ನಂಗ ನಿಂದೆ ಆದ ಚಿಂತೆ
ನೀ ಹಿಂಗ ಮಾಡದ್ರೆ ಹೆಂಗೆ
ನನ್ನ ಆಸೆಯ ಕನಸ್ಸುಗಳು
ನನಸ್ಸು ಮಾಡುವೇ ಹೇಗೇ?

ನಾನು ನಂಬಿದೆ ನಿನನು
ನೀ ಕೈ ಬಿಟ್ಟರೆ ಹೆಂಗೇ?
ನಂಬಿಕೆ ದ್ರೋಹ ಬಗ್ಗೆಯದೆ
ನನ್ನಗೆ ನೀ ಸುಖಿ ಬಾಳ್ವೆ ನೀಡುವೇ?

ನಂಬಿದ್ರೆ ನಂಬು ಬಿಟ್ರೆ ಬಿಡು
ನಾ ನೀನನು ಮರೆಯಲಾರೆ
ನಿನ್ನನ್ನು ಬಿಟ್ಟು ನಾ ಇರಲಾರೇ
ಬಂಧು-ಬಾಂಧವರನ್ನು ಬಿಟ್ಟು ನೀನಿರುವೇ?

ನಾ ನಿನ್ನೊಂದಿಗೆ ಬಾಳುವೇ
ಆಸೆ ಇಡೇರುವವರೆಗೆ ನಾ ಕೊರಗುವೆ
ಆಸೆ ವೇಷದ ಪಾಷಕ್ಕೆ ತಳಬೇಡವೆಂದು
ನಾನು ನಿನ್ನನ್ನು ಕೈ ಮುಗಿದು ಬೇಡುವೆ.
*****