ಗಾಢ ಸಂತಸದ ಮೌನ ಘಳಿಗೆಯಲಿ
ನಿರಾಳವಾಗಿ
ಸುಂದರ ಸಜ್ಜೆ ಸೇರಿ
ಜೀವ ಸಂಗಾತಿಯನು ಬಾಚಿ ತಬ್ಬಿ
ಎದೆಗೆ ಎದೆ ಬೆಸೆದು
ಪ್ರೇಮ ಸಮಾಧಿಯಲಿ ಐಕ್ಯವಾಗಿ
ಮೈಯಾದ ಮೈಯಾಲ್ಲಾ ಹುಟ್ಟು ಹಿಂಡಿದಂತಾಗಿ
ಜೇನು ಬೆವರು ಧಾರೆ ಧಾರೆಯಾಗಿ ಹರಿದು
ಜೀವಧಾತು
ಸ್ವಾತಿ ಚಿಪ್ಪನು ಸೇರೋ ಘಳಿಗೆ
ಅಮೃತ ಘಳಿಗೆ.
*****
ಗಾಢ ಸಂತಸದ ಮೌನ ಘಳಿಗೆಯಲಿ
ನಿರಾಳವಾಗಿ
ಸುಂದರ ಸಜ್ಜೆ ಸೇರಿ
ಜೀವ ಸಂಗಾತಿಯನು ಬಾಚಿ ತಬ್ಬಿ
ಎದೆಗೆ ಎದೆ ಬೆಸೆದು
ಪ್ರೇಮ ಸಮಾಧಿಯಲಿ ಐಕ್ಯವಾಗಿ
ಮೈಯಾದ ಮೈಯಾಲ್ಲಾ ಹುಟ್ಟು ಹಿಂಡಿದಂತಾಗಿ
ಜೇನು ಬೆವರು ಧಾರೆ ಧಾರೆಯಾಗಿ ಹರಿದು
ಜೀವಧಾತು
ಸ್ವಾತಿ ಚಿಪ್ಪನು ಸೇರೋ ಘಳಿಗೆ
ಅಮೃತ ಘಳಿಗೆ.
*****