
ದ್ರೋಣ ಕೆನ್ನೆಗೆ ಕೈಹೊತ್ತು ಕುಳಿತ ದೇವತೆಗಳು ಬಂದು ಕರೆದರೂ ದೇವ ಸಭೆಯಲ್ಲಿ ತನ್ನ ಕರ್ಮ ವಿಮರ್ಶೆಯಾಗಲಿದೆ ಎಂದು ಹೊಳೆದರೂ, ಕಡಿಮೆಯಾಗಲಿಲ್ಲ ಯೋಚನೆಗಳ ಏರಿಳಿತ ಕೃಷ್ಣ ಬಂದಿದ್ದಾಗ ಮಣಿದು, ಕೈ ಮುಗಿದು ‘ನಿನ್ನ ಸಖರೈವರನು ನೋಯಿಸಿ’ನೆಂದು ಮನದಲ್ಲ...
ನೀ ನಗಲೇನು ಮನವೆ ಅಳಲೇನು ಮೌನ ತಾಳಲೇನು ಹಸಿವು ಕಾಡದೆ ಬಿಡುವುದೇ || ಊಟ ಬಟ್ಟೆ ತಳಕು ಬಳುಕು ನೋವುಂಡ ಮನವು ಹಸಿವ ಅಡಗಿ ನಿಲ್ಲ ಬಲ್ಲುದೇ || ಮಮತೆ ವಾತ್ಸಲ್ಯಗಳು ಹೃದಯ ತುಂಬಿದರೇನು ಹಸಿವು ಅದನು ಮೆಟ್ಟಲಹುದೇ || ಜ್ಞಾನಕ್ಕೆ ವಿದ್ಯೆಯ ಹಸಿವು ಭ...
ಯಸ್ಯಾರ್ಧಾಸ್ಸ ಮಹಾಭಾಗೋ ಯಸ್ಯಾರ್ಥಾ ಮಹಾಗುಣಾಃ | ಹರ್ಷಃ ಕಾಮಶ್ಚ ದರ್ಪಶ್ಚ ಧರ್‍ಮಃ ಕ್ರೊಧಶ್ಚಮೋ ದಮಃ || ಅರ್ಧಾದೇತಾನಿ ಸರ್ವಾಣಿ ಪ್ರವರ್ತಂತೇ ನರಾಧಿಪ || ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳು ಪುರುಷಾರ್ಥಗಳೆಂದು ಗಣಿಸಲ್ಪಟ್ಟಿರುವುವು. ಇವುಗಳೆ...
ಈ ಮನವಾಗದಿರಲಿ ನಿತ್ಯ ಚಂಚಲತೆ ವೈರಾಗ್ಯದ ಭಾವದಿ ತಾನು ಮೆರೆಯಲಿ ಹೆಜ್ಜೆ ಹೆಜ್ಜೆಗೂ ಎಲ್ಲವೂ ಮರೆಯಲಿ ಗಂಭೀರತೆ ಭಾವದಿ ತಾನು ಬೆರೆಯಲಿ ಮೇಲಿಂದ ಮೇಲೆ ಅಲೆಗಳು ಬಂದಿರಲು ಸಾಗರ ತಾನು ಭೋರ್ಗರೆಯದು ನದಿಗಳೆಲ್ಲ ಸಮುದ್ರವ ಸೇರುತ್ತಿರಲು ಧಿಕ್ಕಾರ ಭಾವ...
ಯಾರು ಓದುವರು ನನ್ನ ಕವಿತೆ? ಯಾರು ಹಾಡುವರು ನನ್ನ ಕವಿತೆ?| ಯಾರು ಓದದಿದ್ದರೇನು ಯಾರು ಹಾಡದಿದ್ದರೇನು| ಬರೆಯುವೆ ನನ್ನ ಆನಂದಕೆ ಬರೆಯುವೆ ನನ್ನಯಾ ಸಂತೋಷಕೆ| ಬರೆಯುವೆ ಕನ್ನಡ ಪರಂಪರೆಯ ಉಳಿಸಿ ಬೆಳೆಸಿದ ಹೆಮ್ಮೆಯ ಆತ್ಮತೃಪ್ತಿಗೆ|| ನೂರಾರು ಕನ್ನ...
“ಮಳೆಹನಿ ಬೊಗಸೆಯಲಿ ಹಿಡಿದು ಕೆರೆ ತುಂಬಿಸೋಣ ಬಾ! ಗೆಳತಿ!” ಎಂದು ಕರೆದ ಅವನು. ನಂಬಿ ಎದೆ ಬಿಂದಿಗೆಯ ತುಂಬಿ ಬಂದವಳು ಆ ಮುಗ್ದೆ. ಹನಿ ಹನಿಯಲ್ಲಿ ಕೆರೆ ತುಂಬಿದಾಗ ಮತ್ತೊಂದು ಜಾಲ ಹಾಕಿ ಹತ್ತಿರಕೆ ಕರೆದ “ನವಿಲು ಗರಿ ಮರಿ ಹ...
ಅಚ್ಚೋದ ಸರೋವರದ ಅಚ್ಚಗನ್ನಡಿಯಲ್ಲಿ ತಿದ್ದಿ ತೀಡಿದ ಹೊಚ್ಚ ಹೊಸ ರೂಪಾಗಿ ಬರುತ್ತೀಯೆ. ಗಂದಬಂಧವಾಗಿ ಬಂದವಳು ಕಿಟಕಿ ಬಾಗಿಲುಗಳ ಬಂದುಮಾಡಿ ಕಪಾಟಿನ ಕೀಲಿ ಕಳಚಿ ಅಸ್ತವ್ಯಸ್ತವನ್ನೆಲ್ಲ ಓರಣಮಾಡುತ್ತೀಯೆ. ಎದೆಮೇಲೆ ಹೂಹೆಜ್ಜೆಯಿಟ್ಟು ಗೆಜ್ಜೆಗುಂಗಿನಲ...
ಭಾಗ – ೨ ಸುಂದರಿ ಮಡಗಾನ್‌ಳಿಂದ ಆಕರ್ಷಿತನಾದ ಕವಿ W B Yeats ಕಾವ್ಯಜೀವನವನ್ನು ಪ್ರೇಮ ರಮಣೀಯತೆಯ ಹಿನ್ನೆಲೆಯಿಂದಲೇ ಪ್ರಾರಂಭಿಸಿದ. ಆತನ ಸಾಹಿತ್ಯ ಬದುಕನ್ನು ನಾಲ್ಕು ಅವಧಿಗೆ ವಿಂಗಡಿಸಬಹುದು. ಮೊದಲನೆಯದು ರೊಮ್ಯಾಂಟಿಕ ಫೇಸ್, ಎರಡನೇಯದು...
ಬಾರಯ್ಯಾ ಎನ್ನ ಎದೆಗೆ ಎದೆ ಗುಡಿಯ ಪೀಠಕ್ಕೆ ಬಾರಯ್ಯಾ ಎನ್ನ ಎದೆಗೆ || ಪ || ಕತ್ತಲು ಬೆಳಕಾಟ ಇನ್ನೆಷ್ಟು ದಿನವಯ್ಯಾ ಚಿತ್ತವೂ ಮಸಕೂ ಮಸಕಾಗಿದೆ ಏಳಂತೆ ಬೀಳಂತೆ ಅಳುವಂತೆ ನಗುವಂತೆ ಅಂತಿಂತು ನೀನಂತೂ ದೂರವಾದೆ || ೧ || ಹಸಿವಾಗಿ ಬಾಯಾರಿ ತಪನಂತೆ...
ಸುಲಭ ಅಥವಾ ಕಷ್ಟದ ಮಾತಲ್ಲ- ಅವ ಸುಮ್ಮನೇ ಕೂತಿದ್ದ ಸಂಜೆಯೂ ಆಗುತ್ತ ಇತ್ತು ಆಗಲೇ ಗಡಿಯಾರ ಆರರ ಹತ್ತಿರ ಬಂದಿತ್ತು ಎದ್ದು ಕಿಟಕಿಯ ತೆರೆದು ಬಂದ ಇದ್ದ ಬೆಳಕೂ ಒಳ ಬಂತು ಅದು ನದೀ ಮೇಲಿಂದ ಬಂತು * * * ಅವ ಆರಾಮ ಕುರ್ಚಿಯಲಿ ಇದ್ದಾನೆ ಅವ ಈಗಲೇ ಬರ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...
“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...














