ಅವನೊಬ್ಬ ಕಾಮುಕ. ಮೊದಲ ಹೆಂಡತಿಗೆ ಮೂರು ಮಕ್ಕಳಾದ ಮೇಲೆ ಅವಳನ್ನು ಬಿಟ್ಟು ಎರಡನೇಯ ಮದುವೆ ಆದ. ಅವಳಿಗೆ ಎರಡು ಮಕ್ಕಳಾದ ಮೇಲೆ ಮೂರನೇಯವಳನ್ನು ಕಟ್ಟಿ ಕೊಂಡ. “ನನ್ನದು ಇದೀಗ ಪುನರ್ ಜನ್ಮ. ನಾನು ಇವಳೊಂದಿಗೆ ಸುಖವಾಗಿರುವೆ. ನಮಗೊಂದೇ ಕೊರತೆ ಎಂದರೆ ಸಂತಾನ ಹೀನತೆ” ಎಂದ. ಜನರು ಇವನ ಕತೆ ಕೇಳಿ ತಲೆ ಚಚ್ಚಿಕೊಂಡರು.
*****