ಚಾಮುಂಡಿಗಿರಿಯ ತಪ್ಪಲಲಿ ಮೈಸೂರು ಪುರ- ನಂಜನಗುಡಿಯ ರಾಜಮಾರ್ಗದಲಿ ರಂಜಿಪುದು ತಾರುಣ್ಯ ತುಂಬಿರುವ ಕನ್ನೆವೊಲು ಮೈಸೂರಿನುದ್ಯಾನ ಮಧುವನವು ೧ ರಂಗುರಂಗಿನ ಹೂಗಳಾಭರಣ ಒಪ್ಪಿರಲು ಕಂಗಳನು ಮೋಹಿಸುವ ಹಸುರುಡುಗೆಯ ಸಿಂಗರಿಸಿ ನಿಂತಿರುವ ಅಂಗನೆಯ ತೆರದಲ್ಲಿ ಕಾಂಬುವುದು ಸೊಗವಡೆದ ಮಧುವನವು ೨ ಕುಲವನಿತೆ ಸೂಸುತಿಹ ಎಳ...

ನಿನ್ನ ಕೆಂದುಟಿಯಿಂದ ಬರೆ ಪ್ರೇಮ ಕಾವ್ಯವನು ತೆರೆದಿರುವ ನನ್ನೆದೆಯ ಹಾಳೆ ಮೇಲೆ ಭಾವಗೀತೆಯ ಮೀರಿ ಮಹಾಕಾವ್ಯ ಮೂಡಲಿ ಅದ ಓದಿ ದಾಟುವೆನು ಜಗದ ಎಲ್ಲೆ //ಪ// ಗಿಳಿ ಕೋಗಿಲೆ ಬೇಡ ನಿನ್ನ ಹಾಡಿನ ಎದುರು ನವಿಲ ನರ್ತನವೇಕೆ ನೀನು ನಡೆವಾಗ ಚುಕ್ಕಿ ಚಂದ್ರ...

ಒಂದು ಮುಂಜಾವಿನಲಿ ಹಸಿರುಟ್ಟ ಭಾವಲತೆಯ ಸೆರಗಿನಲ್ಲಿ ಮುತ್ತನಿತ್ತ ಹೂ ನಗೆಯ ಕಂಡೆ || ಸೂರ್ಯಕಿರಣ ಅನಂತದಲ್ಲಿ ಸೃಷ್ಟಿ ಸೊಬಗ ಹಾಸಿಗೆಯಲ್ಲಿ ಮುತ್ತನಿತ್ತ ಹೂ ನಗೆಯ ಕಂಡೆ || ಹೃದಯ ವೀಣಾತರಂಗದಲ್ಲಿ ಮಿಡಿವ ಒಲವಿನಾ ಸ್ಪರ್ಶದಲ್ಲಿ ಮುತ್ತನಿತ್ತ ಹೂ ...

ಹುಡುಗನಾಗಿದ್ದ ದಿನಗಳ ನೆನಪು : ಆಗ ನಮ್ಮೂರ ಹೊಳೆ ತುಂಗೆ ಶಾಂತನಿರ್ಮಲ ಅಂತರಂಗೆ; ಹೊರಗಿನ ಬಿಸಿಲು ಒಳಗೆ ಬಿಂಬಿಸಿ ತಳದ ತನಕ ನದಿಯ ಮನಸ್ಸು ಸ್ವಚ್ಛ ಪ್ರತ್ಯಕ್ಷ ಸಂಪದ್ಯುಕ್ತ ಜಲದ ರೇಸಿಮೆಹಾಳೆ ಸೀಳಿ ಹಾಯುವ, ಹಾಗೆ ಹೀಗೆ ಹೇಗೋ ಹೊರಳಿ ಉರಿಯ ಚಿಮ್...

ಬಸವನೆಂದರೆ ಒಂದು ವ್ಯಕ್ತಿಯಲ್ಲ ಯಾವುದಕು ಹೋಲಿಸಲು ಸಾಟಿಯಲ್ಲ || ಪ || ಯುಗಯುಗದ ತಪವೆಲ್ಲ ಸಿದ್ದಿಯಾಕೃತಿಯಾಗಿ ಬಸವಣ್ಣನೆಂಬ ರೂಪವ ತಳೆಯಿತು ಯುಗಯುಗಗಳನು ಮೀರಿ ನಿಂತಿರುವ ದರ್ಶನಕೆ ಬಸವ ನಿನ್ನಯ ದ್ವನಿಯು ತಾ ಮೊಳಗಿತು ||ಅ.ಪ.|| ಬಸವನೆಂದರೆ ಬ...

ಕೆಫೇಟೇರಿಯಾದಲ್ಲಿ ಒಬ್ಬಳೇ ಇದ್ದಳು ಲಿಜಾ ಟೇಬಲ್ ಮುಂದೆ ಕಾಫಿಗೆ ಹೇಳಿ ಸಿಗರೇಟು ಸೇದುತ್ತ ಬಿಳಿಚಿದ ಕೈಬೆರಳುಗಳಿಂದ ಸನ್ನೆ ಮಾಡಿದಳು ಹೋಗಿ ಅವಳ ಬಳಿ ಕುಳಿತೆ ನಕ್ಕಳು ಮೆಲ್ಲನೆ ಸುಮ್ಮನೆ ಏನೇನೋ ಹೇಳಿದಳು ಈಗೀಗ ಏಕೆ ದೂರಾ ಎಂದು ಕೇಳಿದ್ದಕ್ಕೆ ಕೆ...

ಪ್ರೀತಿಯ ಗೆಳೆಯಾ, ಕತ್ತಲೆಯ ಈ ಸಂಜೆಯಲ್ಲಿ ಚಿಕ್ಕಿಗಳು ಬಹಳ ಮೂಡಿಲ್ಲ. ನಿರ್ಮಲ ಪ್ರೇಮವನ್ನು ಒಂದಲ್ಲ ಒಂದು ದಿನ ಈ ಜಗತ್ತು ಪರಿಗಣಿಸಲಿದೆ. ಎಷ್ಟೊಂದು ಬಾನಾಡಿಗಳು ಉಲ್ಲಾಸದಿಂದ ಹಾರಾಡುತ್ತವೆ. ಗೂಡಿಗೆ ಮರಳಲು. ಲಯದ ಗುಂಟ ಸಾಗಿವೆ. ಜಗತ್ತು ಅಚ್ಚ...

ಊದ್ಸೊರು ಬಂದಾರ ಬಾರ್‍ಸೋರು ಬಂದಾರ ಬೆಂಗ್ಳೂರ ಹುಡಿಗಿ ಬರಲಿಲ್ಲೋ ಹುಬ್ಬಳ್ಳಿ ಹುಡುಗಾ ಕಂಚೀನ ಕಡಗಾ ತಲವಾರ ಬೆಡಗಾ ಸಜ್ಜಾದೋ ||೧|| ಸೋಗ್ಲಾಡಿ ಮೂಲಂಗಿ ಹುಳಕ್ಲಾಡಿ ಹುಚಗಿಂಡಿ ಹಿಂಗ್ಯಾಕ ಮಾಡ್ತಾಳ ಸುಸ್ತಸುಸ್ತಾ ದೀಡ್ ಪೈಯಿ ಧೀಮಾಕಿ ಥೈಯ್‍ಥೈಯಿ ...

ಕಣ್ಣೀರ ಹನಿ ಹನಿಹನಿಸಿ ಬರೆಯುತ್ತಿತ್ತು ಗಲ್ಲದ ಪುಟದ ತುಂಬ ಕರುಳು ಕಲುಕುವ ಕಾವ್ಯ, ಕತೆ, ಕಾದಂಬರಿ. “ಇದನ್ನು ಓದಿಕೋ ಜಗತ್ತೇ?” ಎಂದು ಬೇಡಿಕೊಳ್ಳುತ್ತಿತ್ತು. ಜಗತ್ತು ಮೌನದಲ್ಲಿ ಹೆಪ್ಪುಗಟ್ಟಿತ್ತು. ಕಣ್ಣೀರ ಹನಿ ದ್ರವಿಸಿ ಹರಿದ...

ಹಳ್ಳಿ ಹಾದಿಯ ತುಂಬ ನೆತ್ತರಿನ ಹೂವು ತುಳಿದೀಯ ಗೆಳೆಯ ಅದು ನಮ್ಮ ನೋವು ಭೂತ ಬಿತ್ತಿದ ಬೀಜ ನರಳಿತ್ತು ಜೀವ ನೆತ್ತರಿನ ಚಿತ್ತಾರ ಬೆಳಗಿನ ಜಾವ ಊರೊಳಗೆ ಹರಿಯುತ್ತಿವೆ ಹತ್ತಾರು ಕತೆಗಳು ನೀರೊಳಗೆ ತೇಲುತಿವೆ ನೂರಾರು ವ್ಯಥೆಗಳು ಮುರುಕು ಮನೆಯೊಳಗೆ ಹ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...