ನೂರು ಜನ್ಮದಲ್ಲೂ ನನಗೆ
ನೀನೇ ತಾಯಿ ಯಾಗಬೇಕೆಂಬಾಸೆ
ನನ್ನ ಮನದಿ ಪ್ರಕಟವಾಗಿದೆ|
ಪ್ರತಿ ಜನ್ಮದಲ್ಲೂ
ನೂರು ವರುಷ ಬಾಳಬೇಕೆಂಬುದೇ
ನನ್ನಾಸೆಯಾಗಿದೆ|
ನಿನ್ನ ಕಂದನಾಗಿ ಜನಿಸಿ ಸದಾ
ಕನ್ನಡದ ಸೇವೆ ಮಾಡುವಾಸೆ
ಮನದಿ ತುಂಬಿ ಹರಿದಿದೆ||
ಈ ನೆಲ ಜಲದ ಸತ್ವಹೀರಿ
ವಿಶಾಲವಾಗಿ ಬೆಳೆದು ನಿಂತು
ನೂರಾರು ಕನ್ನಡಿಗರಿಗೆ ಆಸರೆ
ನೀಡುವಾಸೆಯಾಗಿದೆ|
ಕನ್ನಡದ ಕಂಪ ಹೀರಿ ಬೆಳೆದು
ಪ್ರತೀ ಜನುಮ ಜನುಮದಲ್ಲೂ
ಕನ್ನಡ ಕೀರ್ತಿ ಬೆಳೆಗುವಾಸೆಯಾಗಿದೆ||
ಯವಜನರ ಧಮನಿಧನಿಯಲಿ
ಕನ್ನಡತನದ ರೋಮಾಂಚನ ತುಂಬಿ
ಮುನ್ನಡೆಸೋ ಆಸೆಯಾಗಿದೆ|
ನಮ್ಮಲ್ಲಿರುವ ಭೇದ ಭಾವನಳಿಸಿ
ಒಟ್ಟಿಗೆ ಬಾಳುವುದ ಶಕ್ತಿ ತಿಳಿಸಿ|
ಎನೇ ಕಷ್ಟ ಬಂದರೂ ಭಾಷೆಗೆ
ಎದುರಿಸಿ ಜಯವ ತಂದುಕೊಡುವ
ಭಾಷೆ ತೊಡುವಾಸೆಯಾಗಿದೆ||
*****