
ನನ್ನ ವಾಣಿಯ ನೀನು ವರಿಸಿದವನೇನಲ್ಲ ನಾ ಬಲ್ಲೆ ; ಹಾಗೆಂದೆ ಕಾವ್ಯಕ್ಕೆ ಕೃಪೆ ಬಯಸಿ ಕೃತಿಕಾರ ಬರೆದ ಅಂಕಿತದ ನುಡಿಯನ್ನೆಲ್ಲ ಬದಿಸರಿಸಬಹುದು, ನಿನಗಿಲ್ಲ ಯಾವುದೆ ತಡೆ. ಚೆಲುವನಿರುವಂತೆ ನೀ ಕುಶಲಮತಿಯೂ ಹೌದು, ಹಾಗೆಂದೆ ನನ್ನ ಮೆಚ್ಚಿಕೆಯಾಚೆ ಬೆಳೆ...
ಮಾಯಾಜಾಲ ಒಂದು ದಿನ ಕೈಕಾದೇವಿಯ ತಂದೆ ಕೇಕೆಯ ರಾಜನು ಬಂದು ತನ್ನ ಮೊಮ್ಮಕ್ಕಳಾದ ಭರತನನ್ನು ಶತ್ರುಘ್ನನನ್ನು ಅವನ ಮಡದಿಯರನ್ನು ಸ್ವಲ್ಪಕಾಲ ಇರಿಸಿಕೊಂಡು ಸತ್ಕಾರ ಮಾಡುತ್ತೇನೆಂದು ಕರೆದುಕೊಂಡು ಹೋದನು. ಇತ್ತ ವಾಯೆಯು ತನ್ನ ಮಾಯಾಜಾಲವನ್ನು ಬೀಸಿ ಕ...
ಬಾಳ ಬಣವೆಯ ಕೆಳಗೆ ಮತ್ಸರದ ಕಿಡಿ ಹೊತ್ತಿ! ಸುಟ್ಟು ಹಾಕುವುದಯ್ಯೋ! ನಿರ್ಬುದ್ದ ಕಿಡಿಗೇಡಿ ದೌರ್‍ಮನಸ್ಯವು ಒಂದು ದುಡಿಯುತಿದೆ ಸಂತತವು ಆನಂದವನು ಕೆಡಿಸಿ ದುಮ್ಮಾನವನು ಬೆಳೆಸಿ ಸೈತಾನ ನೃತ್ಯವನು ಹಾಕುತಿದೆ ಧೀಂಕಿಟ್ಟು ಋತವೆಲ್ಲ ಕಾಲ್ದೆಗೆದು ಹಾಳ...
ಭಾವಗೀತೆ ಹಾಡಲೇನು | ಹೃದಯ ಭಾರ ಇಳಿಸಲೇನು || ಪ || ಕುಬ್ಜವಾಗಿ ನಿಂತ ನಾನು ನೂರು ಕನಸ ಕಂಡೆನು | ಕನಸನೆಲ್ಲ ಹಿಡಿಯ ಹೋಗಿ ಬರಿಯ ಶೂನ್ಯ ಕಂಡೆನು ||೧|| ಆಸೆ ಎಂಬ ತೇರನೇರಿ ದೂರ ದೂರ ಹೋದೆನು | ನೆನೆಸದಷ್ಟು ದೂರ ಹೋಗಿ ಗುರಿಯನೆಲ್ಲೂ ಕಾಣೆನು ||...
ಬರಡಾಗುತಿದೆ ಬದುಕು ಭೂಮಿಗೆ ಮಳೆಯಿಲ್ಲದೆ ಜಾಲಾಡಿದರೂ ಜಲವಿಲ್ಲ ಜೀವಿಗಳಿಗೆ ಉಳಿಗಾಲವಿಲ್ಲ. ಮಾನವರೆಲ್ಲೋ ಸೇರಿಸುವರು ಅಲ್ಲಿ ಇಲ್ಲಿ ಹೊತ್ತು ತಂದು ಮೂಕ ಪ್ರಾಣಿಗಳಿಗೆ ಬಂದಿದೆ ಜೀವಕ್ಕೆ ಕುತ್ತು. ವರುಣ ನೀ ಕರುಣೆ ತೋರಿ ಸುರಿಸು ಮಳೆ ಹನಿಯನ್ನು ಜ...
ಭೂಮಿಯಾಳದಲ್ಲಿ ಮಾತ್ರ ಈಜುವ ಪುರಾವೆಗಳಿವೆ ಈ ಮರದ ಬೇರಿಗೆ ಹೆಬ್ಬಂಡೆಯೂ ಮಿದು ಮಣ್ಣಾಗಿ ಹುಡಿ ಹುಡಿಯೂ ಮಿಸುಕುತ್ತದಂತೆ ಕಾಣಲಾರದು ನಮ್ಮಂಥ ಪಾಮರರಿಗೆ! ಈ ಮರದ ಕೊಂಬೆ ಕೊಂಬೆಗಳಲ್ಲಿ ನೇತು ಬೀಳಬಹುದು ಯಾರೂ ಉಯ್ಯಾಲೆಯಾಡಬಹುದು ಹತ್ತಿ ಕುಪ್ಪಳಿಸಿ ...
ಸಾಹಿತ್ಯ ಸೃಷ್ಟಿ ಒಂದು ಕಾಯಕವೇ ಅಥವಾ ಸ್ಫೂರ್ತಿಯೇ? ಸ್ಫೂರ್ತಿಯಾಗಿದ್ದರೆ ಅದರ ಅರ್ಥವೇನು? ಇಂಥ ಪಶ್ನೆಗಳಿಗೆ ಬಹುಶಃ ಉತ್ತರವಿಲ್ಲ. ಬರೆಯುವ ಮೊದಲು ಹಲವರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ; ಹಲವರು ಮಾಡಿಕೊಂಡಿರುವುದಿಲ್ಲ. ಶಿವರಾ...
ಬಾ ನೊಳವೆ, ಬಾ ನೊಳವೆ, ಬಾ ನನ್ನ ಮನೆಗೆ, ಬಾನೊಳಗೆ ಹಾರಿ ಬಲು ದಣುವಾಯ್ತು ನಿನಗೆ. ನೀನೊಮ್ಮೆ ಬಾ, ನನ್ನ ಹೊಸ ಮನೆಯ ನೋಡು; ಈ ನೂಲಿನಾ ಚಾಪೆಯಲಿ ಬಂದು ಕೂಡು.” ಆ ಮಾತಿಗಾ ನೊಳವು “ಎಲೆ ಜೇಡ, ಜೇಡ! ಈ ಮನೆಯ ಉಪಚಾರ, ಹಾ! ಬೇಡ ಬೇಡ! ...
ಬರಿಗಾಲ ತುಳಿತವನು ಬರಿಗೈಯ ಥಳಿತವನು ಸೈರಿಸಬಲ್ಲಳೆಮ್ಮಮ್ಮ ಮಣ್ಣಮ್ಮ ಪ್ರೀತಿಯೊಳೆ ಬರಿ ರೈತನೇನು ಮಾಡಿದರು ಮಕ್ಕಳಾಟದ ರಗಳೆ ಜಾರ ಯಂತ್ರದೊಳೆಲ್ಲ ಹಸುರುಡೆಯ ಸೂರೆ ಪರಿಸರದ ಪಾಠವಿನ್ನೇನು? ಆರಕ್ಷಕರ ಕೈ ಮೀರೆ – ವಿಜ್ಞಾನೇಶ್ವರಾ *****...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...















