ಕಾಲಕ್ಕೆ ತಕ್ಕಂತೆ ಕೆತ್ತಿ
ತುಕ್ಕು ಹಿಡಿದ ಮೊಳೆ ಕಿತ್ತು ಹೊಸದೊಂದ ಹೊಡೆದು
ಗೊರ ಗೊರ ಚಾಟಿಗೆ ಸರಸರ ನೀರುಬಿಟ್ಟು
ಹೊಸದು ಹುರಿಮಾಡಿ ಹೊಸೆದು
ನಡೆಯುತ್ತದೆ ನಿಲ್ಲದ
ರಿಪೇರಿ
ತಿರುಗುತ್ತದೆ ಅನಾದಿ ಅನಂತ
ಬುಗುರಿ.
*****
ಕಾಲಕ್ಕೆ ತಕ್ಕಂತೆ ಕೆತ್ತಿ
ತುಕ್ಕು ಹಿಡಿದ ಮೊಳೆ ಕಿತ್ತು ಹೊಸದೊಂದ ಹೊಡೆದು
ಗೊರ ಗೊರ ಚಾಟಿಗೆ ಸರಸರ ನೀರುಬಿಟ್ಟು
ಹೊಸದು ಹುರಿಮಾಡಿ ಹೊಸೆದು
ನಡೆಯುತ್ತದೆ ನಿಲ್ಲದ
ರಿಪೇರಿ
ತಿರುಗುತ್ತದೆ ಅನಾದಿ ಅನಂತ
ಬುಗುರಿ.
*****