ಅರ್ಥ

ಅರ್ಥ

ಯಸ್ಯಾರ್ಧಾಸ್ಸ ಮಹಾಭಾಗೋ ಯಸ್ಯಾರ್ಥಾ ಮಹಾಗುಣಾಃ |
ಹರ್ಷಃ ಕಾಮಶ್ಚ ದರ್ಪಶ್ಚ ಧರ್‍ಮಃ ಕ್ರೊಧಶ್ಚಮೋ ದಮಃ ||
ಅರ್ಧಾದೇತಾನಿ ಸರ್ವಾಣಿ ಪ್ರವರ್ತಂತೇ ನರಾಧಿಪ ||

ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳು ಪುರುಷಾರ್ಥಗಳೆಂದು ಗಣಿಸಲ್ಪಟ್ಟಿರುವುವು. ಇವುಗಳೆಲ್ಲಲಾ ಅರ್ಥವು ಇಹಪರಸೌಖ್ಯಗಳಿಗೆ ಅತ್ಯಂತ ಸಾಧಕವಾದದ್ದು. ಧರ್ಮದಿಂದ ಯಾರು ಅರ್ಥವನ್ನು ಸಂಪಾದಿಸುವರೋ, ಹಾಗೆ ಸಂಪಾದಿಸಿದ ಅರ್ಥವನ್ನು ಯಾರು ಸರಿಯಾಗಿ ರಕ್ಷಿಸಿಕೊಳ್ಳುವರೋ, ಹಾಗೆ ರಕ್ಷಿಸಲ್ಪಟ್ಟ ಅರ್ಥವನ್ನು ಯಾರು ಧರ್ಮದಿಂದಲೂ, ವಿತರಣೆಯಿಂದಲೂ, ಮಿತವ್ಯಯಾಸಕ್ತಿಯಿಂದಲೂ ವ್ಯಯಮಾಡುವರೋ ಅವರು ಈ ಲೋಕದಲ್ಲಿ ಸುಖವಾಗಿರುವುದಲ್ಲದೆ, ಲೋಕಾಂತರದ ಸುಖವನ್ನು ಅಪ್ರಯತ್ನಪೂರ್ವಕವಾಗಿ ಹೊಂದುವರು. ಆದುದರಿಂದ ಧನವನ್ನು ಹೇಗೆ ಧರ್ಮದಿಂದ ಅರ್ಜಿಸಬೇಕೋ ಅದನ್ನು ತಿಳಿದುಕೊಳ್ಳುವುದು ಸರ್ವರಿಗೂ ಮುಖ್ಯ ಕರ್ತವ್ಯವು. ಧನವಂತನು ಕುಲೀನನೆಂಬುದಾಗಿಯೂ, ಚತುರನೆಂಬುದಾಗಿಯೂ, ಸಕಲ ಗುಣ ಸಂಪನ್ನನೆಂಬುದಾಗಿಯೂ, ವಿದ್ಯಾವಂತನೆಂಬುದಾಗಿಯೂ ಭಾವಿಸಲ್ಪಡುವನು. ದ್ರವ್ಯವಂತನನ್ನು ಸರ್ವರೂ ಆಶ್ರಯಿಸುವರು. ಧನಹೀನನಾದವನು ಸತ್ಕುಲಪ್ರಸೂತನಾಗಿದಾಗ್ಯೂ, ವಿದ್ಯಾವಂತನಾದಾಗ್ಯೂ, ಸದ್ಗುಣವುಳ್ಳವನಾದಾಗ್ಯೂ ಪೂಜ್ಯನಾಗುವುದು ಕಷ್ಟ. ತಂದೆತಾಯಿಗಳು, ಒದಹುಟ್ಟಿದವರು, ಹೆಂಡತಿ, ಮಕ್ಕಳು, ಬಂಧುಗಳು, ಸ್ನೇಹಿತರು ಇವರಲ್ಲಿ ಯಾರೂ ಧನಹೀನನನ್ನು ಲಕ್ಷ್ಯಮಾಡುವುದಿಲ್ಲ. ಅನ್ನ ವಸ್ತ್ರಗಳನ್ನು ಸಂಪಾದಿಸಿಕೊಂಡು ಪರಾಧೀನರಾಗದೆ ಕೂಡಿದಮಟ್ಟಿಗೆ ಸ್ವತಂತ್ರವಾಗಿ ಬದುಕುವ ಪ್ರಯತ್ನವನ್ನು ಮಾಡುವುದು ಸರ್‍ವರಿಗೂ ಮುಖ್ಯ ಕರ್ತವ್ಯವು. ಆದುದರಿಂದ ಧನಾರ್ಜನೆಯ ಉಪಾಯಗಳನ್ನು ತಿಳಿದುಕೊಂಡು ಅವುಗಳನ್ನು ಆಚರಣೆಗೆ ತಂದುಕೊಳ್ಳುವದು ಸರ್ವರಿಗೂ ಮುಖ್ಯ ಕರ್ತವ್ಯವು, ನಿರ್ಧನನಾದವನ ಮನೋರಥಗಳೆಲ್ಲವೂ ಬೇಸಿಗೆಕಾಲದ ತೊರೆಗಳಂತೆ ಶುಷ್ಕವಾಗುವುವು. ಸಮಸ್ತ ದುಃಖಗಳಿಗಿಂತಲೂ ದಾರಿದ್ರ್‍ಯವು ಅತ್ಯಂತ ದುಸ್ಸಹವಾದದ್ದು. ಆದುದರಿಂದಲೇ ಕುಂತಿಯು ತನ್ನ ಸೊಸೆಯಾದ ಸುಭದ್ರೆಗೆ ಆಶೀರ್ವಾದ ಮಾಡಿದಾಗ ಭಾಗ್ಯವಂತನನ್ನು ಹೆರು ಎಂದು ಹರಿಸಿದಳು. ಶೂರರಾಗಿಯೂ ಪಂಡಿತರಾಗಿಯೂ ಇದ್ದ ಮಕ್ಕಳನ್ನು ಪಡೆದಾಗ್ಯೂ ತನಗೂ ತನ್ನ ಮಕ್ಕಳಿಗೂ ವನವಾಸಾದಿ ಕಷ್ಟಗಳು ಪ್ರಾಸವಾದದ್ದನ್ನು ಸ್ಮರಿಸಿಕೊಂಡು ಕುಂತೀದೇವಿಯು ಈ ರೀತಿಯಲ್ಲಿ ಹರಸಿರಬಹುದು. ದ್ರವ್ಯವು ಸಂತೊಷಕ್ಕೂ, ಇಷ್ಟಾರ್ಥ ಪೂರ್ತಿಗೂ, ದರ್ಪಕ್ಕೂ, ಧರ್ಮಕ್ಕೂ, ಇಹಪರಸಾಧನೆಗಳಿಗೂ ಅತ್ಯಂತ ಸಾಧಕವಾಗುವುದು. ಈ ವಿಷಯಗಳನ್ನು ಪರ್ಯಾಲೋಚಿಸಿ ಎಲ್ಲಾ ವಿದ್ಯಾರ್ಥಿಗಳೂ ಧರ್ಮದಿಂದ ಧನವನ್ನು ಅರ್ಜಿಸುವುದನ್ನೂ ಆರ್ಜಿಸಿದ ದ್ರವ್ಯವನ್ನು ವ್ಯರ್ಥವಾಗಿ ಕಳಿಯದೆ ಇರುವುದನ್ನೂ ಅತ್ಯಾವಶ್ಯಕವಾದ ವ್ಯಯಗಳಿಗೆ ವಿನಿಯೋಗಿಸುವುದನ್ನೂ ತಿಳಿದುಕೊಳ್ಳುವುದು ಆವಶ್ಯಕ. ಈ ವಿಷಯಕ್ಕೆ ವಿದ್ಯಾರ್ಥಿಗಳ ಗಮನವು ಹೇಗೋ ಹಾಗೆ ಇತರರ ಗಮನವೂ ಕೊಡಲ್ಪಡುವುದೆಂದು ನಂಬಿದ್ದೇವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಭೀರತೆ ಮೆರೆಯಲಿ
Next post ನೀ ನಗಲೇನು ಮನವೆ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys