ಇಂತಿಷ್ಟೇ ಆಯುಷ್ಯ ನಿನ್ನದು
ತಗೋ ಈ ರತ್ನ ಹವಳ ಮುತ್ತು
ಬದುಕಿ ಉಳಿಯುವೆ ಬಹಳಷ್ಟು ವರ್‍ಷ –
ಸಾವಿರ ನೋಟುಗಳು ಕೊಟ್ಟು
ಉಂಗುರ ಹಾಕಿಕೊಂಡು ಹರಬರುತ್ತಲೇ
ಕಾರಿಡಾರ್‌ನಲ್ಲಿ ಬಿದ್ದು ಸತ್ತ ಈತ –
ಆತ ಸಾಯುವುದು ಗೊತ್ತಿದ್ದೇ
ಎದೆಯೊಡಸಿ ಹಣ ಕಿತ್ತದ್ದು
ಜ್ಯೋತಿಷ ಮನಸಾರೆ ಒಳಗೊಳಗೇ ನಕ್ಕ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)