ಬರಡಾಗುತಿದೆ ಬದುಕು
ಭೂಮಿಗೆ ಮಳೆಯಿಲ್ಲದೆ
ಜಾಲಾಡಿದರೂ ಜಲವಿಲ್ಲ
ಜೀವಿಗಳಿಗೆ ಉಳಿಗಾಲವಿಲ್ಲ.

ಮಾನವರೆಲ್ಲೋ ಸೇರಿಸುವರು
ಅಲ್ಲಿ ಇಲ್ಲಿ ಹೊತ್ತು ತಂದು
ಮೂಕ ಪ್ರಾಣಿಗಳಿಗೆ ಬಂದಿದೆ
ಜೀವಕ್ಕೆ ಕುತ್ತು.

ವರುಣ ನೀ ಕರುಣೆ ತೋರಿ
ಸುರಿಸು ಮಳೆ ಹನಿಯನ್ನು
ಜೀವಿಗಳಿಗೆಲ್ಲ ನೀನೇ ಜೀವ
ತಣಿಸು ಬಾ ಜಲದ ದಾಹ.
*****