ಅರುಣೋದಯವಾಯ್ತು
ಮುದದಿಂದ ಹೊಸವರುಷದ
ಹೊಸ ಹಗಲಲ್ಲಿ ನಸುನಾಚುವ
ಮೊಗದಲ್ಲಿ ||

ಇಬ್ಬನಿಯ ತಂಪು ನೀಡಿ
ಕಾಲಸೆರೆಯಲ್ಲಿ ನಮ್ಮನು ಮೀಟಿ
ಹಗಲು ಇರುಳು ಕಣ್ಣಾಮುಚ್ಚಾಲೆ
ಆಡಿಸಿ ಹರುಷವನು ನೀಡಿತು
ವರುಷದಲ್ಲಿ ||

ವರುಷ ಕಳೆದು ವರುಷ
ಬರಲು ದಿನಗಳುರುಳೀ
ನೋವು ನಲಿವು ಉಯ್ಯಾಲೆ ಆಡಿ
ತೂಗಿ ಕರೆಯಿತು ಮತ್ತೆ
ಹರುಷದಲಿ ||
*****