ಕೃಷ್ಣ ಕೃಷ್ಣ ಎಂದು ಕನವರಿಸಿರುವೆ ನಾ
ಕರು ತನ್ನ ತಾಯನ್ನು ಕರೆವಂತೆ
ಕೃಷ್ಣ ಕೃಷ್ಣ ಎಂದು ಹಾ ತೊರೆಯುತ್ತಿದ್ದೆ
ರಾತ್ರಿ ತನ್ನ ಚಂದ್ರನ ಕರೆವಂತೆ
ನೀರಿನೊಳಗಿನ ಮೀನೊಂದು ಈಜುತ್ತ
ಬೆಳಕನ್ನು ಪುಟ್ಟ ಕಂಗಳಿಂದ ನೋಡುವಂತೆ
ಸಂಸಾರದ ನಡುವೆ ತೇಲಾಡಿದೆ ನಾನು
ನಿನ್ನ ನೋಡಲು ಕಾತರಿಸಿತ್ತು ಚಿಂತೆ
ಮನುಷ್ಯ ಜನ್ಮ ಸಾರ್ಥಕವಾಗಲು
ಭುವಿಗೆ ನೀನು ಇಳಿದು ಬರಬೇಕು
ನನ್ನ ತನು ಮನ ದೊಡೆಯನಾಗಿ ನಿ
ಹೃದಯದಲ್ಲಿ ಬೀರಬೇಕು ಬೆಳಕು
ಕ್ಷಣವು ಕ್ಷಣವು ಕಾಲ ಚಲಿಸುವಂತೆ
ಮನದ ರೀತಿ ನೀತಿ ಬದಲಾಗುತ್ತಿದೆ
ನನ್ನ ಮನಸ್ಸಾದರೂ ನಾ ಹಿಡಿಯುಲಾರೆ
ನಿನ್ನ ಕೃಪೆಯೇ ಮೂಲಾಧರವಾಗಿದೆ
ನನ್ನ ದೇವನಾದರೂ ಪುಣ್ಯ ವಿಶೇಷ ವಿದ್ದರೆ
ಈ ಜನ್ಮದಲ್ಲೇ ನಾನು ನಿನ್ನ ನೋಡುವೆ
ಇಲ್ಲದಿದ್ದರೆ ನಾನು ಅತ್ತು ಅತ್ತು ನಿತ್ಯ
ಮಾಣಿಕ್ಯ ವಿಠಲನಾಗದೇ ಕೊರಗುವೆ
*****














