ನೀನೇ ನನ್ನ ಕಣ್ಣು

ನೀನೇ ನನ್ನ ಕಣ್ಣು
ನೀನಿರದೆ ನಾನು ಕುರುಡು
ನಿನ್ನ ಪ್ರೀತಿ ಮಾತು
ಅದು ಇರದೆ ಬದುಕು ಬರಡು
ನಂಬು ನನ್ನ ನಲ್ಲೆ
ಇಲ್ಲವೆ ಕೊಲ್ಲ್ಲು ಇಲ್ಲೆ /ಪ//

ನಿನ್ನ ಮೊದಲ ನೋಟ
ಕಣ್ಗೆ ಅತ್ಯಪೂರ್ವ
ಅದರ ರೆಪ್ಪೆ ಬಡಿತ
ತಕ್ಷಣ ಪ್ರೇಮ ಪರ್ವ
ಇದು ಎಲ್ಲ ನಿನ್ನಿಂದ
ಆ ಕ್ಷಣವೆ ಜಗವು ಅಂದ

ನೀನು ಇಟ್ಟ ಹೆಜ್ಜೆ
ಅಲ್ಲಿ ಪ್ರೇಮ ಸ್ಮಾರಕ
ನೀನು ಹೋದ ದಿಕ್ಕು
ನನಗಿನ್ಯಾವ ದಿಕ್ಕು
ಹೇಳೆ ನನ್ನ ಒಲವೆ
ನೀನಿರದೆ ಯಾವ ಬಲವೆ?

ದಾರಿ ಕಾಯುತಿರುವೆ
ನೀ ಹೋದ ದಿಕ್ಕಿನಲ್ಲಿ
ಕಾಲ ನೂಕುತಿರುವೆ
ನೀ ಬರುವ ದಾರಿಯಲ್ಲಿ
ನಂಬು ನನ್ನ ಚಿನ್ನ
ಮಾಡಿಹೆ ಹೃದಯ ಕನ್ನ

ಕಾಡಬೇಡ ಇನ್ನೂ
ತೋಳು ಸೇರು ಇನ್ನು
ಕೊಟ್ಟು ತುಟಿಯ ಜೇನು
ಹೀರು ಪ್ರೀತಿಯನ್ನು
ಬೇಡ ಇನ್ನು ಅಂತರ
ಇದಾಗಲಿ ನಿರಂತರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರುಣೋದಯ
Next post ಕನ್ನಡ ಚಳವಳಿಯ ದಿಕ್ಕುದಿಸೆ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…