ತೆರೆಗಳೊಡನೆ ತಿಳ್ಳಿಯಾಡಲು ಬಂದ ಗಾಳಿಗೆ ಬುರುಗಿನ ಬೆಳ್ಳಿಯನಿತ್ತು, ಕಳಿಸಿದ ಸಮುದ್ರರಾಜ: ಬಿಡಿಸಲು ಬಂದ ಹರಿಗೆ ಕಮಲವನೇರಿಸಲಿಲ್ಲವೆ ಗಜೇಂದ್ರ? ಮುಗಿಲೊಳಗಿಂದ ಬೆಳಕು ಕರೆವ ದಿನಮಣಿಗೆಂದು ಬೆಳ್ಳಿ ಕಟ್ಟನೊಂದನಣಿಗೊಳಿಸಿದನು ಸಾಗರಪತಿಯು,- ಆಕಾಶದರಮನೆಯ ನೀಲಿಮತೆಗೆ ನೆಲಗಟ್ಟೆನಲು! ನೌಕೆಯು ಸಾಗಿರೆ ನೇರವಾಗಿ ...

ಮಸಣದಲ್ಲಿ ಅವರು ಎಷ್ಟೋ ಕಲ್ಲುಗಳನ್ನು ನೆಟ್ಟಿದ್ದರು. ಅವರ ಕುಟುಂಬಕ್ಕೆ ಆಧಾರ ಸ್ತಂಭಗಳಂತೆ ಗೋರಿಕಲ್ಲುಗಳೊಂದಿಗೆ ಬಾಂಧವ್ಯ, ಬಂಧುತ್ವ ಇವರ ಬಾಳಿಗೆ ಬೆಸುಗೆಯಾಗಿತ್ತು. ಇವರ ಮುದ್ದು ಮಕ್ಕಳು ಗೋರಿಕಲ್ಲಿನ ಹಿಂಭಾಗದಲ್ಲಿ ಕಣ್ಣುಮುಚ್ಚಾಲೆ ಆಡುತ್ತ ...

ಹಸಿವು ರೊಟ್ಟಿಗಾಗಿ ನಿರಂತರ ಕಾಯಬೇಕು ರೊಟ್ಟಿ ಹಸಿವೆಗಾಗಿ ನಿರತ ಬೇಯಬೇಕು ಕಾಯುವ ಬೇಯುವ ಪ್ರಕ್ರಿಯೆಯಲಿ ನಿರ್‍ವಿಕಾರ ಬದ್ಧತೆ ಸ್ಥಾಯಿಗೊಳಬೇಕು. ಅಲ್ಲಿಯವರೆಗೂ ಎಲ್ಲವೂ ಬರೀ ಆಟ. *****...

ಅದೆಷ್ಟು ಸಾರಿ ಕ್ಷಮಿಸೆನ್ನ ಜೀವ ಉಳಿಸಿರುವೆಯೋ ಕಾಣೆ, ದೇವಾ| ನಿನ್ನದಯೆ ಇರಲಿ ಸದಾ ಹೀಗೆ ಬದುಕಿ ಮತ್ತೆ ಮತ್ತೆ ಸ್ತುತಿಸಿ ನಿನ್ನ ನಮಿಸಿ ಸ್ಮರಿಸುತ್ತಿರುವೆ ಹೀಗೆ|| ಮತಿಗೆಟ್ಟು ನಾಲಿಗೆ ಎಡವಿ ಮಹಾ ಪ್ರಮಾದವಾಗಿಬಿಡಹುದು| ದೃಷ್ಟಿ ದೋಷ ಪೂರಿತನಾ...

೧೪ ಲಕ್ಷ ಕಿಲೋ ಮೀಟರ್ ವ್ಯಾಸವನ್ನು ಹೊಂದಿದ ಸೂರ್ಯ ಒಂದು ಅಗ್ನಿಗೋಳ. ಇದರ ಒಂದು ದಿಕ್ಕಿನ ಉಷ್ಣತೆಯು ಒಂದು ಕೋಟಿ ನಲವತ್ತು ಲಕ್ಷ ಡಿಗ್ರಿ ಸೆಂಟಿಗ್ರೆಡ್ ಇದೆ. ಅತಿ ತಂಪಾದ ಪ್ರದೇಶದಲ್ಲಿ ೫,೦೦೦ ಡಿಗ್ರಿ ಸೆಂಟಿಗ್ರೆಡ್ ಇರುತ್ತದೆಂದು ಉಷ್ಣತೆಯ ಮಾ...

ಸೆರೆಹಿಡಿದು ಮುಗ್ಧರನ್ನಾಗಿಸಿ ಹರೆ ತರುತ ಅಂತರಾಳಕ್ಕಿಳಿದು ಹೃದಯ ಬಿರಿಸಿ ನಗು, ಸಂತೋಷ, ಕಣ್ಣೀರು ಕೊಡುತ ಮೂಕ ಚಿತ್ರಗಳದೆಷ್ಟೋ ಮಾತಾಡಿಸುತ್ತವೆ. *****...

ಕುಂಬಾರರು ಮಾಡಿದ ಹಣತೆಗೆ ಗಾಣಿಗರ ಎಣ್ಣೆಯ ತುಂಬಿ ಒಕ್ಕಲಿಗರು ಬೆಳೆದ ಹತ್ತಿಯ ಹೊಸೆದು ಬತ್ತಿಯ ಮಾಡಿ ದೀಪವ ಹಚ್ಚಿದರೆ ಹಲವು ಜಾತಿಗಳು ಕೂಡಿ ಕುಲಗೆಟ್ಟ ಬೆಳಕು ನೋಡ! *****...

ಮೇಷ್ಟ್ರು ಮುನಿಸಾಮಿ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ. ನಾನು ದಾರಿಯಲ್ಲಿ ಕೆಲವು ಸ್ಕೂಲುಗಳನ್ನು ಭೇಟ...

ಧೂಪ-ದೀಪದಲ್ಲಿದ್ದ ಹೂವು-ಗಂಧದಲ್ಲಿದ್ದ ಚೆಲುವ ನಾರಾಯಣ ಕರ್‍ಪೂರದಾರತಿಯಲ್ಲಿದ್ದ ಕುಂಕುಮದಕ್ಷತೆಯಲ್ಲಿದ್ದ ಚೆಲುವ ನಾರಾಯಣ ಗಂಟೆ ಜಾಗಟೆಯಲ್ಲಿದ್ದ ಮಂತ್ರ ಘೋಷದಲ್ಲಿದ್ದ ಚೆಲುವ ನಾರಾಯಣ ನಿತ್ಯ ಪೂಜೆಯಲ್ಲಿದ್ದ ಹೊತ್ತ ಹರಕೆಯಲ್ಲಿದ್ದ ಚೆಲುವ ನಾರಾಯ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...