ಇಂದು ಜೈವಿಕ ತಂತ್ರಜ್ಞಾನದಿಂದ ಮುಂದಿನ ದಿನಗಳನ್ನೂ ವರ್ಣರಂಜಿತ ಗೊಳಿಸಬಹುದು. ಹೊಸ ಸೃಷ್ಟಿಗಳೊಂದಿಗೆ ಚಕ್ಕಂದವಾಡುವ ವಿಜ್ಞಾನಿಗಳು ವಿಶ್ವವನ್ನು ಬೆರಗುಗೊಳಿಸುತ್ತಲೇ ಹೋಗುತ್ತಾರೆ. ಮಲ್ಲಿಗೆ ಹೂವಿಗೆ ಗುಲಾಬಿ ಬಣ್ಣ, ಗುಲಾಬಿಯ ಮೇಲೆ ದುಂಬಿಯ ಚಿತ್ತಾರ! ಹೀಗೆ ಇನ್ನು ಏನೇನೋ ಮಾಯಾ ಸೃಷ್ಟಿಯನ್ನುಗೊಳಿಸುವ ಶೋಧಗಳು ನಿತ್ಯವೂ ನಡೆಯುತ್ತವೆ. ಇದಕ್ಕೆ “ವಿಜ್ಞಾನದ ಮ್ಯಾಜಿಕ್ಸ್” ಎನ್ನಲೂಬಹುದು. ಯಾವುದೋ ಮೂಲ ಜೀವಾಣುವಿಗೆ ಇನ್ನೊಂದು ಜೀವದ ಅಣುವನ್ನು ಇಂಜೆಕ್ಟ್ ಮಾಡಿ ಎರಡೂ ಜೀವಗಳ ಗುಣಧರ್ಮವನ್ನು ವ್ಯಕ್ತಗೊಳಿಸುವ ಜೈವಿಕ ತಂತ್ರಜ್ಞಾನದ ಆವಿಷ್ಕಾರದ ಫಲವಾಗಿ ೨೦೫೦ ನೆ ಇಸವಿಗೆ ಬೆರಗುಗೊಳಿಸುವ ವಾಸ್ತವ ಚಿತ್ರ ಮೂಡುತ್ತದೆ!
*****
