“ಮಳೆಹನಿ ಬೊಗಸೆಯಲಿ ಹಿಡಿದು ಕೆರೆ ತುಂಬಿಸೋಣ ಬಾ! ಗೆಳತಿ!” ಎಂದು ಕರೆದ ಅವನು. ನಂಬಿ ಎದೆ ಬಿಂದಿಗೆಯ ತುಂಬಿ ಬಂದವಳು ಆ ಮುಗ್ದೆ. ಹನಿ ಹನಿಯಲ್ಲಿ ಕೆರೆ ತುಂಬಿದಾಗ ಮತ್ತೊಂದು ಜಾಲ ಹಾಕಿ ಹತ್ತಿರಕೆ ಕರೆದ “ನವಿಲು ಗರಿ ಮರಿ ಹಾಕಿದೆ ನೋಡಲು ಬಾ ಹತ್ತಿರಕೆ” ಎಂದ. ಅಗ ಅವಳು ಗರಿಗೆದರಿ ಬಂದು ಗರಿ ಗರಿಯ ಒಂದೊಂದು ಎಳೆಯಲ್ಲೂ ಪ್ರೀತಿ ಹುಡುಕಾಡಿದಳು. ಅವಳಿಗೆ ಪ್ರೀತಿ ಮರಿ ಹುಟ್ಟುತಿರುವುದು ಗೊತ್ತಾಗಲೇ ಇಲ್ಲ. ಗರಿ ಗರಿ ಉದರಿಸಿ ನೋಡಿದರೂ ಅವಳಿಗೆ ಕಂಡದ್ದು ಬರಿದಾದ ಬಾಳು ಮಾತ್ರ.
*****