ಕಂಡಿರ ಸುಂದರಿ ಕಮಲೆಯನು? ಕಂಡಿರ ಕೋಮಲೆ ವಿಮಲೆಯನು? ಧೀರನವೊಲು ದಿಗ್ವಿಜಯವ ಮಾಡಲು ಊರಿನ ಗಡಿಯನ್ನು ದಾಟಿದಳು. ಅವಳನು ಕಂಡರೆ ಒಲಿಯುವುದೇ, ಅವಳನೆ ಎಂದಿಗು ಒಲಿಯುವುದೇ. ಅವಳನು ಮಾಡಿದ ಬಿದಿ ತಾ ಮಾಡನು ಇನ್ನಾ ಚೆಂದದ ಚೆಲುವೆಯನು. ಕಮಲೇ, ನೀನೇ ರಾಣಿ ಕಣಾ, ನೇಮಿಸು, ಪ್ರಜೆಗಳು ನಾವುಗಳು, ಕಮಲೇ, ನೀನೇ ದೇವಿ...

ಯಾವುದೇ ಚಳವಳಿಯ ಹಿಂದಿನ ಆಶಯಗಳು ಆಯಾ ಪ್ರದೇಶ ಹಾಗೂ ಸನ್ನಿವೇಶದ ಹಿನ್ನೆಲೆಯನ್ನು ಪಡೆದಿರುತ್ತವೆ. ಆದ್ದರಿಂದ ಕನ್ನಡ ಚಳವಳಿಯು ಮಹಾರಾಷ್ಟ್ರದ ಶಿವಸೇನೆಯ ಮಾದರಿಯಲ್ಲಿಲ್ಲ ಎಂದಾಗಲಿ, ತಮಿಳುನಾಡಿನ ರೀತಿಯಲ್ಲಿಲ್ಲ ಎಂದಾಗಲಿ ನಾವು ಕೊರಗ ಬೇಕಾಗಿಲ್ಲ...

ನೀನೇ ನನ್ನ ಕಣ್ಣು ನೀನಿರದೆ ನಾನು ಕುರುಡು ನಿನ್ನ ಪ್ರೀತಿ ಮಾತು ಅದು ಇರದೆ ಬದುಕು ಬರಡು ನಂಬು ನನ್ನ ನಲ್ಲೆ ಇಲ್ಲವೆ ಕೊಲ್ಲ್ಲು ಇಲ್ಲೆ /ಪ// ನಿನ್ನ ಮೊದಲ ನೋಟ ಕಣ್ಗೆ ಅತ್ಯಪೂರ್ವ ಅದರ ರೆಪ್ಪೆ ಬಡಿತ ತಕ್ಷಣ ಪ್ರೇಮ ಪರ್ವ ಇದು ಎಲ್ಲ ನಿನ್ನಿಂದ ಆ...

ಅರುಣೋದಯವಾಯ್ತು ಮುದದಿಂದ ಹೊಸವರುಷದ ಹೊಸ ಹಗಲಲ್ಲಿ ನಸುನಾಚುವ ಮೊಗದಲ್ಲಿ || ಇಬ್ಬನಿಯ ತಂಪು ನೀಡಿ ಕಾಲಸೆರೆಯಲ್ಲಿ ನಮ್ಮನು ಮೀಟಿ ಹಗಲು ಇರುಳು ಕಣ್ಣಾಮುಚ್ಚಾಲೆ ಆಡಿಸಿ ಹರುಷವನು ನೀಡಿತು ವರುಷದಲ್ಲಿ || ವರುಷ ಕಳೆದು ವರುಷ ಬರಲು ದಿನಗಳುರುಳೀ ನೋ...

ಎಲ್ಲ ಬಿಟ್ಟು ಇದು ಇಲ್ಲಿಗೆ ಬಂತೆ? ಅಕ್ಕಿ ತುಂಬ ಬರಿ ಕಲ್ಲಿನ ಸಂತೆ ಕಾಲ ಚಪ್ಪಲಿ ಕಿರೀಟವ ಜಾಗ ಬಯಸಿ ಕುರುಡುಬುದ್ದಿಗೆ ಕ್ರೌರ್‍ಯ ಪರಾಕು ಸಲ್ಲಿಸಿ ಹುದುಕಿಟ್ಟಿದೆ ನಿನ್ನ ಹಟ್ಟಿಗೊಂದು ಹೆಸರ ಎರಗುವ ಮಂಚೆ ಎರಚಲು ಮುಖಕ್ಕೆ ಕೆಸರ. ತಾಳಿಕೊ ಮರಿ ತ...

ಎಷ್ಟು ತಿಕ್ಕಿದರೂ ಸ್ವಚ್ಛವಾಗದಿದೆ ಜನರ ಬುದ್ಧಿ ಭಾವ ಅಂದು ತಿಕ್ಕಿದೆಯೊ ಇಂದು ತೊಳೆಯು ಬಾ ಶುದ್ಧ ಬುದ್ಧ ಬಸವ || ಪ || ಯಜ್ಞಯಾಗಗಳ ಪೂಜೆ ನೇಮಗಳ ನೆಪದಲಿ ಜನರನು ಸುಲಿವ ಪುರಾಣ ಶಾಸ್ತ್ರವ ಸುಳ್ಳು ಕಂತೆಗಳ ಹೇಳುತ ಹೊಟ್ಟೆಯ ಹೊರೆವ || ೧ || ಪೂಜ...

ಈ ಅಪರಿಮಿತ ಪರಿಧಿ ಇದು ಕತ್ತಲೆಯ ಸರದಿ ಕೋವೆ ಕಂಭಗಳಿಂದೆದ್ದು ಸಂಜೆಯ ಮೋಡಗಳಿಂದ ಬಿದ್ದು ಮೆಲ್ಲಗೆ ಆಕಳಿಸಿ ಹೊರಟಿದೆ ಸವಾರಿ ಕಂಬಳಿ ಹೊದ್ದು ಡಾಮರು ರೋಡುಗಳ ಮೇಲೆ ಶೂನ್ಯ ಬಿಚ್ಚಿ ಹಾಸಿ ಮಲಗುವ ತಯಾರಿ ಅಥವಾ ಅದಕ್ಕೆ ಮೊದಲು ಓಣಿ ಓಣಿಗಳಲ್ಲಿ ಸಂದಿ...

ಕನ್ನಡದಲ್ಲಿ ಸಣ್ಣ ಕತೆಗಳಿಗೆ ಪ್ರಾಚೀನ ಇತಿಹಾಸವಿಲ್ಲ. ಇದರ ಬೆಳವಣಿಗೆಯನ್ನು ೧೯೦೦ರಿಂದಲೇ ಗುರುತಿಸಬಹುದಾಗಿದೆ. ಕಥೆ ಹೇಳುವ ಪದ್ಧತಿಯನ್ನು ೧೦-೧೨ನೇ ಶತಮಾನದ ‘ವಡ್ಡಾರಾಧನೆ’ ಮತ್ತು ‘ಪಂಚತಂತ್ರ’ದಲ್ಲಿ ನಾವು ಕಂಡರೂ ಅವುಗಳ ಸ್ವರೂಪ ಮತ್ತು ಉದ್ದೇ...

ಅದೊಂದು ಊರು, ಆ ಊರಿನಲ್ಲಿ ಗಂಡಸರೆಲ್ಲಾ ಹೆಂಡತಿಗೆ ಹೆದರುತ್ತಿದ್ದರು. ಒಮ್ಮೆ ಗಂಡಸರ ಎಲ್ಲಾ ಗುಪ್ತ ಸಭೆ ಸೇರಿ ಹೇಗೆ ಹೆಂಡತಿಯನ್ನು ಹತೋಟಿಯಲ್ಲಿಡುವುದು ಎನ್ನುವುದರ ಕುರಿತಾಗಿ ಚರ್ಚೆ ನಡೆಸುತ್ತಿದ್ದರು. ಆಗ ಕಾವಲುಗಾರ ತಮಾಷೆಗೆ “ನಿಮ್ಮ ...

ಯಸ್ ಯಸ್ ಯಲ್ಲವ್ವಾ ಡಿಸ್ ಮಿಸ್ ಕಲ್ಲವ್ವಾ ಕಾಳವ್ವಾ ಧೂಳಪ್ಪಾ ಕೇಳವ್ವಾ ||ಪಲ್ಲ|| ಮಜಕಟ ಕಟಕಟ ಕಿವಿತುಂಬ ವಟವಟ ಉಸ್ಸ್ ಉಸ್ಸ್ ಉಸ್ಸಾರ್‍ಗೋ ಕಿಸ್ಸ್ ಮಿಸ್ಸ್ ಹುಸಾರ್‍ಗೊ ಹಾಳಕೆರಿ ಹಳೆದವ್ವಾ ಬಡಿತೋ ಬಡಿತೋ ದೆವ್ವನ್ ಹೇಂತಿ ಹಳೆದವ್ವಾ ಹಡಿತೋ ಹಡ...

ಒಂದು ಮಂಗ ತೆಂಗಿನ ಮರದ ಎಳೆನೀರ ಕಾಯಿಯನ್ನು ಒಡೆದು ನೀರು ಕುಡಿದು ಅದರೊಳಗಣ ತಿರುಳು ತಿಂದು ಕೆಳಗೆ ಹೋಗುತ್ತಿದ್ದ ಸಂತನ ಮೇಲೆ ಎಸೆಯಿತು. ತಲೆ ಮೇಲೆ ಬಿದ್ದ ಎಳೆನೀರ ಚಿಪ್ಪನ್ನು ಕೈಯಲ್ಲಿ ಹಿಡಿದು “ಮಂಗ! ನಿನಗೆ ಧನ್ಯವಾದ, ನೀಕೊಟ್ಟ ನೋವಿಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...