ಅಂಗಿಯ ಮೇಲದು ಶಾಯಿಯ ಚುಕ್ಕಿ. ಜೇಬಿನಲ್ಲಿ ಚಕ್ಕಲಿ ಅವಲಕ್ಕಿ, ನಾಲಿಗೆ ಬಹಳೇ ಹೋಗಿದೆ ಸೊಕ್ಕಿ ! ಬಂದ ಬಂದನವ ಗೋವಿಂದಾ. ಮಾಮಿಡಿಯೊಂದೂ ಮರದೊಳಗಿಲ್ಲ; ಪೇರಲ ಹಣ್ಣೂ ಕಾಣುವದಿಲ್ಲ; ಆತನು ಹುಡುಕದ ಗಿಡಮರವಿಲ್ಲ ! ಬಂದ ಬಂದನವ ಗೋವಿಂದಾ ಸಂಗಡ ಹುಡುಗರ ತಂಡವ ಕಟ್ಟಿ. ಊರಿನ ನಾಲ್ಕೂ ಗಡಿಯನೆ ಮುಟ್ಟಿ, ತಂಟೆಯ ತರುವ...

ಪಾಳೇಗಾರ

ಯೂರೋಪ್ ಖಂಡದ ಫೂಡಲ್ ಸಂಸ್ಥೆಯ ಹಿಡುವಳಿ ಸಿಸ್ತು ಹೇಗೆ ಹುಟ್ಟಿತೋ ನಮ್ಮ ಭರತಖಂಡದಲ್ಲಿಯೂ ಹಾಗೆಯೇ ಹುಟ್ಟಿದಂತೆ ಇದೆ. ಫ್ರಾನ್ಸ್ ದೇಶ ದೊಳು ೫ ನೇ ಶತಮಾನದಿಂದ ಎಂಟನೇ ಶತಮಾನದವರೆಗೆ ಆಳಿದ ದೊರೆಗಳ ಕಾಲದಲ್ಲಿ ಆಯಾ ದೊರೆಗಳು ತಮ್ಮ ಬಂಧುವರ್ಗದ ಜನರಿ...

ಕೇಳಲಾರೆ ಹರಿಯ ನಾ ತಾಳಲಾರೆ ನಿನ್ನ ಮರೆಸುವ ಅಪನಂಬಿಕೆ ಯೋಚ್ನೆ ನೀನು ನನ್ನವನೆಂದು ನಾ ತಿಳಿದ ಮೇಲೆ ಕಾಡದಿರಲಿ ಯಾವ ಮೌಲ್ಯದ ಇಂಥ ಯೋಚನೆ ತಾವು ಹರಿಯನ್ನು ಕಳೆದುಕೊಂಡ ಅವರು ಇನ್ನೋರ್ವರಿಗೂ ದಾರಿ ಬದಲಾಯಿಸುವವರು ತಮ್ಮ ವಿಚಾರಗಳೇ ತಮಗೆ ಸಾಟಿ ಇಲ್...

ಮನುಜನಿಗಿಂತ ಮೃಗಪ್ರಾಣಿಯೊಂದಿಲ್ಲ ಕಾಡುಮೃಗ ಹೊಟ್ಟೆಪಾಡಿಗೆ ಭೇಟೆಯಾಡಿದರೆ| ಮನುಜ ಅಹಂಕಾರ, ಸ್ವಾರ್ಥಕೆ ಇನ್ನೊಬ್ಬರ ಜೀವದನದ ಜೊತೆ ಬೇಟೆಯಾಡುತ ಮನುಕುಲಕೆ ಮೃತ್ಯುವಾಗಿಹನು|| ಮನುಜ ಮನುಜನಂತೆ ನಡೆದರೆ ಬೇಕಿಲ್ಲ ಮಾನವನ ಶಿಕ್ಷೆ ರಕ್ಷಣೆಯ ಕಾನೂನು,...

ಬಾಳಿನಲ್ಲಿ ಪರಿವರ್ತನೆ ಬಯಸಿ ಅವನು ದಿನವೂ ಮನೆಯ ವಸ್ತುಗಳ ಸ್ಥಳಾಂತರ ಮಾಡುತಿದ್ದ. ಮನೆಯಲ್ಲಿದ್ದ ಸೋಫ, ಮಂಚ, ಹೂದಾನಿ, ಪುಸ್ತಕಗಳು, ಚಪ್ಪಲಿ, ಹೂಗಳನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ, ಮೂಲೆ ಮೂಲೆಗೆ ಬದಲಾಯಿಸಿ, ಬಾಳಲ್ಲಿ ಏನು ಪರಿವರ್ತನ...

ಕಥನ ಗೀತೆ ಪುಣ್ಣೇವು ತುಂಬೈತೆ ಈ ಊರ ತುಂಬ ಸಾರೈತೆ ಈ ಊರ ಮನಮನೆಯ ಕಂಬ ಬೆಟ್ಟದ ಮ್ಯಾಲೊಂದು ನೀರಿನ ದೊಣೆಯೈತೆ ಅದರ ಸುತ್ತಲಿಗೊಂದು ಸತ್ಯೇದ ಕತೆಯೈತೆ ಸತ್ಯೇವು ಒಡೆದಂಥ ಮಂದಿಯೇ ಇಲ್ಲವೊ ಇಂಥ ಮೈಮೇನಂತು ಮತ್ತೆಲ್ಲು ಕಾಣೆವೊ ಬಂದಾನೊ ರಾಮನು ವನವಾಸ...

ಒತ್ತಿ ಹಣ್ಣು ಮಾಡಿದೊಡೆ ಆದೆತ್ತಣ ರುಚಿಯಪ್ಪುದೋ – ಅಲ್ಲಮ ‘ಆವರಣ’ ಕಾದಂಬರಿ ಬರುತ್ತಿರುವುದು ಗ್ರಾಹಕ ಸಂಸ್ಕೃತಿಯ ಕಾಲದಲ್ಲಿ. ಅದರ ಮಾರಾಟ, ಮರುಮುದ್ರಣಗಳೆಲ್ಲ ಭರದಿಂದ ಸಾಗುತ್ತಿದ್ದು, ಅದರ ಮೇಲಿನ ಚರ್ಚೆಗಳು ಖಂಡನೆಗಳು, ಭಜನೆಗಳು- ಎಲ್...

ಬಾರ ಬಾರ ದೇವ ಬಾರ ತಾರ ತಾರ ಬೆಳಕ ತಾರ ಬಾಳ ತಮವ ಕಳೆಯ ಬಾರ ತಿಳಿವ ದೀಪ ಬೆಳಗು ಬಾರ || ಪ || ದೇಶದ ಮನೆ ಕಸುವು ತುಂಬಿ ವಾಸನೆಯಲಿ ಮಲಿನ ವಾಸ ಮಾಡುವಂತೆ ಮಾಡೊ ಶುದ್ಧಗೊಳಿಸಿ ಜನಮನ || ೧ || ಅಂಧ ಶ್ರದ್ಧೆ ಕೂಪಗಳಲಿ ಕೊಳೆಯುವವರ ನೋಡಿದೊ ಮುಂದುಗಾ...

ಎಲ್ಲಾದರು ಒಂದು ದಿನ ಎಂತಾದರು ಒಂದು ದಿನ ಕಾಣದಿರುವೆನೇ ನಾ ನಿನ್ನನು ಹಾಡುತಿರಬಹುದು ನೀ ಮಾತಾಡುತಿರಬಹುದು ನೀ ಸುಮ್ಮನೆ ಕುಳಿತಿರಬಹುದು ನೀ ಕುಣಿಯುತಿರಬಹುದು ನೀ ಬಸವಳಿದಿರಬಹುದು ಮುತ್ತಿನಂಥ ಬೆವರ ಹನಿ ನಿನ್ನ ಹಣೆ ಮೇಲಿರಬಹುದು-ಅಲ್ಲಿ ಕುರುಳೊ...

ವೆಂಕಟಪತಿ. “ತಾನು ಇಚ್ಛಿಸುವ ವಾಗ್ದಾನವನ್ನು ಪಟ್ಟದ ಜೀವರ ಮುಂದೆ ಕೊಡೋಣಾಗಬೇಕಾಗಿ ವಾಗ್ದೇವಿಯು ಅಪೇಕ್ಷಿಸುವದ್ಯಾಕೆ? ದೇವರ ಮೇಲೆ ಶ್ರೀಪಾದಂಗಳವರಿಗೆ ಪೂರ್ಣಭಯಭಕ್ತಿ ಇರುವದರಿಂದ ತಾನು ಅಪೇಕ್ಷಿಸುವ ರೀತಿಯಲ್ಲಿ ಕೊಡೋಣಾಗುವ ಭಾಷೆಗೆ ಮುಂದೆ ಭಂಗ ...

ಹೋಮ ಮಾಡಿದರು ಹವಿಸ್ಸು ಅರ್‍ಪಿಸಿದರು ಬೆಣ್ಣೆ ತುಪ್ಪ ಸುರಿದರು ಅಗ್ನಿಗೆ ಸಂತೈಸಿದರು ಅಡ್ಡಬಿದ್ದು ಆರಾಧಿಸಿದರು ಹೊರಗೆ ಬಂದರು ಸಿಗರೇಟು ಹಚ್ಚಿ ಸೇದಿದರು ಕೊನೆಗೆ ಉಳಿದ ಅಗ್ನಿಯ ಚೂರನ್ನು ಪಾಪ ಕಾಲಲ್ಲಿ ತುಳಿದು ಹೊಸಕಿದರು *****...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...