ ಕರೆಯೋಕೆ ಆದೀತಾ?” ಎಂದು ಉಪಚಾರ ಹೇಳಿ ಎಲ್ಲರನ್ನೂ ಅಲ್ಲಲ್ಲಿ ಕೂರಿಸುತ್ತಿದ್ದಾನೆ. ಎಲ್ಲರೂ ನಾಯಕ ನನ್ನು ನಿರೀಕ್ಷಿಸುತ್ತಿದ್ದಾರೆ

ಕೊಂಬಿನ ಕೂಗು ಕೇಳಿಸಿತು. ಎಲ್ಲರೂ ಸಡಗರದಿಂದ ಸಿದ್ಧ ರಾಗಿ ಅರಮನೆಯ ಹಾದಿಯನ್ನು ನೋಡಿದರು. ಬೆಸ್ತರು ಮೇನಾ ಹೊತ್ತುತಂದರು. ಬಿಳಿಯ ಮೇಲು ಮುಸುಕನ್ನು ಧರಿಸಿ ಜೊತೆಯ ಲ್ಲಿಯೇ ಬಂದಿದ್ದ ದಾಸಿಯು ಮೇನಾದ ಬಾಗಿಲನ್ನು ತೆರೆದಳು. ಒಳಗಿಂದ ರಾಣಿ ಸುಂದರಮ್ಮಣ್ಣಿಯು ಬೆಳಕಿನ ಬೊಂಬೆಯಂತೆ ತನ್ನ ರತ್ನಾಭರಣಗಳ ಕಾಂತಿಯನ್ನು ಚೆಲ್ಲುತ್ತಾ ಇಳಿದಳು. ಕೆಂಪಿಯು ಹೋಗಿ ನೆಲದವರೆಗೂ ಬೊಗ್ಗಿ; ಕಾಲುಮುಟ್ಟಿ ಕಣ್ಣಿಗೆ ಒತ್ತಿಕೊಂಡು ಕರೆದು ಕೊಂಡುಬಂದು ಆಕೆಗೆ ಸಿದ್ಧಮಾಡಿದ್ದ ಉನ್ನತಾಸನದಲ್ಲಿ ಕುಳ್ಳಿರಿಸಿದಳು. ಮುತ್ತೈದೆಯರ ತಂಡವೆಲ್ಲ ಎದ್ದು ಕೈಮುಗಿದು ಸಲ್ಲಿಸಿದ ಗೌರವವನ್ನು ಸ್ವೀಕರಿಸಿದಳು. ತಂಡದಲ್ಲಿ ಕುಳಿತಿದ್ದ ಆ ಹೆಂಗಸರಲ್ಲಿ ಒಬ್ಬೊಬ್ಬರನ್ನಾಗಿ ಕರೆದು ಯೋಗಕ್ಷೇಮಗಳನ್ನು ವಿಚಾರಿಸಿ ದಳು. ಪುರೋಹಿತರು, ಜೋಯಿಸರು, ಶಾನುಭೋಗರ ಹೆಂಡರಿಗೆ ಅಗ್ರ ಗೌರವವು ದೊರಕಿತ್ತು. ಮುತ್ತೈದೆಯರೆಲ್ಲ ಆಕೆಯನ್ನು ನೋಡಿ, “ಇಂಥ ಮಹಾಲಕ್ಷ್ಮಿ ಮನೇಲಿರೋ ವೇಳೆಗೆ ತಾನೇ ನಾಯಕರಿಗೆ ಮಹಾರಾಜರೂ ಮರ್ಯಾದೆ ಮಾಡಿದ್ದು ! ಒಳ್ಳೇ ತಾಯಿಯ ಮಗಳು. ಒಳ್ಳೇ ತಾಯಿ! ಎಲ್ಲಾದರೂ ಹೆತ್ತು ಕಾಲ ಸುಖವಾಗಿರಲಿ” ಎನ್ನುವವರೇ.

ರಾಣಿಯು ಬಂದ ಸಡಗರವು ಅಡಗಿತು ಎನ್ನುವುದರೊಳಗಾಗಿ ಕುದುರೆಗಳ ತಾಳದಂತಹ ಕಾಲಸದ್ದು ಕೇಳಿಸಿತು. ಕಾಲ ಕಡಗಗಳನ್ನು ಹಾಕಿರುವ ಕುದುರೆಗಳು ನರ್ತಕರಂತೆ ರುಲ್ ರುಲ್ ಎಂದು ಕಾಲ ನ್ನಿಟ್ಟುಕೊಂಡು ಗಂಭೀರವಾಗಿ ಬರುತ್ತಿವೆ. ತಲೆಯಮೇಲಿನ ತುರಾಯಿ, ಕತ್ತಿನಲ್ಲಿರುವ ಗೆಜ್ಜೆಗಳು, ಎದೆಯಬಳಿ ತೂಗಾಡುತ್ತಿರುವ ಬಿಳಿಯ ಚಾಮರ, ಮೊಕದಿಂದ ಬಾಲದವರೆಗೂ ಹಾಕಿರುವ ಲೋಹದ ಸಾಮಾನು, ಎಲ್ಲದಕ್ಕಿಂತ ಹೆಚ್ಚಾಗಿ ಆ ಕುದುರೆಗಳು ಆ ಕತ್ತನ್ನು ಘನವಾಗಿ, ಗಂಭೀರವಾಗಿ, ಗತ್ತಿನಿಂದ, ಹೆಮ್ಮೆಯಿಂದಲೋ ಎಂಬಂತೆ, ಎತ್ತಿ ತಿರುಗಿಸಿಕೊಂಡು ಬರುತ್ತಿದ್ದರೆ, ಕುಸ್ತಿಗೆದ್ದು ಬರುತ್ತಿರುವ ಪೈಲ್ವಾ ನಿನ ಝೋಕು ಕಂಡು ನೋಡಿದವರಿಗೆ ಭಲೆ ಎನ್ನಿಸುವಂತಿದೆ.

ಸಾರೋಟು ಬಂದು ಹಾದಿಯಲ್ಲಿ ನಿಂತಿತು. ಕೋಚ್ ಮ್ಯಾನಿನ ಪಕ್ಕದಲ್ಲಿ ಕುಳಿತಿದ್ದ ಜಮಾದಾರನು ಕೆಳಗೆ ಇಳಿದುಬಂದು ಬಾಗಿಲನ್ನು ತೆಗೆದನು. ನಾಯಕನು ಇಳಿಯುತ್ತಿದ್ದ ಹಾಗೆಯೇ ಗಾಡಿಯ ಹಿಂದೆ ಚಾಮರಗಳನ್ನು ಧರಿಸಿನಿಂತಿದ್ದ ಇಬ್ಬರು ಇಳಿದು ಬಂದು ನಾಯಕನ ಹಿಂದೆ ನಿಂತರು. ಬೃಹತ್ಕಾಯನಾದ ನಾಯಕನ ಕಿವಿಗಳಲ್ಲಿ ಅಕ್ಕ ಪಕ್ಕದಲ್ಲಿ ಕಟ್ಟಿರುವ ಸಣ್ಣ ಟಾರ್ಚ್ಗಳಂತೆ ವಜ್ರದ ಹತ್ತ ಕಡುಕು ಮರೆಯುತ್ತಿತ್ತು ; ಕೈ ಮುಗಿಯುತ್ತಿರುವವರಿಗೆ ಕೈಮುಗಿಯಲು ಎತ್ತಿದ ಆತನ ಕೈಯ ಉಂಗುರಗಳು ಸುತ್ತಲೂ ನಡೆಯುತ್ತಿರುವ ದೀವಟಗೆಯ ಸಲಾಂಗಳೆಂಬಂತಿತ್ತು ; ಆಡಂಬರವಿಲ್ಲದೆ ಗೌರವವಾಗಿ ಮಾನವತಿ ಯಾದ ಹೆಣ್ಣಿನಂತೆ ಮರೆಯಲ್ಲಿರುವ ಆತನ ಐಶ್ವರ್ಯದ ಗುರುತೆಂಬಂತೆ, ರತ್ನದ ಥೋಡಾ ಅಂಗಿಯ ತೋಳಿನಲ್ಲಿ ಮರೆಯಾಗಿರುವ ಷರ್ಟಿನ ಕಫ್ ಹಿಂಜಿ ಥಳಥಳ ಎನ್ನುತ್ತಿತ್ತು. ಮಹಾರಾಜ, ಚಕ್ರವರ್ತಿಗಳ ಅನು ಗ್ರಹವು ಭಾರತೀ ದೇವಿಯ ಕತ್ತಿಗೆ ಹಾಕಿರುವ ದಾಸ್ಯಶೃಂಕಲೆಗಳಂತೆ ಮೆರೆಯುತ್ತಿದ್ದುವು.

ಸೋಟಾ ಜಮಾದಾರನು ಮರ್ಯಾದೆಯಾಗಿ ಜನಸಂದಣಿ ಯನ್ನು ಬಿಡಿಸಿಕೊಂಡು ಹೊರಟನು. ದಾರಿಯುದ್ದಕ್ಕೂ ಕೆಂಪು ಕಿಂಕಾಪು ಹಾಸಿತ್ತು. ಮಲ್ಲಣ್ಣನು ನಡುಕಟ್ಟಿಕೊಂಡು ಮುಂದೆ ಬಂದು ಅಡ್ಡಬಿದ್ದು, ತನ್ನ ಮನೆಗೆ ಬಂದ ದೇವರಂತೆ ನಾಯಕನಿಗೆ ಗೌರವವನ್ನು ಒಪ್ಪಿಸಿದನು. ಅದನ್ನು ನೋಡಿ ಜನ್ಮ ಆ ಕಾರ್ಯವನ್ನು ತಾವೇ ಮಾಡುತ್ತಿರುವಸ್ತು ಗೌರನದಿಂದೆ ಸಂಭ್ರಮದಿಂದ, ಸಂತೋಷ ದಿಂದೆ ಕರತಾಡನ ಮಾಡಿದರು.

ನಾಯಕನು ಬಂದು ತನಗಾಗಿ ವಿರಚಿತವಾಗಿದ್ದ ಭದ್ರಾಸನದಂತಹ ಬೆಳ್ಳಿಯ ಕುರ್ಚಿಯಲ್ಲಿ ಕುಳಿತನು. ಗಾಂಭೀರ್ಯವೇ ಮೂರ್ತಿಮತ್ತಾಗಿ ಬಂದಿರುವಂತೆ ಎಲ್ಲರ ಕಣ್ಣಿಗೂ ಕಾಣುತ್ತಿದ್ದ ನಾಯಕನು ಎದುರಿಗೆ ಪುಷ್ಪಾಲಂಕೃತವಾದ ಮಂಟಪದಲ್ಲಿ ಪುಷ್ಪುಲಂಕೃತೆಯಾಗಿ ಊರಿಗೆ ಬಂದ ವನದೇವಿಯಂತಿರುವ ಮಲ್ಲಿಯನ್ನು ನೋಡಿ ಚಕಿತನಾದನು. ಎದೆಯು ಬೆದರಿತು. ಮನಸ್ಸು ಬೆಚ್ಚಿತು. ತಾನು ಊರವರೆಲ್ಲರ ನಡುವೆ ಇರುವನೆಂಬುದೊ ಒಂದು ಗಳಿಗೆ ಮರೆತು ಹೋಯಿತು. ಹೋಗಿ ಅವ ಳನ್ನು ಅನಾಮತ್ತು ಎತ್ತಿಕೊಂಡು ಮುತ್ತಿನ ಸುರಿಮಳೆ ಸುರಿಸಬೇಕು ಎನ್ನಿಸಿತು. ಆದರೆ ಗೌರವ. ಅದರಿಂದ ಏರಿಬಂದ ಹುಚ್ಚು ಹೊಳೆ ಯನ್ನೂ ಧೈರ್ಯವಾಗಿ ಗೌರವಮರ್ಯಾದೆಗಳ ಕಟ್ಟೆಯು ತಡೆಯಿತು.

ರಾಣಿಯು ಬಂದಾಗಿನಿಂದಲೂ ನಡೆಯುತ್ತಿದ್ದ ವಾಲಗನು ನಾಯ ಕನು ಬಂದು ಆಸನಸ್ಥನಾದ ಮೇಲೆ ನಿಂತಿತು. ಹೆಂಗಸರ ಹಾಡುಗಳು ಆರಂಭವಾದುವು. ಹಾಡು ಆದಮೇಲೆ ಆರತಿಯಾಯಿತು.

ಮಲ್ಲಿಯು ಅಷ್ಟು ಹೊತ್ತೂ ಗಂಭೀರವಾಗಿ ಕುಳಿತಿದ್ದಳು. ಎಲ್ಲಿ ಯಾವಾಗ ರೆಪ್ಪೆ ಬಡಿಯುವಳೋ ! ಅಂತೂ ಅನಿಮಿಷಳಾಗಿಯೇ ಕುಳಿತಿದ್ದಂತೆ ಎಲ್ಲರಿಗೂ ತೋರುವುದು, ತನ್ನ ತಲೆಯಲ್ಲಿರುವ ಜಡೆಯ ಮಲ್ಲಿಗೆಯ ಮೊಗ್ಗಿಗೂ ಬೇಕೆಂದರೆ ಅಷ್ಟು ಶುಭ್ರತೆಯನ್ನು ಕೊಡುವ ಆ ನಿರ್ಮಲ ದೇಹಕಾಂತಿ, ಅವಳ ಸುತ್ತಮುತ್ತಲಿನ ಹೂಗಳಿಗೆಲ್ಲಾ ಗೌರವವನ್ನು ಕೊಟ್ಟಿತ್ತು. ಗುಲಾಬಿಯ ಬಣ್ಣದ ತೆಳುವಾದ ಸೀರೆ ಉಡಿಸಿ ಅದರ ನೆರಿಯನ್ನು ಕಾಲಬಳಿ ಚೆಲ್ಲಿದ್ದರೆ, ಅವಳಿನ್ನೂ ಕನ್ನೆ ಮೈ ನೆರೆಯದ ಹುಡುಗಿ, ಎನ್ನುವುದಕ್ಕೆ ಯಾರಿಗೂ ತೋರದು : ಒಳ್ಳೆಯ ಹದಿನಾರು ವರ್ಷದ ಹೊಸಜವ್ವನದ ಮೈಯುಬ್ಬಿನ ತರುಣಿಯಂತೆ ಕಾಣುತ್ತಿದ್ದಾಳೆ. ಭೋಗಲಕ್ಷ್ಮಿಯ ಸೌಭಾಗ್ಯವನ್ನು ಎರಕ ಹೊಯ್ದು ಇಟ್ಟಂತೆ, ಅದು ರಸಾವೇಶದಿಂದ ಕರಗಿ ಕೆಳಗಿಳಿದು ಚೆಲ್ಲಿದಂತೆ ಆ ನೆರಿಯ ಹರಹು ಕಾಣಿಸುತ್ತಿದೆ. ಆ ದುಂಡುತೋಳು ಅಗಲವಾದ ಎದೆಗೆ ಕಾವಲಿರುವ ಸಿಪಾಯಿಗಳಂತಿವೆ. ಕುಳಿತಿರುವ ಝೋಕು, ಮಹಾರಾಣಿಗೆ ಠೀವಿಯನ್ನು ಕಲಿಸುವಂತಿದೆ. ಎಲ್ಲರ ಬಾಯಲ್ಲೂ, ಒಂದೇಮಾತು: “ಈ ಮಲ್ಲಣ್ಣನ ಮನೆಗೆ ಎಲ್ಲೋ ಮಾದೇವಿ ಬಂದವಳೆ ಕಣೋ ! ನಮ್ಮ ಖಾವಂದರನ್ನ ಬಿಟ್ಟು ಈ ಲೋಕದಲ್ಲೇ ಇನ್ನು ಯಾರೂ ಈ ಹೆಣ್ಣಿಗೆ ತಕ್ಕೋರಿಲ್ಲ.” ಅರಮನೆಯ ಪುರೋಹಿತರು ಅರಮನೆಯಿಂದ ಅಪ್ಪಣೆಯಾಗಿದ್ದ

ಖಿಲ್ಲತ್ತನ್ನು ಮಂತ್ರ ಪೂರ್ವಕವಾಗಿ ಹರಸಿ ಮಲ್ಲೀಗೆ ಕೊಟ್ಟರು. ಅದನ್ನು ಸ್ವೀಕರಿಸುದಾಗಲೂ ಅವಳು ಅರಮನೆಗೇ ಅನುಗ್ರಹ ಮಾಡುವಳಂತೆ ಕುಣಿಸುತ್ತಿದ್ದಾಳೆ. ಆ ಗತ್ತನ್ನು ಕಂಡು, ಆ ಗಾಂಭೀರ್ಯವನ್ನು ನೋಡಿ, ನಾಯಕನಿಗೂ, ನಾಯಕನ ರಾಣಿಗೂ ಬಹಳ ಸಂತೋಷ, ಇಬ್ಬರಿಗೂ ಆಶ್ಚರ್ಯ. “ಬಡವನ ಮನೆಯಲ್ಲಿ ಬೆಳೆದ ಈ ಮುಕ್ಕಳಿಗೆ ಇಷ್ಟು ಗಾಂಭೀರ್ಯ ಎಲ್ಲಿಂದ ಬಂತು?” ಎಂದು ಇಬ್ಬರೂ ಬೆರಗಾಗಿ ಹೋದರು. ಆ ಸಭೆಯಲ್ಲಿ ಮಲ್ಲಿಯ ಗಾಂಭೀರ್ಯ ನೋಡಿ ಸೋಲದವರು ಒಬ್ಬರೂ ಇರಲಿಲ್ಲ.

ಎಲ್ಲರಿಗೂ ಗಂಧ ಪುಷ್ಪ ತಾಂಬೂಲಗಳಾಯಿತು. ಇನ್ನು ಹಸೆಯಿಂದ ಏಳುವ ಕಾಲ. ನಾಯಕನು ಅವಸರವಾಗಿ ಆಳನ್ನು ಕಣ್ಣು ಸನ್ನೆಯಿಂದ ಬರಮಾಡಿಕೊಂಡು, ” ನಮಗೆ ದೂರದಿಂದಲೇ ಕೈಮುಗಿಯಬೇಕು. ಆಗೋ ಮರ್ಯಾದೆ ಯೆಲ್ಲ ಅಲ್ಲೇ ಜನಾನಾಗೇ ಆಗಬೇಕು ಅಂತ ಮಲ್ಲಣ್ಣನಿಗೆ ಹೇಳಿಬಾ” ಎಂದನು. ನಾಯಕನ ಅಪ್ಪಣೆ ಮಲ್ಲಣ್ಣನ ಮೊಕ ಪೆಚ್ಚಾಗುವಂತೆ ಮಾಡಿತು. ಅವನು ಕೆಂಪೀಗೂ ಹೇಳಿದನು. ಕೆಂಪಿಯು ಹೋಗಿ ಮಗಳಿಗೆ ಹೇಳಿದಳು. ಮಲ್ಲಿಯ ಹಿಮ ಶುಭ್ರವಾದ ಮುಖವು ಅಸ ಮಾಧಾನದ ಕೆಂಪಿನಿಂದ ದಂತದ ಬಣ್ಣವಾಯಿತು. ಕೂಡಲೇ ಅನಿರೀ ಕ್ಷಿತವಾಗಿ ಥಟ್ಟನೆ ಎದ್ದು, ಶಾಂತವಾದ ಶರಧಿಯು ತನ್ನ ದ್ರವತ್ವ ಸ್ವಭಾವಾನುಗುಣವಾಗಿ ಚಲಿಸುನಾಗ ತೋರುವ ಸಣ್ಣ ತರಂಗಗಳಂತೆ ಮುಸಿಮುಸಿ ನಗುತ್ತಾ ನೇರವಾಗಿ ನಾಯಕರ ಬಳಿಗೆ ಹೋಗಿ ಆತನ ಪಾದಗಳಲ್ಲಿ ತಲೆಯಿಟ್ಟಳು.

ನಾಯಕನ ಅಪ್ಪಣೆಯನ್ನು ನಿರ್ಲಕ್ಷಿಸಿದ ಮಗಳ ದಿಟ್ಟತನವನ್ನು ಕಂಡು ತಾಯಿ ತಂದೆಗಳು ಅವಾಕ್ಕಾದರು. ಸುಗ್ರೀವಾಜ್ಞೆಯ ನಾಯಕನ ಕೋಪಕ್ಕೆ ತಾವು ಗುರಿಯಾದರೇನುಗತಿ ಎಂದು ನಡುಗಿ ದರು- ಆದರೂ ಅವಳಿಗೆ ಉಪನದಿಯು ಮಹಾನದಿಯನ್ನು ಸೇರು ವಾಗ ಇರುವ ಸಹಜವಾದ ಸರಳಭಾವವಿತ್ತು. ಹೊರಗೆ ಹೋಗಿ ಚೆನ್ನಾಗಿ ಮೇದು ಬಂದಿರುವ ಹಸುವು ತನ್ನ ಗೊತ್ತಿನಲ್ಲಿ ಹೋಗಿ ನಿಂತು ಕೊಳ್ಳುವಷ್ಟು ಸಹಜನಾಗಿ ಬಂದು ಪಾದಾಭಿನಂದನ ಮಾಡಿದ ಮಲ್ಲಿಯ ದಿಟ್ಟತನವು ನಾಯಕನಿಗೆ ಬೇಡವಾಗಲಿಲ್ಲ; ಅವಳು ತನ್ನ ಹತ್ತಿರ ಬರು ತ್ತಿದ್ದರೆ, ಭೋಗ ಸಾಮ್ರಾಜ್ಯವೊಂದು ತನ್ನನ್ನು ಹುಡುಕಿಕೊಂಡು ಬರು ತ್ತಿರುವಂತೆ ಅವನಿಗೆ ತೋರಿತಲ್ಲದೆ, ತನ್ನ ಅಪ್ಪಣೆಯನ್ನು ಮೀರಿದ ಅಪ ರಾಧಿಯಂತೆ ಕಾಣಿಸಲಿಲ್ಲ.

ಅವಳ ನಡತೆಯೆಂತೂ, ಅಬ್ಬಾ ಅಲ್ಲಿದ್ದವರು ಅದನ್ನು ನೋಡಿ “ಭರೇ ಪಟ್ಟದ ಹಸಾಕಣೋ! ” ಎಂದು ಅಂದೇ ಬಿಡಬೇಕು. ಆದರೆ ನಾಯಕನ ಸಾನ್ನಿಧ್ಯ: ಅಲ್ಲಿ ಉಸಿರು ಕೂಡ ಗಟ್ಟಿಯಾಗಿ ಬಿಟ್ಟು ಅಭ್ಯಾಸವಿಲ್ಲ. ಅದರಿಂದ ಮನಸ್ಸು ಮನಸ್ಸಿನೊಡನೆ ಮಾತನಾಡಿ ಕೊಂಡು, ಕಣ್ಣು ಕಣ್ಣಿನೊಡನೆ ಗುಟ್ಟಾಗಿ ಪಿಸು ಮಾತನಾಡಿಕೊಳ್ಳು ವಂತೆ ಕಾಣಿಸಿತು. ಅವಳು ನಡೆಯುವಾಗ ಕಾಲಿನ ಕಡಗ, ಸರಪಣಿ, ಪಿಲ್ಲಿಗಳ ಗೆಜ್ಜೆ ಗಂಟೆಗಳು ಹಿತವಾಗಿ ಮಿತವಾಗಿ ನುಡಿಯುತ್ತ ಎಲ್ಲರ ಮನಸ್ಸಿನಲ್ಲೂ ಇದ್ದ “ಭಲೆ, ಹೆಣ್ಣೆ, ನಿನ್ನಂತಾ ಚೆಲುವೆ ಇರಲಿಲ್ಲ ಬರೋದಿಲ್ಲ ” ಎಂಬ ಅಭಿನಂದನ ವಾಕ್ಕುಗಳಂತೆ ಶೋಭಿಸು ತಿದ್ದವು.

ಇಂತಹ ಗೌರವ ಹೊಸದಲ್ಲದ ನಾಯಕನಿಗೂ ಅವಳು ಬಂದು ಕಾಲುಮುಟ್ಟಿ ನಮಸ್ಕಾರ ಮಾಡಿದಾಗ ಏನು ಮಾಡಬೇಕೋ ತಿಳಿಯದೆ ಭಾವಪ್ರಲಯವಾಗಿ, ಅವಳೇ ಅನುಗ್ರಾಹಕಳಾಗಿ, ತಾನು ಅನು ಗ್ರಾಹ್ಯನಾಗಿದ್ದರೆ ಹೇಗೋ ಹಾಗೆ ನಡೆದುಕೊಂಡನು. ಎದ್ದು ಅವಳನ್ನು ಎತ್ತಿ ಅರ್ಧಾಲಿಂಗನದಿಂದ ಗೌರವಿಸಿ ಎಡಗೈಯ ಕಿರುಬೆರಳಲ್ಲಿದ್ದ ಉಂಗುರವನ್ನು ತೆಗೆದು ಅವಳ ಕೈಯಲ್ಲಿಟ್ಟು ಮನಃಪೂರ್ವಕವಾಗಿ ಹರಸಿ, ತಲೆ ಸವರಿ, ಬೀಳ್ಕೊಟ್ಟನು. ನಾಯಕನು ಭದ್ರಾಸನದಿಂದ ಮೇಲಕ್ಕೆದ್ದುದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಪುರೋ ಹಿತರು ಜೋಯಿಸರು ಒಬ್ಬರ ಮುಖ ಇನ್ನೊಬ್ಬರು ನೋಡಿದರು.

ಮಲ್ಲಿಯು ನಾಯಕನ ಅನುಗ್ರಹವನ್ನು ಸ್ವೀಕರಿಸಿ ನೇರವಾಗಿ ಬಂದು ರಾಣಿಗೆ ನಮಸ್ಕಾರ ಮಾಡಿದಳು. ರಾಣಿಯು ತುಂಬು ಮನ ಸ್ಸಿನಿಂದ ಎದ್ದು ಅವಳನ್ನು ಆಲಿಂಗಿಸಿಕೊಂಡು ಮಗ್ಗುಲಲ್ಲಿ ಕುಳ್ಳಿರಿಸಿ ಕೊಂಡಳು; ನಾಯಕನ ವರ್ತನೆಯಿಂದ ಅರ್ಧ ಚಕಿತವಾಗಿದ್ದ ಜನ ರಾಣಿಯ ವರ್ತನೆಯಿಂದ ಪೂರ್ಣವಾಗಿ ವಿಸ್ಮಯಗೊಂಡಿತು. ಎಲ್ಲರ ಕಣ್ಣುಗಳೂ ಕುತೂಹಲವಾಗಿ ತನ್ನನ್ನೇ ನೋಡುತ್ತಿರಲು ರಾಣಿಯು ಕೆಂಪಿಯನ್ನು ಕರೆದು ಅಲ್ಲಿ ಫಲ ಪೂರ್ಣವಾಗಿದ್ದ ತಟ್ಟೆಯೊಂದನ್ನೂ ವೀಳೆಯವನ್ನೂ ತರಿಸಿಕೊಂಡಳು. ಸಭೆಯ ಕುತೂಹಲವಿಮ್ಮಡಿಸಿತು. ಎಲ್ಲರೂ ಕಣ್ಣೊಂದರಲ್ಲೇ ತಮ್ಮ ಜೀವಿತವನ್ನೆಲ್ಲಾ ಕೇಂದ್ರಿಕರಿಸಿರುವ ವರಂತೆ ನೋಡಿದರು.

ರಾಣಿಯು ಎದ್ದು ಮಲ್ಲಿಯನ್ನು ತನ್ನ ಆಸನದಲ್ಲಿ ಕುಳ್ಳಿರಿಸಿ ತನ್ನ ಕತ್ತಿನಲ್ಲಿದ್ದ ರತ್ನ ಖಚಿತವಾದ ಬಂದಿಯನ್ನು ತೆಗೆದುಕೊಂಡು ನಾಯ ಕನ ಮುಖನನ್ನು ಪರಮ ಪ್ರೀತಿಯಿಂದ ಚುಂಬಿಸುವಳಂತೆ ನೋಡಿ, ಆತನ ಪಾದಗಳನ್ನು ಮುಟ್ಟಿ ಕಣ್ಣೊತ್ತಿಕೊಂಡು ಅಪ್ಪಣೆಯನ್ನು ಕೇಳುವ ವಿನಯದಿಂದ ಇನ್ನೂ ಒಮ್ಮೆ ನೋಡಿ, ಆ ಬಂದಿಯನ್ನು ಮಲ್ಲಿಯ ಕತ್ತಿಗೆ ಹಾಕಿದಳು. ತಾಂಬೂಲವನ್ನು ಕೊಟ್ಟು ಮಗ್ಗುಲಲ್ಲಿ ಅವಳನ್ನು ಆಲಿಂಗಿಸಿಕೊಂಡು ಕುಳಿತಳು.

ಸಭೆಯು ಆಶ್ಚರ್ಯಮೂಕವಾಯಿತು. ನಾಯಕನು ಅಮೃತಪುತ್ಥಳಿಯನ್ನು ಆಲಿಂಗಿಸಿದವನಂತೆ ಪುಳ ಕಿತನಾಗಿ, ಧರ್ಮದೇವತೆಗೆ ಪ್ರೇಮದಿಂದ ಭಕ್ತಿಯಿಂದ ಪೂಜೆಯ ನ್ನೊಪ್ಪಿಸಿ ಪ್ರಸಾದಗ್ರಹಣ ಮಾಡುವ ಭಕ್ತನ ಮನೋಭಾವದಿಂದ ಪತ್ನಿಯನ್ನು ನೋಡಿ ವಿಸ್ಮಯಾವಿಷ್ಟನಾದನು.

ಮಲ್ಲಣ್ಣನು, ಕಣ್ಣು ಅಂಗೈಯಗಲವಾಗಿರಲು, ಬಾಯಿ ತೆರೆದು ಕೊಂಡು, ತಾನು ನೋಡಿದುದನ್ನೇ ನೆಂಬಲಾರದವನಂತೆ, ಮೈಮೇಲೆ ಅರಿವಿಲ್ಲದೆ ಮರವಾದಂತೆ ನಿಂತಿದ್ದನು.

ಕೆಂಪಿಯು ಒಂದು ಕೈಯ್ಯ ನಡುವಿನಮೇಲೆ, ಇನ್ನೊಂದು ಕೈಯ್ಯ ಪರಮಾಶ್ಚರ್ಯದ ಭಾವವನ್ನು ತಡೆಯಲಾರದೆ ಕೆಳಕ್ಕೆ ಬಿದ್ದು ಹೋಗುವತಲೆಗೆ ಊರಿಕೊಟ್ಟಂತೆ ಗಲ್ಲವನ್ನು ಅಂಗ್ಲೆಯಲ್ಲಿ ಹಿಡಿದಿರಲು ನೆಟ್ಟ ಕಣ್ಣಿನ ನಿಡುನೋಟದಿಂದ ರಾಣಿಯೊಡನೆ ಇರುವ ಮಗಳನ್ನು ನೋಡುತ್ತಿದ್ದಾಳೆ.

ಸಭೆಯಲ್ಲಿರುವವರು ತಾವು ಗಂಡೋ ಹೆಣ್ಣೋ ಎಂಬುದು ಮರೆತು ಚಿತ್ರಾರ್ಪಿತ ಪ್ರತಿಮೆಗಳಾಗಿದ್ದಾರೆ. ಎಲ್ಲರೂ ಅವಾಕ್ಕಾಗಿದ್ದಾರೆ.

ರಾಣಿಯ; ನಿಲುಗನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನೇ ನೋಡಿ ಕೊಳ್ಳುತ್ತ, ರೂಪ ಸೌಭಾಗ್ಯ ದರ್ಶನದಿಂದ ಸಂತುಷ್ವಳಾಗಿರುವ ಗಂಧರ್ವ ಕನ್ನೆಯಂತೆ ಸಂತುಷ್ಪಳಾಗಿದ್ದಾಳೆ.

ಮಲ್ಲಿಯು, ಆ ಗರ್ಭ ಶ್ರೀಮಂತರ ಮನೆಯಲ್ಲಿ ಹುಟ್ಟಿ ಅಖಂಡ ಶ್ರೀಮಂತನ ಕೈಹಿಡಿದಿರುವ ಆ ಕುಲಸ್ತ್ರೀರತ್ನದ ಜೊತೆಯಲ್ಲಿ ಸಾಣೆ ಬಡಿದ ಪಟ್ಟವಜ್ರಕ್ಕೆ ವರ್ತಿಯಾಗುವ ಹಲಗೆವಜ್ರದಂತೆ ಏನೂ ವಿಕಾರವಿಲ್ಲದೆ, ಗುಲಾಬಿಯ, ಮುಳ್ಳಿನ ಪೊದೆಯಲ್ಲಿ ಆರಳಿದರೂ ಸಹಜ ವಾದ ಪರಿಮಳವನ್ನು ಮುತ್ತಿಗೆ ಕೈಗಾಣಿಕೆಗೊಟ್ಟು, ಸನ್ನಿವೇಶ ವೊಪ್ಪಿಸಿದ ಮೆಚ್ಚಿನ ಪ್ರತಿಕಾಣಿಕೆಯನ್ನು ಅಂಗೀಕರಿಸಿ ಗರ್ವಗಂಧ ರಹಿತವಾಗಿ ಗಂಭಿರವಾಗಿ ಮೆರೆಯುವ ವಿಕ್ಟೋರಿಯಾ ಗುಲಾಬಿಯಂತೆ ಮುದ್ದಾಗಿ ಕುಳಿತಿದ್ದಾಳೆ.

ನಾತಿದೂರದಲ್ಲಿ ನಿಂತಿದ್ದ ಗಾಡಿಗೆ ಕಟ್ಟಿದ್ದ ಸುಲ್ತಾನ್, ರಾಣಿ, ಎರಡು ಕುದುರೆಗಳೂ ಈ ಕಾರ್ಯವನ್ನು ಸಂಪೂರ್ಣವಾಗಿ ಅನುಮೋದಿಸಿದ ಪ್ರಕೃತಿದೇವಿಯಿಂದ ಪ್ರಚೋದಿತವಾದಂತೆ ಏಕಕಾಲದಲ್ಲಿ ಕೆನೆದುವು. ಮಗ್ಗುಲಲ್ಲಿ ನಿಂತಿದ್ದ ಹಕೀಂನು, ಅದನ್ನು ಒಪ್ಪಿಕೊಂಡವ ನಂತೆ ಎರಡನ್ನೂ ಪ್ರೀತಿಯಿಂದ ಮುದ್ದಿಸುತ್ತಾ “ಬೊಹೆತ್ ಅಚ್ಛೇ ಕರೇ ಬೇಟೋಂ” ಎಂದು ಅವುಗಳ ಕೆನ್ನೆಯನ್ನು ಸವರಿದನು.

ಮೃಗಗಳ ಧ್ವನಿ ಅದರೊಡನೆ ಬಂದ ಮನುಷ್ಯವಾಕ್ಕು ಸಭೆಯ ವರನ್ನೆಲ್ಲ ಎಚ್ಚರಿಸಿತು. ನಾಯಕನ ಮುಖವು ಉತ್ತಮವಾದ ಮದ್ಯ ರಾಜನನ್ನು, ಪಾನಮಾಡಿದವನ ಮುಖದಂತೆ ಕೆಂಪಾಗಿತ್ತು. ಆದರೂ ಉದ್ವೇಗವನ್ನೂ ತೋರಿಸದೆ, ಎಲ್ಲವೂ ಯಥಾಸ್ಥಿತವಾಗಿರುವಾಗ ಇರುವಂತೆ ಎದ್ದು, ಎಲ್ಲರಿಗೂ ಯಥೋಚಿತವಾಗಿ ಪ್ರಣಾಮಾದಿ ಗೌರವಗಳನ್ನು ಸಲ್ಲಿಸಿ ಹೊರಟುಹೋದನು.

ಸಭೆಯು ವಿಸರ್ಜಿತವಾಯಿತು. ಎಲ್ಲರೂ ಒಪ್ಪಿಸಿದ ಮರ್ಯಾ ದೆಗೆ ಪ್ರತಿ ಮರ್ಯಾದೆಗಳನ್ನು ಒಪ್ಪಿಸಿ, ರಾಣಿಯೂ ಎದ್ದಳು. “ಕೆಂಪಮ್ಮಣ್ಣಿ, ಇತ್ತ ಬಾ. ಮಲ್ಲನ್ನುಣ್ಣಿ ಇವೊತ್ತು ಅರಮನೆಯಲ್ಲಿದ್ದು ನಾಳೆ ಇಲ್ಲಿಗೆ ಬರುತ್ತಾಳೆ.” ಎಂದಾಗ ಅವಳಿಗೆ ಪೂರ್ಣ ಎಚ್ಚರ ವಾಯಿತು.

ಮಲ್ಲಿಯು ಮಲ್ಲಮ್ಮಣ್ಣಿಯಾಗಿ ಸುಂದರಮ್ಮಣ್ಣಿಯೊಡನೆ ಹೊರ ಟಳು. ಪುರೋಹಿತರೂ ಜೋಯಿಸರೂ ಅವರ ಪತ್ನಿಯರೂ ಅವ ರೊಡನೆ ಮೇನಾದವರೆಗೂ ಬಂದರು. ಮಲ್ಲಣ್ಣ ಕೆಂಪಮ್ಮಣ್ಣಿ ಇಬ್ಬರೂ ಮೂಕರಂತೆ ಅವರಹಿಂದೆ ಹೋಗಿ ಬೆಸ್ತರು ಮೇನಾ ಎತ್ತಿ ದಾಗ ರಾಣಿಗೆ ಕೈಮುಗಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಂಗಳಮಯ
Next post ನವಲ ಕಂಡೀರಾ ನವಲ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…