ಚೈತನ್ಯ ಧಾಮ

ಹರಿಯೆ ನಿನ್ನ ನಂಬಿ ನಾನು ಬಾಳಿಹೆನು
ನನ್ನ ನೀನು ಕೈ ಹಿಡಿದು ನಡೆಸು ಬಾ
ನಿನ್ನ ತೊರೆದು ನಿನ್ನ ಮಾಯೆ ಬೇಡೆನಗೆ
ನಾನು ನಡೆದಲಿ ನೀನು ಜೊತೆಯಾಗಿ ಬಾ

ನೀನು ಕರುಣಾಸಿಂಧು ದಯಾಸಾಗರ
ನಿನ್ನೊಳಗೆ ಎಲ್ಲಿಹದು ಭೇದ ತಾರತಮ್ಯ
ಪಾಪಿಯಾಗಲಿ ದುರಾಚಾರಯಾಗಿರಲಿ
ಸಜ್ಜನರೆಲ್ಲರಿಗೂ ನಿನ್ನ ಕೃಪೆ ಅದಮ್ಯ

ನೀನು ರಚಿಸಿದೆ ಈ ಭವಸಾಗರ ಆಗರ
ನಿತ್ಯ ನಾನು ಇದರಲ್ಲಿ ಮುಳುಗಿ ತೇಲಿಹನು
ನಿನ್ನ ಪ್ರೀತಿಯೆಂಬ ನಾವೆ ನೀಡಿ ಎನ್ನ
ಬದುಕಿಸಬೇಕು ನೊಂದು ಬೆಂದಿಹನು

ಎನ್ನೆದೆಯಲಿ ಪುಟಿಯಲಿ ನಿನ್ನಪಡೆ ದಾಹ
ಅರೆಗಳಿಗೆ ನಿನ್ನ ಮರೆತು ನಾ ಬಾಳದಿರಲಿ
ನಿನ್ನ ರೂಪ ಎನ್ನ ಕಂಗಳಲ್ಲಿ ತುಂಬಿರಲಿ
ಮಾಣಿಕ್ಯ ವಿಠಲನಿಗೆ ಚೈತನ್ಯ ಧಾಮವಾಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೌನವಾಗಿಯೇ ಏಕೆ?
Next post ಧಾರವಾಡದ ಅಶ್ವರತ್ನ

ಸಣ್ಣ ಕತೆ

 • ತಿಮ್ಮರಯಪ್ಪನ ಕಥೆ

  ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ತಿಮ್ಮರಾಯಪ್ಪನ ಬುದ್ಧಿವಾದ

  ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…