ನಿಲ್ಲೆಲವೊ ಪಯಣಿಗನೆ ನಿಲ್ಲು! ನಿಲ್ಲು! ಮುಂದೆಲ್ಲಿ ಸಾಗುತಿಹೆ ನಮ್ಮ ಮರೆತು ಎಲ್ಲರಂತೆಯೆ ಕಿವುಡೆ ನಿನ್ನ ಮನಸು -ಕೂಗಿದೆ ವೀರಗಲ್ಲು! ೧ ಒಟ್ಟಿಹರು ಒಂದೆಡೆಗೆ ನಮ್ಮನೆಲ್ಲ ಉಸಿರಾಡಲೆಡೆಯಿಲ್ಲವೆಮ್ಮ ಬಾಳು! ಆರು ನಾವೆಂಬುದನೆ ಅರಿಯದಿಂತು ಬಸವಳಿ...
ಪ್ರಿಯ ಸಖಿ, ಇಂದು ನಾವು ಆಡುತ್ತಿರುವ ಮಾತು ತನ್ನ ಮೌಲ್ಯವನ್ನೇ ಕಳೆದುಕೂಂಡಿದೆ. ಬೇಕಾದಾಗ ಬೇಕಾದಂತೆ ಮಾತಾಡುವ, ಅದಕ್ಕೆ ಬದ್ಧರಾಗಿರಬೇಕೆಂಬ ಯಾವುದೇ ಸಿದ್ಧಾಂತವನ್ನೂ ನಾವಿಂದು ಇಟ್ಟುಕೊಂಡಿಲ್ಲ. ಆಡುವ ಮಾತಿಗೂ ನಡೆದುಕೊಳ್ಳುವ ರೀತಿಗೂ ಒಂದಕ್ಕೊಂ...
ನಾಯಿ ಬೆಕ್ಕು ಕುರಿ ಹಚ್ಚಿ ದೊಡ್ಡ ಉರಿ ಕಾಡು ತುಂಬ ಬೆಂಕಿ ಹತ್ತಿ ಚಳಿ ಕಾಸಿತು ನರಿ! *** ಡೊಳ್ಳು ಹೊಟ್ಟೆ ಗುಂಡ ತಿನ್ನೋದ್ರಲ್ಲಿ ಭಂಡ, ಕೇಳಿ ಕೇಳಿ ಹಾಕಿಸ್ಕೊಂಡು ತಿಂದ ನೂರು ಬೋಂಡ. *** ಊಟ ಗುಂಡಂಗ್ ಇಷ್ಟ ಪಾಠ ಮಾತ್ರ ಕಷ್ಟ ಕ್ಲಾಸಿನಲ್ಲಿ ಗೊ...
ನಟ್ಟಿರುಳ ಕರಿಮುಗಿಲ ನೀರ್-ತುಂಬಿಗಳ ನಡುವೆ ಹುಣ್ಣಿಮೆಯ ಕಣ್ಣ ತೆರೆದಿದೆ. ತಾರೆ ಬಂದಿವೆ ಬಾನ ಬೀದಿಗೆ. ಅತ್ತ ಹಿಡಿದ ಸೋನೆಯ ಶ್ರುತಿಗೆ ಗಾಳಿಯೇ ಹಾಡುತಿದೆ. ಇತ್ತ ಈ ಮನೆಯೊಳಗೆ ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲಿ ಕಣ್ಣರ್ಧ ಮುಚ್ಚಿ ಮಲಗಿದ...
ಬೆಳಗಾಯ್ತು ಬದುಕಿದೆ ಸೂರ್ಯಕಾಂತಿಯ ಕಂಡೆ ಆಲಸ್ಯ ಹರಿದೋಯ್ತು! ಕಂಬನಿ ಆರಿಽತು, ಮೈನಡುಕ ಓಡಿಽತು! ತನುಸ್ವಾಸ್ಥ್ಯವುಳಿಯಿತು ||ಬೆಳ|| ಜನ ಜನವ ತರಿತರಿದು ಕಿರುಕರುಳ ತಿವಿತಿವಿದು ಕೆಂಗಣ್ಣು ಕಿಡಿಕಾರಿ, ಹಿಂದೂ ಇಸ್ಲಾಂಗಳು ದ್ವಂದ್ವಕಾಳಗ ಹೂಡಿ ಸೌ...
ಬಸವಣ್ಣ, ಚನ್ನಬಸವಣ್ಣ, ಮಡಿವಾಳಯ್ಯ, ಅಲ್ಲಮಪ್ರಭು, ಚನ್ನಮಲ್ಲೇಶ್ವರ, ಹಡಪದಪ್ಪಣ್ಣ, ತಮ್ಮೆಲ್ಲರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು ಹೊತ್ತುಹೊತ್ತಿಗೆ ಎಚ್ಚರವ ಪಾಲಿಸಿ ರಕ್ಷಣೆಯ ಮಾಡಿದ ಕಾರಣದಿಂದ ತಮ್ಮೆಲ್ಲರ ಪಾದದಲ್ಲಿಯೆ ನಿಜಮುಕ್ತಳಾದೆ...
ಹಲೋ ಶ್ಯಾಮಲಿಽಽಽ ಶ್ಯಾಮಲಿ ನೀ College roadದಾಗ ಬಿದ್ದಿದ್ದಂತಽ ಯಾರೋ ದಂಡಿಗೆ ಸರಿಸಿ ನೀರ ಹೊಡೆದ್ರಂತಽ ಆಮ್ಯಾಲ ಗುರುತಿನಾವ್ರು ರಿಕ್ಷಾದಾಗ ಹಾಕಿ ಮನಿ ಮುಟ್ಟಿಸಿದ್ರಂತ – ಸುದ್ದಿ ಬಂತು!! What is the reason are you alright ? ...
ನನ್ನ ಜೀವನ ನದಿಯ ಎದೆ ಮೊರೆತ ಶಾಂತತೆಯ ಕಡಲಿನಲಿ ಮರೆಯಾಗಿ, ಕಲ್ಪನೆಯ ಕನಸುಗಳು ವಿಶ್ರಾಂತಿಗಾಗೊರಲಿ ವಿರಹಿಯಾಗಿಹ ಮನವ ಬಿಸಿ ಮುಳ್ಳುಗಳ ಹಾಗೆ ಒತ್ತೊತ್ತಿ ಕಾಡುವುದು ನಿಲ್ಲಿಸಿದ ದಿನದಂದು ಈ ಎಡೆಗೆ ಸಾಗುವೆಯ? ಹೃದಯದಲಿ ಹಾವಿಟ್ಟು ವಿಷವ ಹುಸಿಯಲಿ...
ಪ್ರಿಯ ಸಖಿ, ಅಡಗಿ ಮನಿ ಅವ್ವನ್ನ ತಿಂತು ಅಧಿಕಾರ ಅಪ್ಪನ್ನ ತಿಂತು ಪುಸ್ತಕದ ಹೊರೆ ತಿಂತು ತಮ್ಮನ್ನ ಮಸ್ತಕ ತಿಂತು ಮನುಷ್ಯನ್ನ ಶೈಲಜಾ ಉಡಚಣ ಅವರ ಈ ಹನಿಗವನ ಮೇಲ್ನೋಟಕ್ಕೆ ಎಷ್ಟು ತಮಾಷೆಯಾಗಿದೆ ಯಲ್ಲವೇ? ಆದರೆ ಆಳಕ್ಕಿಳಿದಷ್ಟು ಅರ್ಥವಾದಂತೆಲ್ಲಾ ...
ಗಣೇಶಬಂದ ಕಾಯ್ ಕಡುಬು ತಿಂದ, ಇನ್ನೂ ಬೇಕು ಅಂದ ಹೊಟ್ಟೆ ಬಿರಿಯ ಮೆಂದ ಕಾಯಿ ಕಡುಬಿನ್ ಜೊತೆಗೆ ಕರಿಗಡುಬನ್ನೂ ಬಾರಿಸ್ದ ಐದ್ ಸುತ್ತಿನ್ ಚಕ್ಲೀನ ಹೊಟ್ಟೆಯೊಳಗೆ ತೂರಿಸ್ದ ಸಿಹಿ ಹೂರಣ ತುಂಬಿದ್ದ ಒಂದು ತಟ್ಟೆ ಮೋದಕ ಹೊಟ್ಟೇ ಮೂಲೇಲ್ ಇಳ್ಸಿ ಕುಡಿದ ಕ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






