ಹಸಿವೆಗೆ ಬಲಕ್ಕೆ ಬಲವಿಲ್ಲ
ಎಡಕ್ಕೆ ಎಡವಿಲ್ಲ
ಮೊದಲಿಲ್ಲ ಕೊನೆಯೆಂಬುದಿಲ್ಲ.
ಆದರೂ ಊರು
ಉಸಾಬರಿಯ ಕೆಲಸ.
ಯಜಮಾನಿಕೆಯ ಗತ್ತು.
ರೊಟ್ಟಿಗೆ ತಿಳಿದಿಲ್ಲ
ತನ್ನ ತಾಕತ್ತು.