ಯಾರು ಓದುವರು ನನ್ನ ಕವಿತೆ?

ಯಾರು ಓದುವರು ನನ್ನ ಕವಿತೆ?
ಯಾರು ಹಾಡುವರು ನನ್ನ ಕವಿತೆ?|
ಯಾರು ಓದದಿದ್ದರೇನು
ಯಾರು ಹಾಡದಿದ್ದರೇನು|
ಬರೆಯುವೆ ನನ್ನ ಆನಂದಕೆ
ಬರೆಯುವೆ ನನ್ನಯಾ ಸಂತೋಷಕೆ|
ಬರೆಯುವೆ ಕನ್ನಡ ಪರಂಪರೆಯ
ಉಳಿಸಿ ಬೆಳೆಸಿದ ಹೆಮ್ಮೆಯ ಆತ್ಮತೃಪ್ತಿಗೆ||

ನೂರಾರು ಕನ್ನಡ ಕವಿಗಳ
ಸಾಹಿತ್ಯವ ಓದುವೆ
ಅವರಂತೆ ಬರೆಯಲು
ನಾ ಪ್ರಯತ್ನಿಸುವೆ|
ಅವರೆಲ್ಲರ ಕನ್ನಡತನವ
ಕಲಿಯಲಿಚ್ಚಿಸುವೆ
ಅವರಂತೆ ಕನ್ನಡ ಮೈಗೂಡಿಸಿ
ಬಾಳಲು ಆಶಿಸುವೆ ||

ಕನ್ನಡವಾಗಿದೆನ್ನ ಈ ತನು ಮನ
ಕನ್ನಡವಾಗಿದೆನ್ನ ಜೀವನ|
ಕನ್ನಡ ಬೆಳೆಸಲನುವಾಗಿ
ಸಾಗಿದೆನ್ನ ಅಳಿಲು ಸೇವೆ|
ಕುಗ್ಗದೆಂದಿಗೂ ಕರಗದೆಂದಿಗೂ
ಬತ್ತದೆಂದಿಗೂ ಬಾಡದೆಂದಿಗೂ
ಆರದೆಂದಿಗೂ ಈ ಮಹದಾಸೆ|
ಕನ್ನಡವೆಂದಿಗೂ ಅಳಿಯುವುದಿಲ್ಲ
ಕನ್ನಡ ಅಳಿಸಲು ಸಾಧ್ಯವಿಲ್ಲ|
ಕನ್ನಡಕ್ಕಿಂತ ಸುಂದರ, ಸುಮಧುರ
ಮುದ್ದಾದ ಲಿಪಿಯ ಭಾಷೆ ಇನ್ನೊಂದಿಲ್ಲ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿ ಹುಡುಗಾಟ
Next post ಗಂಭೀರತೆ ಮೆರೆಯಲಿ

ಸಣ್ಣ ಕತೆ

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…