ಮೌನವಾಗಿಯೇ ಏಕೆ?

ಮೌನವಾಗಿಯೇ ಏಕೆ?
ಮನದನ್ನೆ
ನಾ ತಡವಾಗಿ ಬಂದುದಕೆ|
ಓಡೋಡಿ ಬಂದಿಯೇ ನಾ, ಕೊಂಚ
ನಿನಗೆ ಬೇಸರವಾಗಿರುವುದಕೆ||

ಎಲ್ಲಿಯೂ ಅತ್ತ ಇತ್ತ ನೋಡಲಿಲ್ಲ
ಇನ್ನೆಲ್ಲಿಯೂ ಚಿತ್ತ ಹರಿಸಿಲ್ಲಾ|
ಸದಾನಿನ್ನ ಚಿತ್ರ ಮನದಲಿರಿಸಿ
ದುಡಿದು ದಣಿದು ಬಂದಿಹೆ ಬಳಿಗೆ
ಪ್ರೀತಿ ತೋರಿ ಬಳಿಬಾರೆ ನನ್ನೊಲವೇ||

ನಿನಗಾಗಿ ಏನನು ತರಲಿಲ್ಲ ಇಂದು
ನನ್ನನೇ ನಿನಗಾಗಿ ತಂದು|
ಪ್ರೇಮ ಭಿಕ್ಷೆಯ ಬೇಡುತ
ನಿನ್ನ ಬಳಿ ಸುಳಿದಾಡುತಿರುವೆನಿಂದು|
ಒಮ್ಮೆ ಒರೆಗಣ್ಣಲಿನೋಡೆನ್ನ
ಚೆಲುವೆ, ನಾ ಧನ್ಯನಾಗಿಬಿಡುವೆ||

ಇಂದಿನಿಂದಲೇ ಶಪಥ ಮಾಡಿಬಿಡುವೆ
ನಾನು ದಿನಾಲು ಇನ್ನೂ ಬೇಗನೇ ಬರುವೆ|
ಬರುವಾಗ ನೀ ಬಯಸಿದನೆಲ್ಲವ ತರುವೆ
ದಯೆ ತೋರು ಓ ನನ್ನ ಚೆಲುವೇ|
ಬಳಲಿ ಬಾಯಾರಿ ಬಂದಿರುವೆ
ಪ್ರೇಮ ಸುಧೆಯ ನೀಡೆಯಾ ಒಲವೇ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿರಿ ಕಥೆ
Next post ಚೈತನ್ಯ ಧಾಮ

ಸಣ್ಣ ಕತೆ

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಪ್ರಕೃತಿಬಲ

  ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…