
ಹಸಿವಿನ ಆಕರ್ಷಣೆ ರೊಟ್ಟಿಯಾಕೃತಿಯೆಡೆಗೆ ರೊಟ್ಟಿಯ ಧ್ಯಾನ ಹಸಿವೆಯಂತರಂಗದ ನಿಷ್ಕಲ್ಮಶ ನಿರಾಕಾರದ ಕಡೆಗೆ *****...
ಅನ್ನದಾತನೆ ನಿನಗೆ ನನ್ನ ಕೋಟಿ ನಮನ| ನಿನ್ನೊಂದು ಬೆವರ ಹನಿಗೆ ಸಮವಲ್ಲ ನನ್ನ ಈ ಜೀವನ|| ಬಿಸಿಲೆನ್ನದೆ ಗಾಳಿ ಎನ್ನದೆ ದುಡಿದು ನಮ್ಮೆಲ್ಲರಿಗಾಗಿ ಮುಡಿಪಾಗಿಟ್ಟಿಯೇ ನಿನ್ನಯ ಜೀವನ| ಸದಾ ಪಂಚಭೂತಗಳನೇ ಪೂಜೆಗೈಯುತ ಅರ್ಪಿಸುವೆ ನಿನ್ನ ತನು ಮನಗಳ ಶಾಶ...
‘ಆಸಿಡ್ ರೇನ್’ ಎಂಬ ಶಬ್ದವನ್ನು ಮೊಟ್ಟಮೊದಲು ಬಳಕೆಗೆ ತಂದವರು ರಾಬರ್‍ಟ್ ಆಂಗಸ್ ೧೮೭೨ ರಲ್ಲಿ. ಮಳೆಯ ನೀರಿನಲ್ಲಿ ಆಮ್ಲದ ಇರುವಿಕೆಯನ್ನು ‘ಆಮ್ಲ ಮಳೆ’ ಎಂದು ಕರೆಯುತ್ತೇವೆ. ಸಾಮಾನ್ಯ ಮಳೆಯ ನೀರಿನ ಪಿ.ಎಚ್. ಮೌಲ್ಯವು ೫.೫ ರಿಂದ ೫.೭ ಇರುತ್ತದೆ. ...
ಎಷ್ಟೊಂದು ದಿನಸಿಗಳು ನಿನ್ನಂಗಡಿಯಲ್ಲಿ ಕೇಳಿದ್ದೆಲ್ಲಾ ಸಿಗುವ ನೋಡಿದ್ದೆಲ್ಲಾ ಬೇಕೆನ್ನುವ ಬಗೆ ಬಗೆಯ ಮೃಷ್ಟಾನ್ನ ಭೋಜನಕೆ ಬಾಯಿ ನೀರೂರಿಸುವ ಲವ್ (ಲವ್) ಲವಿಕೆಯಂತರಂಗದವ. *****...
ಕನಸು ಕಾಣುವ ಕಣ್ಣುಗಳ ಮುಂದೆ ಕತ್ತಲು ಬೆಳಕಿಗೆ ಏನು ಕೆಲಸ ಕರಿ ಮೋಡಗಳ ಮಿಲನದ ಒಳಗೆ ಬೆಳಕು ಮಿಂಚಾಗಿ ಪಾಪ ನಾಗಾಲೋಟ *****...
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ ಬಂದು ಈಗ ಅವರ ಮನವೆಂಬ ಮನದಲ್ಲಿ ವಾಸಮಾಡಿತ್ತ...
ಇರುಳೆಂದರೆ ಹೆದರಿಕೆ ನಿಜ ಹೇಳಬೇಕೆ? ಗಂಡನ ಗೊರಕೆ! *****...
ಪಂಚೇಂದ್ರಿಯಗಳಿಗೆ ಒಲಿದು ಅವು ಹೇಳಿದ ಹಾಗೆ ನಲಿದು ಕುಣಿ ಅಂದರೆ ಕುಣಿದು ಕಾಡಿ ಬೇಡಿ ಪಡೆದೆ ಮಿರಿಮಿರಿ ಮಿಂಚೊ ಮೊಟ್ಟೆ, ಕಿಚ್ಚಾ ಹಚ್ಚೊ ಮೊಟ್ಟೆ ಕಳ್ಳುಬಳ್ಳಿಯಾ ಹಂಗಿಲ್ಲದಾ ಮೊಟ್ಟೆ, ನಿಲುವು ನಡೆಯಿಲ್ಲದಾ ಮೊಟ್ಟೆ ಒತ್ತಿದರೂ ಒಡೆಯದೆ ಕುಟ್ಟಿದರ...
ಹಚ್ಚಿಟ್ಟ ಹಣತೆಯಲ್ಲಿ ಹೊಸೆದು ಬತ್ತಿಯಾಗಿರುವ ಹತ್ತಿ ಮಿಂದು ಮಡಿಯುಟ್ಟ ಭಕ್ತನಂತೆ ತೈಲದಲ್ಲಿ ಮುಳುಗಿ ತಮದ ಕತ್ತಲ ಸುಡುತ ಬೆಳಕ ಬಟ್ಟೆಯ ತೊಡುವ ಯೋಗಿಯಂತೆ! ತನ್ನೊಡಲ ನೂಲಿನಲೇ ಜೇಡ ತನ್ನ ಜೀವಜಾಲದ ಕೇಡ ತಾನೇ ಬಗೆದು ಪ್ರಾಣ ನೀಗುವಂತೆ ಹತ್ತಿಯ ಬ...
ನನ್ನ ನಾ ನಿನ್ನ ನೀ ತಿಳಿದುಕೊಳ್ಳುವುದು. ನನ್ನೊಳಗೆ ನೀ ನಿನ್ನೊಳಗೆ ನಾ ಬೆಳಕಾಗುವುದು ಒಳಮೈ ಹೊರಮೈ ಕಾಯಿಸಿಕೊಳ್ಳುವುದು ಕಿರಣಕ್ಕೊಡ್ಡಿ ಮನಸ್ಸನ್ನು ದುಡಿಸಿಕೊಳ್ಳುವುದು ಹಸಿರ ಮತ್ತೆ ಮತ್ತೆ ಮೆದ್ದು ಮುದಗೊಳ್ಳುವುದು ಬೆಳಕ ಆಸರೆಗಾಗಿ ಕನಸ ಕಟ್ಟ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...















