ಸುಗ್ಗಿ

ಹೆಜ್ಜೆ ಹೆಜ್ಜೆ ಗೀತೆ ಹಾಡಿ
ಘಳಿರ್ ಘಳಿರ್ ಘಳಿರ್
ಎಳ್ಳು ಸಜ್ಜೆ ರಾಗಿ ಜೋಳ
ಭತ್ತದ ರಾಶಿ ರಾಶಿ ಸುಗ್ಗಿಯಮ್ಮಾ ||

ಕಷ್ಟ ಪಟ್ಟು ರಟ್ಟೆ ಮುರಿದು
ಬೆವರು ಸುರಿಸಿ ದುಡಿದ ರೈತ
ವರುಷ ವರುಷ ಅವಗೆ ಹರುಷ
ತುಂಬಿ ರಾಶಿ ರಾಗಿ ಸುಗ್ಗಿಯಮ್ಮಾ ||

ಕಬ್ಬು ಹೆಸರು ತೊಗರಿಬೆಳೆ
ಅವರೆ ಕಡಲೆಕಾಯಿ ಎಳ್ಳು
ಅಲಸಂದೆ ಎಲ್ಲಾ ಬೆಳೆಯ ಸುಗ್ಗಿ
ಬೆಳ್ಳಿ ಕಡಗ ಹೈಕಳ ಜೋಡಿಯಮ್ಮಾ ||

ತಳಿರು ತೋರಣ ಬಾಗಿ ಬಾಗಿಲ
ಬಾಳೆ ಹಾಸಿ ಕುಡಿಕೆ ಮಡಿಕೆಯ
ಪೂಜೆ ಮಾಡಿ ಕುಣಿದು ನಲಿದು
ಪುಟ್ಟ ಮಕ್ಕಳ ಸೆಳೆದ ಆರತಿಯಮ್ಮಾ ||

ಸ್ನೇಹ ಬಾಳ್ವೆ ತರುವ ಸುಗ್ಗಿ
ಮನೆ ಮನವನು ಅರಳಿಸಿ
ಜಗಕೆ ಉಸಿರ ತುಂಬಿ ನಗಿಸಿ
ಹರುಷ ತಂದಾನೋ ತಾನೋ ಸಂಕ್ರಾಂತಿಯಮ್ಮಾ |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಯಿ ಬಾಯಿಗೆ ಚಿಂದಿಯಾದ ಪೈಜಾಮ…!
Next post ಕಾದಿಹೆನು ನಿನಗಾಗಿ…..

ಸಣ್ಣ ಕತೆ