ಗಂಭೀರತೆ ಮೆರೆಯಲಿ

ಈ ಮನವಾಗದಿರಲಿ ನಿತ್ಯ ಚಂಚಲತೆ
ವೈರಾಗ್ಯದ ಭಾವದಿ ತಾನು ಮೆರೆಯಲಿ
ಹೆಜ್ಜೆ ಹೆಜ್ಜೆಗೂ ಎಲ್ಲವೂ ಮರೆಯಲಿ
ಗಂಭೀರತೆ ಭಾವದಿ ತಾನು ಬೆರೆಯಲಿ

ಮೇಲಿಂದ ಮೇಲೆ ಅಲೆಗಳು ಬಂದಿರಲು
ಸಾಗರ ತಾನು ಭೋರ್ಗರೆಯದು
ನದಿಗಳೆಲ್ಲ ಸಮುದ್ರವ ಸೇರುತ್ತಿರಲು
ಧಿಕ್ಕಾರ ಭಾವದಿ ತಾ ಉಕ್ಕಿ ಹರಿಯದು

ವಿಷಯ ಭೋಗಾಸೆ ಅವರ ಕಾಡಿರಲು
ಸಂತ ಮಹಾಜನ ಮೈಲಿಗೆಯಾಗರು
ಕಷ್ಟಗಳೆ ನಿತ್ಯ ಅವರ ಮಳೆ ಆಗಿರಲು
ಮೌನದಿ ಪಡೆವರು ಭಯ ಭೀತರಾಗರು

ದುಃಖ ಸುಖಗಳೆಲ್ಲ ಬಿಸಿಲ ನೆರಳ ಭ್ರಾಂತಿ
ಹೀಗೆಂದು ಎಲ್ಲವೂ ಸುಲಭವಾಗಿರಲಿ
ಚಂಚಲತೆಯ ತಾಣದಿ ಅಚಲತೆ ತುಂಬಿಕಲಿ
ಮನ ಮಗಿಮಗಿಸುವ ಮಾಣಿಕ್ಯ ವಿಠಲನಾಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು ಓದುವರು ನನ್ನ ಕವಿತೆ?
Next post ಅರ್ಥ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…