ಒಂದು ಗುಡಿಯಲ್ಲಿ ಹರಿಕಥೆ ನಡೆಯುತ್ತಿತ್ತು. ದಾಸರು ಪರಿಸರ ಪ್ರಿಯರು. ದೇವರಷ್ಟೇ ಭೂಮಿತಾಯಿಯನ್ನೂ ಪ್ರೀತಿಸುತ್ತಿದ್ದರು. ನೆರದ ಜನ ಅಶಕ್ತಿಯಿಂದ ಹರಿಕಥೆ ಕೇಳುತಿದ್ದರು. “ಭಕ್ತಿಗೆ, ಮುಕ್ತಿಗೆ ಮಾರ್ಗವನ್ನು ತಿಳಿಸುವೆ ಮನುಜರೆ! ಕೇಳಿ, ಕಿವಿಗೊಟ್ಟು” ಎಂದರು. ಒಂದು ಬೇವಿನ ಮರ ನೆಡಲು ನಿಮಗೆ ಆರೋಗ್ಯ, ಶಕ್ತಿ ಬರುವುದು. ಒಂದು ಬಿಲ್ವ ಮರವನ್ನು ನೆಟ್ಟರೆ ನಿಮ್ಮಲ್ಲಿ ಭಕ್ತಿ ಉಕ್ಕುವುದು, ಬೇವು, ಮಾವು, ತೆಂಗು, ಬಿಲ್ವ ಇಂತಹ ವಿಧ ವಿದಧ ಮರಗಳನ್ನು ನೆಟ್ಟರೆ ನಿಮಗೆ ಮುಕ್ತಿಯ ಸ್ವರ್ಗ ಸಿಗುವುದು” ಎಂದರು. ಇದು ಹರಿಕಥೆಯಲ್ಲ ಹಸಿರು ಉಳಿಸುವ ಸಿರಿಕಥೆ ಎಂದು ತಲೆ ತೂಗಿದರು.
*****